ಹಸಿವಿನ ಬಿಕ್ಕಟ್ಟನ್ನು ಪರಿಹರಿಸಲು ಕೃಷಿ ತಂತ್ರಜ್ಞಾನದ ಆವಿಷ್ಕಾರದ ಅಗತ್ಯವಿದೆ: ಬಿಲ್‌ ಗೇಟ್ಸ್‌

  • ಜಾಗತಿಕ ಹಸಿವಿನ ಬಿಕ್ಕಟ್ಟು ಪರಿಹರಿಸಲು ಕೇವಲ ಆಹಾರ ನೆರವಿನಿಂದ ಸಾಧ್ಯವಿಲ್ಲ
  • ಈ ಸಮಸ್ಯೆಯನ್ನು ಪರಿಹರಿಸಲು ವಿಶಿಷ್ಟ ತಳಿಯ ಬೀಜಗಳ ಅಗತ್ಯವಿದೆ ಎಂದ ಬಿಲ್‌ ಗೇಟ್ಸ್‌

ಜಾಗತಿಕ ಹಸಿವಿನ ಬಿಕ್ಕಟ್ಟು ಹೆಚ್ಚಾಗಿದ್ದು, ʻಆಹಾರ ನೆರವಿʼನಿಂದ ಈ ವಿಷಮಸ್ಥಿತಿಯನ್ನು ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಿಲ್ಲ. ಈ ಬಿಕ್ಕಟ್ಟನ್ನು ಹಿಮ್ಮೆಟ್ಟಿಸಲು ಕೃಷಿ ತಂತ್ರಜ್ಞಾನದಲ್ಲಿನ ಆವಿಷ್ಕಾರಗಳ ನಾನಾ ಪ್ರಕಾರಗಳ ಅಗತ್ಯವಿದೆ ಎಂದು ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅಭಿಪ್ರಾಯಪಟ್ಟಿದ್ದಾರೆ.

ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಮಂಗಳವಾರ ಅಧ್ಯಯನ ವರದಿ ಬಿಡುಗಡೆ ಮಾಡಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರ್ದಿಷ್ಟವಾಗಿ, ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಮತ್ತು ಕೃಷಿ ಕೀಟಗಳನ್ನು ವಿರೋಧಿಸಲು ವಿನ್ಯಾಸಗೊಳಿಸಲಾದ ʻವಿಶಿಷ್ಠ ತಳಿಯ ಬೀಜಗಳುʼ ಹೇಗೆ ಕೃಷಿ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಬಲ್ಲದು ಎಂದು ವಿವರಿಸಿದ್ದಾರೆ.

Eedina App

ಹವಾಮಾನ ಬದಲಾವಣೆಯು ವಿವಿಧ ದೇಶಗಳಲ್ಲಿ ಬೆಳೆಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿರುವ ಬಗ್ಗೆ ವರದಿ ಎಳೆಎಳೆಯಾಗಿ ವಿವರಿಸಿದೆ ಎಂದು ಅವರು ತಿಳಿಸಿದರು.

ಸಾಮಾನ್ಯವಾಗಿ ಅಂತಹ ವಿಶಿಷ್ಠ ಬೀಜಗಳು ಬೆಳೆಯಲು ಕೀಟನಾಶಕಗಳು ಮತ್ತು ಪಳೆಯುಳಿಕೆ ಇಂಧನ ಆಧಾರಿತ ರಸಗೊಬ್ಬರಗಳ ಅಗತ್ಯವಿದೆ ಎಂಬುದನ್ನು ಬಿಲ್‌ಗೇಟ್ಸ್‌ ಹೇಳುತ್ತಾರೆ. ಆದರೆ, ಗೇಟ್ಸ್‌ನ ವಿಧಾನವು ಬಿಕ್ಕಟ್ಟಿನ ತುರ್ತುಸ್ಥಿತಿಯನ್ನು ಓರೆಗೆ ಹಚ್ಚುವುದಿಲ್ಲ ಎಂದು ವಿಮರ್ಶಕರು ವಾದಿಸುತ್ತಾರೆ.

AV Eye Hospital ad

ಈ ʻವಿಶಿಷ್ಠ ಬೀಜಗಳನ್ನು ಅಭಿವೃದ್ಧಿಪಡಿಸಲು ವರ್ಷಗಳು ಬೇಕಾಗುತ್ತವೆ. ಪ್ರಸ್ತುತ ಹಸಿವಿನ ಬಿಕ್ಕಟ್ಟಿನ ನೋವನ್ನು ಎದುರಿಸುತ್ತಿರುವ ದೇಶಗಳಿಗೆ ತಕ್ಷಣವೇ ಪರಿಹಾರ ಸಿಗುವುದಿಲ್ಲ. ಏಕೆಂದರೆ ಅದು, ಆಹಾರ ಆಮದುಗಳ ಮೇಲೆ ಅವಲಂಬಿಸಿದೆ.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ತಿಂಗಳಾದರೂ ಪೂರ್ಣಗೊಳ್ಳದ ಎಚ್‌ಬಿಆರ್ ಲೇಔಟ್‌ ಚರಂಡಿ ಕಾಮಗಾರಿ

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ಎಂದು ಕರೆಯಲಾಗುವ ಜಾಗತಿಕ ಸಮೃದ್ಧಿ ಮತ್ತು ಶಾಂತಿಗಾಗಿ ಹಂಚಿಕೆಯ ಗುರಿಗಳನ್ನು ಪೂರೈಸಲು ಅಂತಾರಾಷ್ಟ್ರೀಯ ಒತ್ತಡ ತೀವ್ರಗೊಳಿಸಬಹುದಾದ ಚರ್ಚೆಯಾಗಿದೆ.

2030ರೊಳಗೆ ಸಾಧಿಸಬೇಕಾದಂತಹ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ವಿಶ್ವಸಂಸ್ಥೆ ಹೊಂದಿದೆ. ಅವುಗಳೆಂದರೆ, ಬಡತನ ಮತ್ತು ಹಸಿವನ್ನು ಕೊನೆಗೊಳಿಸುವುದು, ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವುದು, ಶುದ್ಧ ನೀರಿಗೆ ಅವಕಾಶ ಒದಗಿಸುವುದು, ಲಿಂಗ ಸಮಾನತೆಯತ್ತ ಪ್ರಯತ್ನಿಸುವುದು ಹಾಗೂ ಆರ್ಥಿಕ ಅಸಮಾನತೆ ಕಡಿಮೆ ಮಾಡುವುದಾಗಿದೆ.

ಹದಗೆಡುತ್ತಿರುವ ಹಸಿವಿನ ಬಿಕ್ಕಟ್ಟಿಗೆ ಉಕ್ರೇನ್‌ನಲ್ಲಿ ಯುದ್ಧ ಮತ್ತು ಸಾಂಕ್ರಾಮಿಕ ಮುಖ್ಯ ಕಾರಣಗಳೆಂದು ಗೇಟ್ಸ್ ಸೂಚಿಸಿದರು. ಈ ಬಿಕ್ಕಟ್ಟನ್ನು ಪರಿಹರಿಸಲು ʻಆಹಾರ ನೆರವುʼ ಸಾಕಾಗುವುದಿಲ್ಲ ಎಂದು ಈ ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೇರುತ್ತಿರುವ ಇತರ ದಾನಿಗಳಿಗೆ ಮತ್ತು ವಿಶ್ವ ನಾಯಕರಿಗೆ ಸಂದೇಶ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app