ಥಾಯ್ಲೆಂಡ್ | ನೈಟ್‌ಕ್ಲಬ್‌ನಲ್ಲಿ ಬೆಂಕಿ ಅನಾಹುತ; 13 ಮಂದಿ ಮೃತ

Fire Accident
  • ಬ್ಯಾಂಕಾಕ್‌ನ ಸತ್ತಾಹಿಪ್ ಜಿಲ್ಲೆಯ ಮೌಂಟೇನ್ ಬಿ ನೈಟ್‌ಸ್ಪಾಟ್‌ ಕ್ಲಬ್‌ನಲ್ಲಿ ದುರಂತ
  • ಅಗ್ನಿಶಾಮಕ ಸಿಬ್ಬಂದಿಗಳಿಂದ ಮೂರು ಗಂಟೆ ಕಾರ್ಯಾಚರಣೆಯಿಂದ ನಂದಿದ ಬೆಂಕಿ

ಥಾಯ್ಲೆಂಡ್‌ನ ನೈಟ್‌ಕ್ಲಬ್‌ವೊಂದರಲ್ಲಿ ಶುಕ್ರವಾರ (ಆಗಸ್ಟ್‌ 5) ನಸುಕಿನ ಜಾವ ಅಗ್ನಿ ಅವಘಡ ಸಂಭವಿಸಿದ್ದು, 13 ಮಂದಿ ಮೃತಪಟ್ಟಿದ್ದಾರೆ. 40 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ತಂಡದ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಬ್ಯಾಂಕಾಕ್‌ನಿಂದ ದಕ್ಷಿಣಕ್ಕೆ 150 ಕಿಲೋಮೀಟರ್ (90 ಮೈಲಿ) ದೂರದಲ್ಲಿರುವ ಚೋನ್‌ಬುರಿ ಪ್ರಾಂತ್ಯದ ಸತ್ತಾಹಿಪ್ ಜಿಲ್ಲೆಯ ಮೌಂಟೇನ್ ಬಿ ನೈಟ್‌ಸ್ಪಾಟ್‌ನಲ್ಲಿ ಗುರುವಾರ (ಆಗಸ್ಟ್‌ 4) ತಡರಾತ್ರಿ 1 ಗಂಟೆ ಸುಮಾರಿಗೆ  ಬೆಂಕಿಯ ಕಿಡಿಯೊಂದು ಹೊತ್ತಿಕೊಂಡಿದೆ ಎಂದು ಸಾವಾಂಗ್ ರೋಜನಾಥಮ್ಮಸಾತನ್ ರಕ್ಷಣಾ ಫೌಂಡೇಶನ್‌ನ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಪ್ರಧಾನಿ ನಿವಾಸ ಘೇರಾವ್ | ರಾಹುಲ್ ಗಾಂಧಿ ಸೇರಿ ಕೆಲವು ಸಂಸದರ ಬಂಧನ

ರಕ್ಷಣಾ  ತಂಡವು ಬೆಂಕಿ ಅನಾಹುತದ ದೃಶ್ಯದ ತುಣುಕನ್ನು ಪೋಸ್ಟ್‌ ಮಾಡಿದೆ. ಬೃಹತ್‌ ಬೆಂಕಿಯ ಕೆನ್ನಾಲಿಗೆ ನೈಟ್‌ಕ್ಲಬ್‌ನಲ್ಲಿ ಹರಡುತ್ತಿದ್ದಂತೆ ನೆರೆದಿದ್ದ ಮಂದಿ ಕಿರುಚುತ್ತಾ ಓಡಿಹೋಗುತ್ತಿದ್ದರು. ಅವರ ಬಟ್ಟೆಗಳು ಬೆಂಕಿಯಿಂದ ಸುಟ್ಟುಹೋಗುತ್ತಿರುವುದನ್ನು ದೃಶ್ಯ ತೋರಿಸಿದೆ. 

ಅಗ್ನಿಶಾಮಕ ಸಿಬ್ಬಂದಿಗಳು ನಡೆಸಿದ ಮೂರು ಗಂಟೆಗಳ ಸತತ ಕಾರ್ಯಾಚರಣೆ ನಂತರ ಬೆಂಕಿಯು ತಹಬದಿಗೆ ಬಂದಿದೆ. 

2009ರಲ್ಲಿ ಬ್ಯಾಂಕಾಕ್‌ನ ಸ್ವಾಂಕಿ ಸ್ಯಾಂಟಿಕಾ ಕ್ಲಬ್‌ನಲ್ಲಿ ಹೊಸ ವರ್ಷದ ಮುನ್ನಾದಿನದ ಮೋಜಿನ ಕೂಟದಲ್ಲಿ ಭಾರೀ ಸ್ಫೋಟ ಸಂಭವಿಸಿತ್ತು. ಇದರಲ್ಲಿ 67 ಜನರು ಸಾವನ್ನಪ್ಪಿದ್ದರು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಬರ್ನ್ ಎಂಬ ರಾಕ್ ಬ್ಯಾಂಡ್ ಅನ್ನು ವೇದಿಕೆಯಲ್ಲಿ ನುಡಿಸಿದಾಗ ಸಿಡಿಸಿದ ಪಟಾಕಿಗಳಿಂದ ಬೆಂಕಿ ಹೊತ್ತಿಕೊಂಡಿತ್ತು. ಬಳಿಕ ಸ್ಯಾಂಟಿಕಾ ಕ್ಲಬ್‌ ಮಾಲೀಕರಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು.

2012ರಲ್ಲಿ ಫುಕೆಟ್ ದ್ವೀಪದ ಕ್ಲಬ್‌ನಲ್ಲಿ ವಿದ್ಯುತ್ ಅವಘಡದಿಂದ ಬೆಂಕಿ ಕಾಣಿಸಿಕೊಂಡಿತ್ತು. ಈ ದುರಂತದಲ್ಲಿ ನಾಲ್ವರು ಸಾವನ್ನಪ್ಪಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್