ಮೆಟಾ ಭಾರತ | ನೂತನ ಮುಖ್ಯಸ್ಥೆಯಾಗಿ ಸಂಧ್ಯಾ ದೇವನಾಥನ್‌ ನೇಮಕ!

  • ಮೆಟಾ ಭಾರತದ ಉಪಾಧ್ಯಕ್ಷೆಯಾಗಿಯೂ ನೇಮಕಗೊಂಡಿದ್ದಾರೆ ಸಂಧ್ಯಾ
  • ಮೆಟಾ ಭಾರತದ ಮುಖ್ಯಸ್ಥೆಯಾಗಿ ಜನವರಿ 1ರಿಂದ ಕೆಲಸ ಮಾಡಲಿದ್ದಾರೆ

‘ಮೆಟಾ ಭಾರತದ’ದ ಮುಖ್ಯಸ್ಥರನ್ನಾಗಿ ಸಂಧ್ಯಾ ದೇವನಾಥನ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ಕಂಪನಿಯು ತಿಳಿಸಿದೆ. ಮೆಟಾ ಭಾರತದ ಮುಖಸ್ಥ ಸ್ಥಾನಕ್ಕೆ ಅಜಿತ್‌ ಮೋಹನ್‌ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಕಂಪನಿಯಲ್ಲಿ ಈ ಬೆಳವಣಿಗೆ ನಡೆದಿದೆ. ಸಂಧ್ಯಾ ಅವರನ್ನು ಮೆಟಾ ಭಾರತದ ಉಪಾಧ್ಯಕ್ಷರನ್ನಾಗಿಯೂ ನೇಮಿಸಲಾಗಿದೆ.

ಸಂಧ್ಯಾ ಅವರು, ಸಂಸ್ಥೆಯ ವ್ಯವಹಾರವನ್ನು ಅಭಿವೃದ್ಧಿಗೊಳಿಸುವತ್ತ ಗಮನ ಹರಿಸಲಿದ್ದಾರೆ. ಹಾಗೆಯೇ, ಮೆಟಾದ ವ್ಯಾಪಾರ, ಭಾರತಕ್ಕೆ ಕಂಪನಿಯ ಬೆಳವಣಿಗೆ ಬೆಂಬಲಿಸುವುದು ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ಸೇರಿದಂತೆ ಆದಾಯದ ಪ್ರಮುಖ ಆದ್ಯತೆಗಳ ಬಗ್ಗೆ ಕೇಂದ್ರೀಕರಿಸಲಿದ್ದಾರೆ.

Eedina App

ಭಾರತದಲ್ಲಿ ನಕಲಿ ಸುದ್ದಿ ಮತ್ತು ದ್ವೇಷದ ಭಾಷಣಗಳ ಹರಡುವಿಕೆಯನ್ನು ತಡೆಗಟ್ಟುವ ವಿಷಯಕ್ಕೆ ಸಂಬಂಧಿಸಿದಂತೆ ಕಂಪನಿಯು ಹಲವು ಟೀಕೆಗಳನ್ನು ಎದುರಿಸುತ್ತಿದೆ. ಭಾರತದಲ್ಲಿ ಫೇಸ್‌ಬುಕ್ ನಿಯಂತ್ರಕ ಸವಾಲುಗಳನ್ನು ಎದುರಿಸುತ್ತಿದ್ದು, ದೊಡ್ಡ ಟೆಕ್ ಕಂಪನಿಗಳನ್ನು ನಿಯಂತ್ರಿಸುವ ಸರ್ಕಾರ ಕಾನೂನುಗಳನ್ನು ಬಿಗಿಗೊಳಿಸುತ್ತಿರುವ ಸಮಯದಲ್ಲಿ ದೇವನಾಥನ್ ಅವರ ನೇಮಕವಾಗಿದೆ.

ಈ ಸುದ್ದಿ ಓದಿದ್ದೀರಾ?: ಟೆಕ್‌ ಸಿಬ್ಬಂದಿ ವಜಾ | 60 ದಿನಗಳಲ್ಲಿ ಉದ್ಯೋಗ ಹುಡುಕದಿದ್ದರೆ ವಿದೇಶಗಳಿಂದ ಭಾರತೀಯರಿಗೆ ಗೇಟ್‌ ಪಾಸ್‌!

AV Eye Hospital ad

ಸಂಧ್ಯಾ ಅವರು ಮುಂದಿನ ವರ್ಷ ಜನವರಿ 1ರಿಂದ ಮೆಟಾ ಭಾರತದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರು ಬ್ಯಾಂಕಿಂಗ್, ಪಾವತಿಗಳು ಹಾಗೂ ತಂತ್ರಜ್ಞಾನದಲ್ಲಿ ಸುಮಾರು 22 ವರ್ಷಗಳ ವೃತ್ತಿ ಅನುಭವ ಹೊಂದಿದ್ದಾರೆ. 2016ರಲ್ಲಿ ಮೆಟಾ ಕಂಪನಿಗೆ ಸೇರಿದ ಅವರು ಸಿಂಗಾಪುರ್‌ ಮತ್ತು ವಿಯೆಟ್ನಾಂನಲ್ಲಿ ವ್ಯವಹಾರ ಮತ್ತು ತಂಡವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ಹೊಂದಿದ್ದಾರೆ.

“ತಮ್ಮ ಹೊಸ ಹುದ್ದೆಯ ಭಾಗವಾಗಿ ದೇವನಾಥ್‌ ಅವರು, ಭಾರತದಲ್ಲಿ ನಮ್ಮ ಬ್ರಾಂಡ್‌ಗಳ, ರಚನೆಕಾರರು, ಜಾಹೀರಾತುದಾರರು ಮತ್ತು ಪಾಲುದಾರರೊಂದಿಗೆ ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸಲಿದ್ದಾರೆ. ಹಾಗೆಯೇ ಭಾರತದಲ್ಲಿ ಮೆಟಾ ಆದಾಯದ ಬೆಳವಣಿಗೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ” ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ವಾಟ್ಸ್‌ಆ್ಯಪ್‌ನ ಭಾರತದ ಮುಖ್ಯಸ್ಥ ಅಭಿಜಿತ್‌ ಬೋಸ್‌ ಮತ್ತು ಮೆಟಾ ಭಾರತದ ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥ ರಾಜೀವ್‌ ಅಗರ್‌ವಾಲ್‌ ತಮ್ಮ ಸ್ಥಾನಗಳಿಗೆ ಇತ್ತೀಚೆಗಷ್ಟೆ ರಾಜೀನಾಮೆ ನೀಡಿದ್ದರು. ಅವರಿಬ್ಬರ ನಂತರ ಶಿವನಾಥ್‌ ತುಕ್ರಾಲ್‌ ಅವರನ್ನು ಭಾರತದ ಎಲ್ಲ ಮೆಟಾ ಬ್ರಾಂಡ್‌ಗಳ ಸಾರ್ವಜನಿಕ ನೀತಿ ವಿಭಾಗದ ನಿರ್ದೇಶಕರನ್ನಾಗಿ ಮಾಡಲಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app