ಆಂಧ್ರ ಪ್ರದೇಶ | ಮೋಟಾರ್‌ ಶೋ ರೂಂನಲ್ಲಿ ಬೆಂಕಿ; 25 ಎಲೆಕ್ಟ್ರಿಕ್‌ ಬೈಕ್‌ ಭಸ್ಮ

  • ಎಲೆಕ್ಟ್ರಿಕ್‌ ವಾಹನ ಶೋ ರೂಂನಲ್ಲಿ ಬೆಂಕಿ ಅವಘಡ; ಎರಡನೇ ಪ್ರಕರಣ
  • ಆಂಧ್ರಪ್ರದೇಶದಲ್ಲಿ ನಡೆದ ಎರಡನೇ ಬೆಂಕಿ ಅವಘಡ ಘಟನೆ ಇದು

ಎಲೆಕ್ಟ್ರಿಕ್‌ ವಾಹನ ಶೋ ರೂಂನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಸುಮಾರು 25ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬೈಕ್‌ಗಳು ಸುಟ್ಟು ಭಸ್ಮವಾಗಿರುವ ಘಟನೆ ಆಂಧ್ರಪ್ರದೇಶದ ಪಾರ್ವತಿಪುರಂ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ (ಅಕ್ಟೋಬರ್ 24) ಮುಂಜಾನೆ ಪಾಲಕೊಂಡ ಪಟ್ಟಣದ ಮನಮ್ ಮೋಟಾರ್ಸ್‌ನಲ್ಲಿ ಈ ಘಟನೆ ಸಂಭವಿಸಿದೆ. ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ಮಾರಾಟಕ್ಕಾಗಿ ಶೋರೂಂನಲ್ಲಿ ಇರಿಸಲಾಗಿದ್ದ ಇ- ಬೈಕ್ ಮತ್ತು ಬ್ಯಾಟರಿಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

ʻʻಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆʼʼ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ʻʻಶೋ ರೂಂ ಆಡಳಿತ ಮಂಡಳಿ ಪ್ರಕಾರ ಬೆಂಕಿ ಅವಘಡದಿಂದ ಸುಮಾರು ₹50 ಲಕ್ಷ ನಷ್ಟವಾಗಿದೆʼʼ ಎಂದು ಮಾಧ್ಯಮಗಳು ವರದಿ ಮಾಡಿವೆ.

AV Eye Hospital ad

ಈ ಸುದ್ದಿ ಓದಿದ್ದೀರಾ?: ಮೈಸೂರು | ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳ ಕೂಗು; ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ ತೋಟದ ಮಾಲೀಕ

ಎಲೆಕ್ಟ್ರಿಕ್ ವಾಹನಗಳಿಗೆ ಬೆಂಕಿ ಇದೇ ಮೊದಲಲ್ಲ

ಸೆಪ್ಟೆಂಬರ್‌ನಲ್ಲಿ ಹೈದರಾಬಾದ್‌ನ ಎಲೆಕ್ಟ್ರಿಕ್ ವಾಹನ ಶೋರೂಮ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಎಂಟು ಜನರು ಸಾವನ್ನಪ್ಪಿದ್ದರು. ಬಹುಮಹಡಿ ಕಟ್ಟಡದ ನೆಲಮಾಳಿಗೆಯಲ್ಲಿರುವ ಶೋರೂಮ್‌ನಿಂದ ಉಂಟಾದ ಬೆಂಕಿ ಮೇಲಿನ ಮಹಡಿಯಲ್ಲಿರುವ ಹೋಟೆಲ್‌ಗೆ ವ್ಯಾಪಿಸಿತ್ತು. ಈ ಘಟನೆಯಲ್ಲಿ ಎಂಟು ಜನರು ಸಾವನ್ನಪ್ಪಿದ್ದರೆ, ಹೋಟೆಲ್‌ನಲ್ಲಿ ತಂಗಿದ್ದ ಹಲವಾರು ಮಂದಿ ಗಾಯಗೊಂಡಿದ್ದರು.

ಶೋರೂಂನಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನ ಬಳಿ ಬೆಂಕಿ ಕಾಣಿಸಿಕೊಂಡು ಕೆಲವೇ ಸೆಕೆಂಡ್‌ಗಳಲ್ಲಿ ವ್ಯಾಪಿಸಿದೆ ಎಂಬುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿತ್ತು.

ರೂಬಿ ಪ್ರೈಡ್ ಹೋಟೆಲ್ ಮತ್ತು ರೂಬಿ ಮೋಟರ್ ಅನ್ನು ಹೊಂದಿದ್ದ ಗ್ರೌಂಡ್-ಪ್ಲಸ್-ಫೋರ್ ರಚನೆಯು 28 ಕೊಠಡಿಗಳನ್ನು ಹೊಂದಿತ್ತು, ಅಪಘಾತದ ಸಮಯದಲ್ಲಿ ಸುಮಾರು 25 ಜನರು ಅಲ್ಲಿಯೇ ಇದ್ದರು. ಅಗ್ನಿಶಾಮಕ ಸುರಕ್ಷತಾ ನಿಯಮಗಳ ಉಲ್ಲಂಘನೆ ಸೇರಿದಂತೆ ಲಾಡ್ಜ್ ಮತ್ತು ಇ- ಬೈಕ್ ಶೋರೂಮ್‌ನ ಕಾರ್ಯನಿರ್ವಹಣೆಯಲ್ಲಿ ಹಲವಾರು ಲೋಪಗಳನ್ನು ಪೊಲೀಸರು ಕಂಡುಕೊಂಡಿದ್ದರು. ನೆಲಮಾಳಿಗೆಯನ್ನು ಕಾನೂನುಬಾಹಿರವಾಗಿ ವ್ಯಾಪಾರ ಚಟುವಟಿಕೆಗೆ ಬಳಸಿಕೊಂಡಿರುವುದು ಮತ್ತೊಂದು ಉಲ್ಲಂಘನೆಯಾಗಿತ್ತು. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app