ಟ್ವಿಟರ್‌ ಸುದ್ದಿ | ಸೆಪ್ಟೆಂಬರ್‌ 21ರಿಂದ ಸಾರ್ವಜನಿಕ ಪರೀಕ್ಷೆಗೆ ಮುಕ್ತಗೊಂಡ ಪೋಸ್ಟ್‌ ಎಡಿಟ್‌ ಆಯ್ಕೆ

Twitter
  • ಟ್ವೀಟ್‌ ತಿದ್ದುಪಡಿ ಮಾಡುವ, ಹೊಸ ಅಂಶ ಸೇರಿಸುವ ಆಯ್ಕೆ
  • ಟ್ವೀಟ್‌ ಪ್ರಕಟಿಸಿದ ನಂತರ 30 ನಿಮಿಷದಲ್ಲಿ ಎಡಿಟ್‌ ಮಾಡಲು ಸಾಧ್ಯ

ಬಳಕೆದಾರರ ಬಹುದಿನಗಳ ಬೇಡಿಕೆ ಈಡೇರುವ ಸಮಯ ಬಂದಿದೆ. ಸಾಮಾಜಿಕ ಜಾಲತಾಣಿಗರ ನೆಚ್ಚಿನ ಟ್ವಿಟರ್‌ ವೇದಿಕೆಯು, ಪೋಸ್ಟ್‌ ಎಡಿಟ್‌ ಮಾಡುವ ಆಯ್ಕೆಯನ್ನು ಸೆಪ್ಟೆಂಬರ್‌ 21ರಂದು ಸಾರ್ವಜನಿಕ ಪರೀಕ್ಷೆಗಾಗಿ ಮುಕ್ತಗೊಳಿಸಲಿದೆ ಎಂದು ಬರಹಗಾರ ಕೇಸಿ ನ್ಯೂಟನ್‌ ವರದಿ ಮಾಡಿದ್ದಾರೆ.

"ನನ್ನೊಂದಿಗೆ ಹಂಚಿಕೊಂಡ ಆಂತರಿಕ ದಾಖಲೆಗಳ ಪ್ರಕಾರ ಟ್ವೀಟ್‌ಗಳನ್ನು ಎಡಿಟ್ ಮಾಡುವ ಆಯ್ಕೆಯ ಸಾರ್ವಜನಿಕ ಪರೀಕ್ಷೆಯನ್ನು ಸೆಪ್ಟೆಂಬರ್‌ 21ರಂದು ಪ್ರಾರಂಭಿಸಲು ಟ್ವಿಟರ್ ಯೋಜಿಸುತ್ತಿದೆ" ಎಂದು ನ್ಯೂಟನ್  ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.

ಸದ್ಯಕ್ಕೆ ʻಟ್ವಿಟರ್ ಬ್ಲೂʼನಲ್ಲಿ ಎಡಿಟ್ ಬಟನ್ ಲಭ್ಯವಿರುವುದಿಲ್ಲ. ʻಟ್ವಿಟರ್ ಬ್ಲೂʼ ವೈಶಿಷ್ಟ್ಯವು ಅಮೆರಿಕ, ಕೆನಡಾ, ಆಸ್ಟ್ರೇಲಿಯಾದಲ್ಲಿ ಲಭ್ಯವಿದೆ. ನ್ಯೂಜಿಲೆಂಡ್‌ನಲ್ಲಿರುವ ʼಟ್ವಿಟರ್‌ ಬ್ಲೂʼ ಚಂದಾದಾರರಿಗೆ ಮಾತ್ರ ಪೋಸ್ಟ್‌ ಎಡಿಟ್‌ ಆಯ್ಕೆಯನ್ನು ಪರಿಚಯಿಸುತ್ತಿದೆ ಎಂದು ನ್ಯೂಟನ್ ವಿವರಿಸಿದರು.

ಈ ಸುದ್ದಿ ಓದಿದ್ದೀರಾ?: ಭಾರತ್ ಜೋಡೋ ಯಾತ್ರೆ | ಪುತಿಯಾಕಾವು ಜಂಕ್ಷನ್‌ನಿಂದ ನಡಿಗೆ ಆರಂಭ; ರಾರಾಜಿಸಿದ ಧ್ವಜಗಳು

ಕೆಲವು ವಾರಗಳ ಹಿಂದೆ, ʻಟ್ವಿಟರ್‌ ಬ್ಲೂʼ ಚಂದಾದಾರರಿಗೆ ಪೋಸ್ಟ್‌ ಎಡಿಟ್‌ ಮಾಡುವ ಆಯ್ಕೆಯನ್ನು ಪರಿಚಯಿಸುವುದಾಗಿ ತಿಳಿಸಿತ್ತು. ಆದರೆ, ಅವರು ತಿಂಗಳಿಗೆ 4.99 ಡಾಲರ್‌ (ಸುಮಾರು 397ರೂ) ಪಾವತಿಸುವ ಬಳಕೆದಾರರಿಗೆ ಶೀಘ್ರದಲ್ಲೇ ಈ ಹೊಸ ಆಯ್ಕೆ ಲಭ್ಯವಾಗಲಿದೆ ಎಂದು ಟ್ವಿಟರ್‌ ತಿಳಿಸಿತ್ತು.

"ಟ್ವೀಟ್ ಎಡಿಟ್ ಮಾಡುವುದು ಒಂದು ವೈಶಿಷ್ಟ್ಯವಾಗಿದ್ದು, ಈ ಆಯ್ಕೆ ಪರಿಚಯಗೊಂಡ ನಂತರ ಬಳಕೆದಾರರು ತಮ್ಮ ಟ್ವೀಟ್‌ನಲ್ಲಿ ಏನಾದರೂ ತಿದ್ದುಪಡಿ ಮಾಡುವುದು, ಹೊಸ ಅಂಶಗಳನ್ನು ಸೇರಿಸಲು ಈ ಹೊಸ ಆಯ್ಕೆಯು ಅನುವು ಮಾಡಿಕೊಡುತ್ತದೆ. ಪದ ದೋಷಗಳನ್ನು ಸರಿಪಡಿಸುವುದು, ತಪ್ಪಿದ ಟ್ಯಾಗ್‌ಗಳನ್ನು ಸೇರಿಸುವ ಆಯ್ಕೆಯು ಟ್ವೀಟ್‌ ಮಾಡಿದ ಅಲ್ಪಸಮಯದವರೆಗೂ ಲಭ್ಯವಿರುತ್ತದೆʼʼ ಎಂದು ಟ್ವಿಟರ್‌ ತನ್ನ ಸೆಪ್ಟೆಂಬರ್ 1 ರಂದು ಹೇಳಿಕೆಯಲ್ಲಿ ತಿಳಿಸಿತ್ತು.

“ಸೆಪ್ಟೆಂಬರ್‌ 21ರಿಂದ ಸಾರ್ವಜನಿಕರಿಗೆ ಪೋಸ್ಟ್‌ ಎಡಿಟ್‌ ಮಾಡುವ ಆಯ್ಕೆ ಲಭ್ಯವಿದ್ದು, ಟ್ವೀಟ್‌ಗಳನ್ನು ಪ್ರಕಟಿಸಿದ ನಂತರ 30 ನಿಮಿಷಗಳಲ್ಲಿ ಕೆಲವು ಬಾರಿ ಎಡಿಟ್‌ ಮಾಡಲು ಸಾಧ್ಯವಾಗುತ್ತದೆ. ಸಂಪಾದಿತ ಟ್ವೀಟ್‌ಗಳು ಐಕಾನ್, ಟೈಮ್‌ ಸ್ಟ್ಯಾಂಪ್ ಮತ್ತು ಲೇಬಲ್‌ನೊಂದಿಗೆ ಗೋಚರಿಸುತ್ತವೆ. ಆದ್ದರಿಂದ ಮೂಲ ಟ್ವೀಟ್ ಅನ್ನು ಮಾರ್ಪಡಿಸಲಾಗಿದೆ ಎಂಬುದು ಓದುಗರಿಗೆ ಸ್ಪಷ್ಟವಾಗುತ್ತದೆ. ಲೇಬಲ್ ಆಯ್ಕೆಯನ್ನು ಕ್ಲಿಕ್‌ ಮಾಡಿದರೆ ಟ್ವೀಟ್‌ನ ಎಡಿಟ್‌ ಮಾಡಿದ್ದರ ಹಿಂದೆ ಏನೆಂದು ಬರೆಯಲಾಗಿತ್ತು ಎಂಬುದು ತಿಳಿಯುತ್ತದೆ. ಇದು ಟ್ವೀಟ್‌ನ ಹಿಂದಿನ ಆವೃತ್ತಿಗಳನ್ನು ಒಳಗೊಂಡಿರುತ್ತದೆ” ಎಂದು ಕಂಪನಿಯು ತಿಳಿಸಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್