ಟಿಆರ್‌ಎಸ್‌ ಶಾಸಕರ ಖರೀದಿ | ಪ್ರಕರಣದಲ್ಲಿ ಈಗ ಬಿ ಎಲ್‌ ಸಂತೋಷ್‌ ಆರೋಪಿ; ಎರಡನೇ ನೋಟಿಸ್‌ ಜಾರಿ ಮಾಡಿದ ಎಸ್‌ಐಟಿ

  • ಬಿ ಎಲ್‌ ಸಂತೋಷ್‌ ಸೇರಿ ನಾಲ್ವರನ್ನು ಆರೋಪಿಗಳೆಂದು ಹೆಸರಿಸಿದ ಎಸ್‌ಐಟಿ
  • ನ.26 ಅಥವಾ ನ.28ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ

ನಾಲ್ವರು ಟಿಆರ್‌ಎಸ್‌ ಶಾಸಕರ ಖರೀದಿಗೆ ಸಂಚು ರೂಪಿಸಿದ ಆರೋಪ ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕ ಬಿ ಎಲ್‌ ಸಂತೋಷ್‌ ಮತ್ತು ಇತರ ಮೂವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಆರೋಪಿಗಳೆಂದು ಹೆಸರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ತೆಲಂಗಾಣ ಹೈಕೋರ್ಟ್‌ ನಿರ್ದೇಶನ ನೀಡಿದ ಬಳಿಕ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸಂತೋಷ್‌ ಅವರಿಗೆ ಎರಡನೇ ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್‌ನಲ್ಲಿ ನ.26 ಅಥವಾ ನ.28ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಎಸ್‌ಐಟಿ ಸೂಚಿಸಿದೆ.

ಈವರೆಗಿನ ತನಿಖೆ ಆಧಾರದ ಮೇಲೆ ಎಸ್‌ಐಟಿ ಹೈದರಾಬಾದ್‌ನ ವಿಶೇಷ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದೆ. ಇದರಲ್ಲಿ ಬಿ ಎಲ್‌ ಸಂತೋಷ್‌ ಮತ್ತು ಕೇರಳದ ಜಗ್ಗುಸ್ವಾಮಿ, ತುಷಾರ್‌ ವೆಲ್ಲಪಲ್ಲಿ ಹಾಗೂ ಬಿ ಶ್ರೀನಿವಾಸ್‌ ಅವರನ್ನು ಆರೋಪಿಗಳು ಎಂದು ಹೆಸರಿಸಿದೆ. 

ಟಿಆರ್‌ಎಸ್‌ ಶಾಸಕರ ಖರೀದಿ ಆರೋಪಕ್ಕೆ ಸಂಬಂಧಿಸಿದಂತೆ ಅ.26ರಂದು ಟಿಆರ್‌ಎಸ್‌ ಶಾಸಕ ಪೈಲಟ್‌ ರೋಹಿತ್‌ ರೆಡ್ಡಿ ಸೇರಿದಂತೆ ನಾಲ್ವರು ಶಾಸಕರು ನೀಡಿದ್ದರು. ಈಗಾಗಲೇ ಈ ಪ್ರಕರಣದಲ್ಲಿ ರಾಮಚಂದ್ರ ಭಾರತಿ ಅಲಿಯಾಸ್ ಸತೀಶ್ ಶರ್ಮಾ, ನಂದಕುಮಾರ್ ಹಾಗೂ ಸಿಂಹಯಾಜಿ ಸ್ವಾಮಿ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. 

ಈ ಸುದ್ದಿ ಓದಿದ್ದೀರಾ?: ಸಚಿವ ಸುಧಾಕರ್‌ಗೆ ಸಮನ್ಸ್‌; ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಆದೇಶಿಸಿದ ನ್ಯಾಯಾಲಯ

ಎಫ್‌ಐಆರ್‌ ಪ್ರತಿ ಪ್ರಕಾರ, ಆರೋಪಿಗಳು ತಾನು ಬಿಜೆಪಿ ಸೇರುವಂತೆ ಹೇಳಿದ್ದರು. ಇದಕ್ಕೆ 100 ಕೋಟಿ ರೂ. ನೀಡುವುದಾಗಿಯೂ ಅವರು ಹೇಳಿದ್ದರು ಎಂದು ರೋಹಿತ್‌ ರೆಡ್ಡಿ ಆರೋಪಿಸಿದ್ದರು.  

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180