ಪೊಲೀಸ್ ಠಾಣೆವರೆಗೂ ತಲುಪಿದ 'ನಿಮ್ಮದು ಬೋರಿಂಗ್‌ ಕ್ಲಾಸ್, ಮೇಡಂ' ಎಂಬ ವಿದ್ಯಾರ್ಥಿನಿಯ ಫೇಸ್‌ಬುಕ್‌ ಪೋಸ್ಟ್!

Student caned for posting teacher's pic with caption 'boring class'
  • ತೆಲಂಗಾಣದ ಕಮ್ಮರೆಡ್ಡಿ ಜಿಲ್ಲೆಯಲ್ಲಿ ಘಟನೆ
  • ಫೇಸ್‌ಬುಕ್‌ ಪೋಸ್ಟಿಗೆ ಗರಂ ಆದ ಶಿಕ್ಷಕಿ

ಶಿಕ್ಷಕರು ಮಾಡುವ ಪಾಠ ಬೇಸರ ಮೂಡಿಸಿದರೆ ವಿದ್ಯಾರ್ಥಿಗಳು ಏನು ಮಾಡಬಹುದು? ಒಂದೋ ಆ ಉಪಾಧ್ಯಾಯರ ತರಗತಿಗೆ ಚಕ್ಕರ್ ಹಾಕಬಹುದು ಅಥವಾ ತರಗತಿಯ ಕಡೆಯ ಸಾಲಿನಲ್ಲೋ ಕೂತು ಗುಸು ಗುಸು ಹರಟೆ ಹೊಡೆಯಬಹುದು. ಇದನ್ನು ನಾವು ಮಾಡಿರುತ್ತೇವೆ. ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಅದೇ ಮಾರ್ಗವನ್ನು ಅನುಸರಿಸುತ್ತಿರುತ್ತಾರೆ.

ಆದರೆ ಇಲ್ಲೊಬ್ಬ ವಿದ್ಯಾರ್ಥಿನಿ ಮಾಡಿದ ಸಣ್ಣ ಕಿತಾಪತಿಯಿಂದ ಶಿಕ್ಷಕಿಯೊಬ್ಬರು ಸಾರ್ವಜನಿಕವಾಗಿ ತಲೆತಗ್ಗಿಸುವಂತಾಗಿದೆ. ಪ್ರಕರಣ ಸದ್ಯ ಪೊಲೀಸ್‌ ಠಾಣೆಯ ಮೆಟ್ಟಿಲೇರಿದೆ. ಅಂದಹಾಗೆ ಘಟನೆ ನಡೆದಿರುವುದಿಷ್ಟು.

Eedina App

ತೆಲಂಗಾಣದ ಕಮ್ಮರೆಡ್ಡಿ ಜಿಲ್ಲೆಯ ಮಂಡನೂರು ಮಂಡಲ್‌ ನಗರದ ಖಾಸಗಿ ಶಾಲೆಯಲ್ಲಿ ಇಂಟರ್‌ ಮೀಡಿಯೇಟ್ ವಿದ್ಯಾರ್ಥಿನಿಯೊಬ್ಬರಿಗೆ ಅದ್ಯಾಕೋ ಶಿಕ್ಷಕಿ ಮಾಡುವ ಪಾಠ ಪದೇಪದೇ ಬೇಸರ ಮೂಡಿಸುತ್ತಿತ್ತೋ ಏನೋ. ಈ ಬಗ್ಗೆ ತನ್ನ ಸಹಪಾಠಿ ವಿದ್ಯಾರ್ಥಿಗಳ ಜೊತೆ ಆಗಾಗ ಹೇಳಿಕೊಂಡು ತಮಾಷೆ ಮಾಡುತ್ತಿದ್ದಳು. 

ಈ ಸುದ್ದಿ ಓದಿದ್ದೀರಾ: ಪ್ರಣಯ್‌, ರಾಧಿಕಾ ರಾಜೀನಾಮೆ ಅಂಗೀಕರಿಸಿದ ಎನ್‌ಡಿಟಿವಿ ಆಡಳಿತ ಮಂಡಳಿ

AV Eye Hospital ad

ಒಂದು ದಿನ ಈ ವಿದ್ಯಾರ್ಥಿನಿ, ತನ್ನ ಫೇಸ್‌ಬುಕ್‌ ಅಕೌಂಟಿನಲ್ಲಿ ಟೀಚರ್‌ ಚಿತ್ರವನ್ನು ಪೋಸ್ಟ್‌ ಮಾಡಿ, ನಿಮ್ಮದು ಬೋರಿಂಗ್‌ ಕ್ಲಾಸ್‌ ಎಂದು ಶೀರ್ಷಿಕೆ ನೀಡಿದ್ದಾಳೆ. ಪೋಸ್ಟ್‌ ಮಾಡಿದ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರನ್ನು ಅದು ತಲುಪಿದೆ. ಆಕೆಯ ಸ್ನೇಹಿತೆ, ಸ್ನೇಹಿತೆಯರು ಬಗೆಬಗೆಯ ಕಮೆಂಟ್‌ಗಳನ್ನೂ ಮಾಡಿದ್ದಾರೆ.

ಶೇರ್‌ ಮಾಡಿದ ಮೇಲೆ ಕೇಳಬೇಕೇ, ಬೋರಿಂಗ್‌ ಹೊಡೆಸುವ ಶಿಕ್ಷಕಿಯನ್ನು ತಲುಪಲು ಎಷ್ಟು ಹೊತ್ತು. ವಿಷಯ ಶಿಕ್ಷಕಿಗೆ ಗೊತ್ತಾಗಿದೆ. ತನ್ನ ಫೋಟೋ, ಶೀರ್ಷಿಕೆ ನೋಡಿದ್ದೇ ತಡ, ಮರುದಿನ ಹೀಗೇಕೆ ಮಾಡಿದೆ ಎಂದು ಶಾಲೆಯಲ್ಲಿ  ವಿದ್ಯಾರ್ಥಿನಿಯನ್ನು ತರಾಟೆಗೆ ತೆಗೆದುಕೊಂಡು, ಹಿಗ್ಗಾಮುಗ್ಗಾ ಬೆತ್ತದ ರುಚಿ ತೋರಿಸಿದ್ದಾರೆ.

ಶಿಕ್ಷಕಿಯ ಮತ್ತೊಂದು ಗ್ರಹಚಾರವೊ ಏನೋ, ವಿದ್ಯಾರ್ಥಿನಿಗೆ ಹಲ್ಲೆ ನಡೆಸುವ ದೃಶ್ಯವನ್ನು ಮತ್ತೊಬ್ಬ ಸಹಪಾಠಿ ವಿದ್ಯಾರ್ಥಿನಿ ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾಳೆ. ವಿಡಿಯೋ ಮತ್ತೊಮ್ಮೆ ವೈರಲ್‌ ಆಗಿದೆ.

ಎರಡೂ ಘಟನೆಗಳು ಠಾಣೆಯ ಮೆಟ್ಟಲೇರಿದ್ದು, ಸದ್ಯ ಶಿಕ್ಷಕಿಯ ಮೇಲೆ ಬಾಲ ನ್ಯಾಯ ಕಾಯಿದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.             

ನಿಮಗೆ ಏನು ಅನ್ನಿಸ್ತು?
0 ವೋಟ್
eedina app