ತಮಿಳುನಾಡು | ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ವಿಚಾರ ಮುಚ್ಚಿಟ್ಟಿದ್ದ ಮೂವರು ಶಿಕ್ಷಕರು, ಪ್ರಾಂಶುಪಾಲರ ಬಂಧನ

  • 17 ವರ್ಷದ ವಿದ್ಯಾರ್ಥಿನಿ ಮೇಲೆ ಅತಿಥಿ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ ಆರೋಪ
  • ಅತಿಥಿ ಉಪನ್ಯಾಸಕ ಕಿರಣ್ ಕರುಣ್‌ನನ್ನು ಬಂಧಿಸಿದ ತಮಿಳುನಾಡಿನ ಪೊಲೀಸರು

ಅತಿಥಿ ಶಿಕ್ಷಕನೊಬ್ಬ 17 ವರ್ಷದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಜೊತೆಗೆ ತಮಿಳುನಾಡಿನ ತ್ರಿಪುಣಿತುರಾ ಶಾಲೆಯ ಪ್ರಾಂಶುಪಾಲರು ಸೇರಿದಂತೆ ಇಬ್ಬರು ಶಿಕ್ಷಕರನ್ನು ಮಂಗಳವಾರ (ನ. 22) ಬಂಧಿಸಲಾಗಿದೆ.

ನ. 17ರಂದು ನಡೆದ ಶಾಲಾ ಕಲಾ ಉತ್ಸವದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಚಲಿಸುತ್ತಿದ್ದ ವಾಹನದಲ್ಲಿ ವಿದ್ಯಾರ್ಥಿನಿ ಮೇಲೆ ಅತಿಥಿ ಶಿಕ್ಷಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ನಾಗರಕೋಯಿಲ್ ಎಂಬ ಗ್ರಾಮದಲ್ಲಿ ಅತಿಥಿ ಉಪನ್ಯಾಸಕ ಕಿರಣ್ ಕರುಣ್ (43) ಎಂಬಾತನನ್ನು ಪೊಲೀಸರು ಸೋಮವಾರ (ನ. 21) ಬಂಧಿಸಿದ್ದಾರೆ. ಕೊಚ್ಚಿಯ ಪೊನ್ನುರುನ್ನಿ ಎಂಬಲ್ಲಿ ಶಾಲಾ ಕಲಾ ಉತ್ಸವಕ್ಕೆ ಹಾಜರಾಗಿ ಹಿಂದಿರುಗುತ್ತಿದ್ದಾಗ ಚಲಿಸುತ್ತಿದ್ದ ವಾಹನದಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದ ಅತಿಥಿ ಉಪನ್ಯಾಸಕ ತಲೆಮರೆಸಿಕೊಂಡಿದ್ದ.

ಸಂತ್ರಸ್ತೆ ಆರೋಪಿಗಳ ವಿರುದ್ಧ ದೂರು ನೀಡಿದ ನಂತರವೂ ವಿಷಯವನ್ನು ಮುಚ್ಚಿಟ್ಟ ಆರೋಪದ ಮೇಲೆ ಇಬ್ಬರು ಶಿಕ್ಷಕರು ಮತ್ತು ಪ್ರಾಂಶುಪಾಲರನ್ನು ಬಂಧಿಸಲಾಗಿದೆ. ಶಿಕ್ಷಕರು ಮತ್ತು ಪ್ರಾಂಶುಪಾಲರು ಅರ್ಜಿಯನ್ನು ಹಿಂತೆಗೆದುಕೊಳ್ಳುವಂತೆ 11ನೇ ತರಗತಿ ವಿದ್ಯಾರ್ಥಿನಿಗೆ ಒತ್ತಾಯಿಸಿದ್ದರು ಎಂದು ಆರೋಪಿಸಲಾಗಿದೆ.

ತಿರುವನಂತಪುರಂನ ಶಾಲೆಯ ಪ್ರಾಂಶುಪಾಲೆ ಶಿವಕಲಾ (53), ಶಿಕ್ಷಕರಾದ ಬ್ರಹ್ಮಮಂಗಲಂನ ಶೈಲಜಾ (55) ಮತ್ತು ಪಣಂಗಾಡ್‌ನ ಜೋಸೆಫ್ (53) ಬಂಧಿತರು.

ಈ ಸುದ್ದಿ ಓದಿದ್ದೀರಾ? 2023ನೇ ಶೈಕ್ಷಣಿಕ ವರ್ಷದಿಂದಲೇ 4 ವರ್ಷದ ಪದವಿ ಕೋರ್ಸ್ ಆರಂಭ; ಎಂಫಿಲ್ ನಿಲ್ಲಿಸಲು ನಿರ್ಧಾರ

ಖಾಸಗಿ ಬಸ್ ಮಾಲೀಕರು ಕೊಚ್ಚಿಯಲ್ಲಿ ಧರಣಿ ನಡೆಸುತ್ತಿದ್ದರಿಂದ ವಿದ್ಯಾರ್ಥಿನಿಯ ಕುಟುಂಬಸ್ಥರು ಸುರಕ್ಷಿತವಾಗಿ ಕಳಿಸುವುದಾಗಿ ಶಿಕ್ಷಕರು ಭರವಸೆ ನೀಡಿದ ಬಳಿಕ ಬಾಲಕಿಯನ್ನು ಕಲಾ ಉತ್ಸವದಲ್ಲಿ ಭಾಗವಹಿಸಲು ಕಳುಹಿಸಿದ್ದಾರೆ.

ಆದರೆ, ಬಾಲಕಿಯನ್ನು ಮನೆಗೆ ಬಿಡಲು ಹಿಂತಿರುಗುವಾಗ ಕಿರುಕುಳದ ಘಟನೆ ನಡೆದಿದೆ. ಆದರೆ, ಈ ಶನಿವಾರ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳ ಒಂದು ವಿಭಾಗವು ಶಿಕ್ಷಕರ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ಸಂತ್ರಸ್ತೆಗೆ ಕೌನ್ಸೆಲಿಂಗ್ ನೀಡಿದ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯನ್ನು ಪೊಲೀಸರಿಗೆ ಸಕಾಲಕ್ಕೆ ತಿಳಿಸದ ಕಾರಣ ಶಿಕ್ಷಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180