ಅಕ್ರಮ ಹಣ ವರ್ಗಾವಣೆ | ವಿಚಾರಣೆ ದಿನಾಂಕ ಬದಲಿಗೆ ಕೋರಿ ಸಿಎಂ ಸೊರೇನ್‌ ಅರ್ಜಿ; ಮನವಿ ತಿರಸ್ಕೃತ

  • ನಿಗದಿತ ದಿನಾಂಕದಂದೇ ವಿಚಾರಣೆಗೆ ಹಾಜರಾಗಬೇಕು
  • ತಾಂತ್ರಿಕ ಕಾರಣದಿಂದ ಸೊರೇನ್‌ ಮನವಿ ತಿರಸ್ಕೃತ

"ತಾನು ವಿಚಾರಣೆಗೆ ಹಾಜರಾಗುವ ದಿನಾಂಕವನ್ನು ಬದಲಾಯಿಸಬೇಕು" ಎಂದು ಕೋರಿ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ಸಲ್ಲಿಸಿದ್ದ ಮನವಿಯನ್ನು ಜಾರಿ ನಿರ್ದೇಶನಾಲಯ ತಿರಸ್ಕರಿಸಿದೆ. ಅಲ್ಲದೆ, ಗುರುವಾರ (ನ.17) ವಿಚಾರಣೆಗೆ ಹಾಜರಾಗುವಂತೆಯೂ ಸೂಚಿಸಿದೆ. 

"ನಿಗದಿತ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ (ಬುಧವಾರ) ಹಾಜರಾಗಲು ಅನುಮತಿ ನೀಡಬೇಕು ಎಂದು ವಿನಂತಿಸಿ ಸೊರೇನ್‌ ಅವರು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದರು. ಆದರೆ, ಮನವಿ ತಿರಸ್ಕರಿಸಿರುವ ಇ.ಡಿ, ನಿಗದಿತ ದಿನಾಂಕದಂದೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. 

"ತಾಂತ್ರಿಕ ಕಾರಣಗಳಿಂದಾಗಿ ಮುಖ್ಯಮಂತ್ರಿ ಸೊರೇನ್‌ ಅವರ ಮನವಿ ತಿರಸ್ಕರಿಸಲಾಗಿದೆ. ಮೂಲ ವೇಳಾಪಟ್ಟಿಯ ಪ್ರಕಾರ ಇ.ಡಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ನವೆಂಬರ್‌ 17ರಂದು ರಾಂಚಿಯಲ್ಲಿರುವ ತನ್ನ ಕಚೇರಿ ಬಳಿ ಭದ್ರತೆ ಹೆಚ್ಚಿಸಲು ಇ.ಡಿ ಜಾರ್ಖಂಡ್‌ ರಾಜ್ಯ ಪೊಲೀಸ್‌ ನಿರ್ದೇಶಕರಿಗೆ ಪತ್ರ ಬರೆದಿದೆ. 

AV Eye Hospital ad

ಈ ಸುದ್ದಿ ಓದಿದ್ದೀರಾ?: ಗುಜರಾತ್‌ ಚುನಾವಣೆ | ತೀವ್ರಗೊಂಡ ಬಿಜೆಪಿ ನಾಯಕರ ಅಸಮಾಧಾನ; ಪ್ರತಿಭಟನೆಗೆ ಕುಳಿತ ಬಂಡಾಯ ನಾಯಕರು

ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದ್ದು, ಈಗಾಗಲೇ ಸೊರೇನ್‌ ಆಪ್ತರನ್ನು ಬಂಧಿಸಿದೆ. ನ.1ರಂದು ಮುಖ್ಯಮಂತ್ರಿ ಸೊರೇನ್‌ ಅವರಿಗೆ ಸಮನ್ಸ್‌ ನೀಡಿದ್ದ ಜಾರಿ ನಿರ್ದೇಶನಾಲಯ ನ.3ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.

ಆದರೆ, ಸೊರೇನ್‌ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿದ್ದರು. ಬಳಿಕ, ಮತ್ತೆ ಸಮನ್ಸ್‌ ಜಾರಿ ಮಾಡಿದ್ದ ಇ.ಡಿ ನ.17ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app