ತಮಿಳುನಾಡು| ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣವಾದ ಆದಿವಾಸಿ ಯುವತಿಗೆ ಮಕ್ಕಳ ವೈದ್ಯೆಯಾಗುವ ಕನಸು

Adivasi
  • ನೀಟ್ ಉತ್ತೀರ್ಣಳಾದ ಇರುಳ ಆದಿವಾಸಿ ಸಮುದಾಯದ ಮೊದಲ ಯುವತಿ
  • ವೈದ್ಯೆಯಾಗಿ ತನ್ನ ಸಮುದಾಯದ ಸೇವೆ ಮಾಡುವ ಕನಸು ಹೊಂದಿರುವ ಶ್ರೀಮತಿ

ತಮಿಳುನಾಡಿನ ತುಂಬಿಬೆಟ್ಟು ಗ್ರಾಮದ ಇರುಳ ಸಮುದಾಯದ ಆದಿವಾಸಿ ಯುವತಿ ಬಿ. ಶ್ರೀಮತಿ ತನ್ನ ಕಠಿಣ ಪರಿಶ್ರಮದಿಂದ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದು, ವೈದ್ಯಕೀಯ ಸೀಟು ಪಡೆದ ತನ್ನ ಸಮುದಾಯದ ಮೊದಲಿಗರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಯುವತಿ ಬಿ ಶ್ರೀಮತಿ ತಿರುನಲ್ವೇಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದು, ಮಕ್ಕಳ ವೈದ್ಯಕೀಯ ವಿಭಾಗದಲ್ಲಿ ಪರಿಣತಿ ಗಳಿಸುವ ಕನಸು ಹೊಂದಿದ್ದಾರೆ. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಉತ್ತೀರ್ಣರಾಗಿರುವುದಕ್ಕೆ ಪುಳಕಿತಗೊಂಡಿದ್ದು, ತುಂಬಾ ಹೆಮ್ಮೆಪಡುತ್ತಾರೆ. ವೈದ್ಯರಾಗುವ ಅವಕಾಶವನ್ನು ಎದುರು ನೋಡುತ್ತಿದ್ದಾರೆ.

Eedina App

ಇರುಳ ಸಮುದಾಯದ ಆದಿವಾಸಿ ಯುವತಿ ಬಿ ಶ್ರೀಮತಿ ಅವರು ಬಾಲ್ಯದಲ್ಲಿ ಕಿಲ್ ಕೋಟಗಿರಿಯ ಶೋಳೂರು ಮಟ್ಟಂ ಬಳಿಯ ಗ್ರಾಮದಲ್ಲಿರುವ ತನ್ನ ಮನೆಯಿಂದ ಪ್ರತಿದಿನ ಶಾಲೆಗೆ ಹೋಗಲು ಐದು ಕಿ.ಮೀ ನಡೆದುಕೊಂಡು ಹೋಗುತ್ತಿದ್ದುದನ್ನು ನೆನಪಿಸಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಕ್ಕಳ ದಿನ | ಸಾಮಾಜಿಕ ತಲ್ಲಣಗಳ ನಡುವೆ ಎಳೆಯ ಬಾಲೆಯರು

AV Eye Hospital ad

ಬಿ ಶ್ರೀಮತಿ ಅವರು ಅರವೇಣುವಿನ ಸರ್ಕಾರಿ ಗಿರಿಜನ ವಸತಿ ಶಾಲೆಯ ಶಿಕ್ಷಕಿ ಮತ್ತು ತೋಟ ಕಾರ್ಮಿಕರ ಪುತ್ರಿ.
"ನಾನು ವೈದ್ಯೆಯಾಗಿ ಆದಿವಾಸಿ ಸಮುದಾಯದವರಿಗೆ ಸಹಾಯ ಮಾಡಬೇಕು ಎಂದು ಚಿಕ್ಕ ವಯಸ್ಸಿನಿಂದಲೂ ಅಂದುಕೊಳ್ಳುತ್ತಿದ್ದೆ. ನನ್ನ ಎಂಬಿಬಿಎಸ್ ಕೋರ್ಸ್ ಮುಗಿದ ನಂತರ ಪೀಡಿಯಾಟ್ರಿಕ್ಸ್‌ನಲ್ಲಿ(ಮಕ್ಕಳ ವಿಭಾಗ) ಪರಿಣತಿ ಹೊಂದಿ, ಆದಿವಾಸಿಗಳಿಗೆ ನೆರವಾಗುತ್ತೇನೆ” ಎನ್ನುತ್ತಾರೆ ಬಿ ಶ್ರೀಮತಿ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app