ಟ್ವಿಟರ್‌ ಸುದ್ದಿ | ಟ್ವೀಟ್‌ ಎಡಿಟ್‌ ಮಾಡುವ ಹೊಸ ಆಯ್ಕೆ; ಪಾವತಿಸಿದ ಚಂದಾದಾರರಿಗೆ ಮಾತ್ರ!

  • ತಿಂಗಳಿಗೆ ₹404 ಪಾವತಿಸುವ ಟ್ವಿಟರ್‌ ಬ್ಲೂ ಚಂದಾದಾರರು ಎಡಿಟ್‌ ಆಯ್ಕೆ ಬಳಸಬಹುದು
  • ಎಲ್ಲ ಬಳಕೆದಾರರು ಟ್ವಿಟರ್‌ ಎಡಿಟ್‌ ಆಯ್ಕೆ ಬಳಸಬಹುದೇ ಎನ್ನುವುದಿನ್ನೂ ದೃಢಪಟ್ಟಿಲ್ಲ

ಇತ್ತೀಚೆಗಷ್ಟೆ ಟ್ವಿಟರ್‌ನ ಕೆಲ ಬಳಕೆದಾರರಿಗೆ ಟ್ವೀಟ್‌ ಎಡಿಟ್‌ ಮಾಡುವ ಆಯ್ಕೆಯನ್ನು ಪರೀಕ್ಷಾರ್ಥವಾಗಿ ಪರಿಚಯಿಸಿದ್ದ ಟ್ವಿಟರ್‌, ಮುಂಬರುವ ಕೆಲ ವಾರಗಳಲ್ಲಿ ಪಾವತಿಸಿದ ಚಂದಾದಾರರಿಗೆ (Paid Subscribers) ಎಡಿಟ್‌ ಮಾಡುವ ಆಯ್ಕೆಯನ್ನು ನೀಡಲು ಮುಂದಾಗಿದೆ.

ಟ್ವಿಟರ್ ಬ್ಲಾಗ್ ಪೋಸ್ಟ್ ಪ್ರಕಾರ, ʻಟ್ವಿಟರ್ ಬ್ಲೂ ಟಿಕ್‌ʼ ಚಂದಾದಾರರಾಗಿ ₹ತಿಂಗಳಿಗೆ 404 (4.99 ಡಾಲರ್‌) ಪಾವತಿಸುವ ಬಳಕೆದಾರರು ಶೀಘ್ರದಲ್ಲೇ ತಾವು ಪ್ರಕಟಿಸಿದ ಟ್ವೀಟರ್‌ ಅನ್ನು 30 ನಿಮಿಷಗಳಲ್ಲಿ ʻಕೆಲವು ಬಾರಿʼ ಸಂಪಾದಿಸಲು ಸಾಧ್ಯವಾಗುತ್ತದೆ ಎಂದು 'ಲೈವ್‌ ಮಿಂಟ್‌' ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಾಗುಣಿತ ದೋಷಗಳು, ಸೇರಿಸುವುದು, ಅಳಿಸಿಹಾಕುವುದು, ಟ್ಯಾಗ್‌ಗಳನ್ನು ಹಾಕುವುದು ಸೇರಿದಂತೆ ದೋಷಗಳನ್ನು ಸರಿಪಡಿಸುವ ಸಲುವಾಗಿ ಟ್ವಿಟರ್ ಬಳಕೆದಾರರು ಪ್ರಕಟಿಸಿದ ನಂತರ ತಮ್ಮ ಟ್ವೀಟ್‌ಗಳನ್ನು ಸಂಪಾದಿಸುವ ಸಾಮರ್ಥ್ಯವನ್ನು ಪಾವತಿಸಿದ ಚಂದಾದಾರರು ಪಡೆಯಲಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಕೋಲಾರ | ದೇವರ ಗುಜ್ಜುಕೋಲು ಮುಟ್ಟಿದ ಪ್ರಕರಣ : ಎಂಟು ಮಂದಿ ಬಂಧನ

ಈ ಹಿಂದೆ ಜಾಲತಾಣ ಬಳಕೆದಾರರು ಟ್ವೀಟ್‌ ಎಡಿಟ್‌ ಮಾಡುವ ಆಯ್ಕೆ ನೀಡುವಂತೆ ಹಲವು ಬಾರಿ ಕೇಳಿಕೊಂಡಿದ್ದರು. ಇದು ಸಾವಿರಾರು ಮಂದಿ ಬಳಕೆದಾರರ ಒಕ್ಕೊರಲಿನ ವಿನಂತಿಯಾಗಿತ್ತು. ಅಂತಹ ವಿನಂತಿಗಳು ಆನ್‌ಲೈನ್‌ನಲ್ಲಿ ಜೋಕ್‌ಗಳಿಗೆ ಕಾರಣವಾಗಿದ್ದವು. ಪ್ರಸ್ತುತ ತಮ್ಮ ವೇದಿಕೆ ಬಳಕೆದಾರರಿಗೆ  ವಿನಂತಿಸಿದ ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದೆ. ಅರಂಭದಲ್ಲಿ ಪಾವತಿಸಿದ ಬಳಕೆದಾರರಿಗೆ ಮಾತ್ರ ಎಡಿಟ್‌ ಆಯ್ಕೆ ನೀಡಲಾಗುವುದು ಎಂದಿತ್ತು. ನಂತರ ಎಲ್ಲ ಬಳಕೆದಾರರಿಗೂ ಈ ಹೊಸ ಆಯ್ಕೆಯನ್ನು ಪರೀಕ್ಷಾರರ್ಥವಾಗಿ ನೀಡಲು ಮುಂದಾಗಿತ್ತು. ಪ್ರಸ್ತುತ ಟ್ವಿಟರ್‌ ಬ್ಲೂ ಚಂದಾದಾರರಿಗೆ ಮಾತ್ರ ಈ ಆಯ್ಕೆಯನ್ನು ಪಾವತಿಸಿದಲ್ಲಿ ಮಾತ್ರ ನೀಡಲಾಗುವುದು ಎನ್ನಲಾಗುತ್ತಿದೆ.

ಫೇಸ್‌ಬುಕ್, ರೆಡ್ಡಿಟ್ ಮತ್ತು ಪಿಂಟೆರೆಸ್ಟ್‌ನಂತಹ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣದ ವೇದಿಕೆಗಳು ಹಲವು ವರ್ಷಗಳಿಂದ ಪೋಸ್ಟ್‌ಗಳನ್ನು ಎಡಿಟ್‌ ಮಾಡುವ ಆಯ್ಕೆಯನ್ನು ಬಳಕೆದಾರರಿಗೆ ನೀಡಿವೆ.

ವರದಿಗಳ ಪ್ರಕಾರ, ಎಡಿಟ್‌ ಮಾಡಲಾದ ಟ್ವೀಟ್‌ಗಳನ್ನು ಪ್ರದರ್ಶಿಸಲು ಐಕಾನ್ ಮತ್ತು ಟೈಮ್‌ಸ್ಟ್ಯಾಂಪ್ ಅನ್ನು ಹೊಂದಿರುತ್ತದೆ. ಎಡಿಟ್‌ ಮಾಡಿದ ಪೋಸ್ಟ್ ಇತಿಹಾಸ ಮತ್ತು ಆ ಪೋಸ್ಟ್‌ನ ಹಿಂದಿನ ಆವೃತ್ತಿಗಳನ್ನು ವೀಕ್ಷಿಸಲು ಬಳಕೆದಾರರು ಎಡಿಟ್‌ ಟ್ವೀಟ್‌ನ ಲೇಬಲ್ ಮೇಲೆ ಕ್ಲಿಕ್‌ ಮಾಡಿದರೆ ಸಾಕು.

ನಿಮಗೆ ಏನು ಅನ್ನಿಸ್ತು?
0 ವೋಟ್