ಆಂಧ್ರಪ್ರದೇಶ | ರಾಸಾಯನಿಕ ಕೀಟನಾಶಕದಿಂದ ಕುಟುಂಬದ ನಾಲ್ವರಿಗೆ ಕ್ಯಾನ್ಸರ್‌; ಸಾವಯವ ಕೃಷಿಯತ್ತ ಟೆಕ್ಕಿ

Organic Farming
  • ಸಾವಯವ ಕೃಷಿಯಲ್ಲಿ ಯಶಸ್ಸು ಸಾಧಿಸಿದ ಸಾಫ್ಟ್‌ವೇರ್ ವೃತ್ತಿಪರ
  • ರಾಸಾಯನಿಕ ಮುಕ್ತ ಅಗರಬತ್ತಿ ಮತ್ತು ಸೊಳ್ಳೆ ಸುರುಳಿ ತಯಾರಿ

ಕೃಷಿಯಲ್ಲಿ ಅತಿಯಾದ ರಾಸಾಯನಿಕ ಕೀಟನಾಶಕ ಬಳಸಿದ ಪರಿಣಾಮ ಕುಟುಂಬದ ನಾಲ್ವರು ಕ್ಯಾನ್ಸರ್‌ಗೆ ತುತ್ತಾಗಿರುವುದು ತಿಳಿದ ಮೇಲೆ ಆಂಧ್ರಪ್ರದೇಶದ ಸಾಫ್ಟವೇರ್ ತಂತ್ರಜ್ಞ ಶ್ಯಾಮಸುಂದರ್ ಉದ್ಯೋಗ ತೊರೆದು ಪೂರ್ಣ ಪ್ರಮಾಣದಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕ್ಯಾನ್ಸರ್‌ಗೆ ತುತ್ತಾಗಿರುವ ಅವರ ಕುಟುಂಬ ಸದಸ್ಯರಿಗೆ ಮದ್ಯಪಾನ ಅಥಮಾ ಧೂಮಪಾನದ ವ್ಯಸನಗಳಿರಲಿಲ್ಲ. ನಿತ್ಯವೂ ಹೊಲಗಳಲ್ಲೇ ಕೆಲಸ ಮಾಡುತ್ತಿದ್ದವರು. ಕೃಷಿಯಲ್ಲಿ ಬಳಸಿದ ರಾಸಾಯನಿಕ ಕೀಟನಾಶಕಗಳೇ ಅವರ ಜೀವಕ್ಕೆ ಎರವಾಗಿತ್ತು. ಅದರಿಂದಲೇ ಕ್ಯಾನ್ಸರ್ ರೋಗ ಹರಡಿದೆ ಎಂದು ನಂತರ ಕುಟುಂಬಕ್ಕೆ ತಿಳಿದು ಬಂದಿದೆ.

ಆಂಧ್ರಪ್ರದೇಶದ ಶ್ರೀಕಾಳಹಸ್ತಿ ನಗರದ  ಪುಡಿ ಗ್ರಾಮದವರಾದ 34 ವರ್ಷದ ಶ್ಯಾಮ್‌ಸುಂದರ್, ಹೈದರಾಬಾದ್‌ನ ‘ಮಲ್ಲ ರೆಡ್ಡಿ ತಂತ್ರಜ್ಞಾನ ಸಂಸ್ಥೆ’ಯಲ್ಲಿ 2013ರಲ್ಲಿ ಎಂಸಿಎ (ಮಾಸ್ಟರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಶನ್) ಪೂರ್ಣಗೊಳಿಸಿ, 2015ರವರೆಗೂ ಪ್ರತಿಷ್ಠಿತ ಕಂಪೆನಿಗಳಲ್ಲಿ ವೃತ್ತಿಪರರಾಗಿದ್ದರು. "ಕೃಷಿಗೆ ರಾಸಾಯನಿಕ ಸಿಂಪಡಿಸುವಾಗ ಗಾಳಿಯ ಮೂಲಕ ಕುಟುಂಬ ಸದಸ್ಯರ ಶ್ವಾಸಕೋಶದ ಮೇಲೆ ಪರಿಣಾಮ ಬೀರಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ" ಎಂದು ಅರಿವಾದಾಗ ಅವರು ಸಾವಯವ ಕೃಷಿ ಪ್ರಾರಂಭಿಸಬೇಕು ಎಂದು ನಿರ್ಧರಿಸಿದ್ದರು. ಈ ಬಗ್ಗೆ ಅವರು ಮಾಧ್ಯಮಗಳಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

2018ರಲ್ಲಿ ಅವರು ಸಾವಯವ ಕೃಷಿಯ ತರಬೇತಿ ಪಡೆದರು. ಪೂರ್ವಜರಿಂದ ಬಂದ 5.5 ಎಕರೆ ಭೂಮಿ ಶ್ಯಾಮ್‌ಸುಂದರ್ ಪ್ರಯೋಗಕ್ಕೆ ವೇದಿಕೆಯಾಯಿತು. ಕುಟುಂಬದ ಸುಮಾರು 4ರಿಂದ 5 ಎಕರೆ ಕೃಷಿ ಭೂಮಿ ಸಾವಯವ ಕೃಷಿಯ ಪ್ರಯೋಗಾಲಯವಾಯಿತು. ಅಷ್ಟೇ ಅಲ್ಲದೆ, 26 ಎಕರೆ ಜಮೀನನ್ನು ಭೋಗ್ಯಕ್ಕೆ (ಲೀಸ್‌) ಪಡೆದು ಒಟ್ಟು 36 ಎಕರೆ ಜಮೀನಿನಲ್ಲಿ 2019ರಲ್ಲಿ ಭತ್ತದ ಕೃಷಿ ಪ್ರಾರಂಭಿಸಿದ್ದರು.

ಈ ಸುದ್ದಿಯನ್ನು ಓದಿದ್ದೀರಾ?  ಗೋಧಿ ರಫ್ತು ಮಾಡಲು ಹೊರಟ ಕೇಂದ್ರ ಸರ್ಕಾರ ತೆಪ್ಪಗಾಗಿದ್ದು ಏಕೆ?

ತಮ್ಮ ಜಮೀನಿನಲ್ಲಿ ನವರ (ಕೆಂಪು ಅಕ್ಕಿ), ಕಲಬಾಟಿ (ಕಪ್ಪು ಅಕ್ಕಿ), ಕುಜಿ ಪಟಾಲಿಯಾ, ಚಿಂತಲೂರಿ ಸನ್ನಾಲು, ಮೈಸೂರು ಮಲ್ಲಿಗೆ ಅಕ್ಕಿ, ರತ್ನ ಚೋಡಿ, ಕಿಚಲಿ ಸಂಬಾ ಹೀಗೆ ವಿವಿಧ ರೀತಿಯ ಭತ್ತದ ತಳಿಗಳನ್ನು ಬೆಳೆಯುತ್ತಿದ್ದಾರೆ.

ಸಾವಯವ ಕೃಷಿ ಮೂಲಕ ಅಕ್ಕಿ ಮತ್ತು ನೆಲಗಡಲೆಯನ್ನು ಜಮೀನಿನಲ್ಲಿ ಬೆಳೆಯುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ. ದನದ ಸೆಗಣಿ ಬಳಸಿ ‘ಜೀವಾಮೃತ’, ‘ಘನ ಜೀವಾಮೃತ’ ತಯಾರಿಸಿದ್ದು, ರಾಸಾಯನಿಕ ಕೀಟನಾಶಕ ಸಿಂಪಡನೆಗೆ ಬದಲಾಗಿ ಇವುಗಳನ್ನು ಬಳಸಲಾಗುತ್ತಿದೆ ಎಂದರು.

ರಾಸಾಯನಿಕ ಬಳಸಿ ತಯಾರಿಸುವ ಅಗರಬತ್ತಿ ಮತ್ತು ಸೊಳ್ಳೆ ಬತ್ತಿಗಳಿಂದಾಗುವ ಪರಿಣಾಮ ಮನಗಂಡ ಶ್ಯಾಮ್‌ಸುಂದರ್, ದೇಸಿ ಗೋವಿನ ಸಗಣಿ ಬಳಸಿ ಅಗರಬತ್ತಿ ಮತ್ತು ಸೊಳ್ಳೆ ಸುರುಳಿ ತಯಾರಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್