ಉತ್ತರ ಪ್ರದೇಶ | 500 ಕೆ ಜಿ ಗಾಂಜಾ ಹೊಡೆದ ಇಲಿಗಳು; ಸಾಕ್ಷ್ಯ ಕೇಳಿದ ಕೋರ್ಟ್‌

  • 500 ಕೆ ಜಿ ಗಾಂಜಾ ತಿಂದ ಇಲಿಗಳು ಇನ್ನೂ ಬದುಕಿವೆಯೇ?
  • ಪೊಲೀಸರ ಈ ವಿಚಿತ್ರ ಹೇಳಿಕೆಯ ಸತ್ಯಾಸತ್ಯತೆಯೇನು? 

"ಉತ್ತರ ಪ್ರದೇಶದ ಶೇರ್‌ಗಢ್‌ ಮತ್ತು ಹೈವೇ ಪೊಲೀಸ್‌ ಠಾಣೆಗಳ ಗೋದಾಮುಗಳಲ್ಲಿ ಜಪ್ತಿ ಮಾಡಿ ಸಂಗ್ರಹಿಸಲಾಗಿದ್ದ 500 ಕೆ.ಜಿ ಗಾಂಜಾವನ್ನು ಇಲಿಗಳು ತಿಂದಿವೆ" ಎಂದು ಮಥುರಾ ಪೊಲೀಸರು, ಎನ್‌ಡಿಪಿಎಸ್‌ (ವಿಶೇಷ ನಾರ್ಕೋಟಿಕ್ ಡ್ರಗ್ಸ್ ಆ್ಯಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ ಆಕ್ಟ್ -1985) ಅಡಿಯಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. 

"2022ರ ಆರಂಭದಲ್ಲಿ ನ್ಯಾಯಾಲಯವು ಎನ್‌ಡಿಪಿಎಸ್‌ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಹಾಜರು ಪಡಿಸಬೇಕು" ಎಂದು ಮಥುರಾ ಪೊಲೀಸರಿಗೆ ಸೂಚಿಸಿತ್ತು. ಇದಕ್ಕೆ ಪ್ರತಿಯಾಗಿ ಪೊಲೀಸರು, "ಸುಮಾರು 500 ಕೆ.ಜಿ ಗಾಂಜಾವನ್ನು ಇಲಿಗಳು ತಿಂದಿವೆ, ಈಗ ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ ಡ್ರಗ್ಸ್‌ ಇಲ್ಲ" ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 

ಇದೇ ವೇಳೆ, "ಇಲಿಗಳು ಚಿಕ್ಕದಾಗಿದ್ದರೂ ಅವು ಪೊಲೀಸರಿಗೆ ಭಯ ಪಡಲ್ಲ, ಇಲಿಗಳನ್ನು ನಿಭಾಯಿಸುವಷ್ಟು ಜಾಣತನ ಪೊಲೀಸರಿಗೆ ಇಲ್ಲ" ಎಂದು ಹಿರಿಯ ಅಧಿಕಾರಿಗಳು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಈ ಪ್ರತಿಕ್ರಿಯೆ ಕೇಳಿ ಅಚ್ಚರಿಗೊಂಡ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಮಥುರಾ ಎಸ್‍ಎಸ್‍ಪಿ ಅಭಿಷೇಕ್ ಯಾದವ್ ಅವರಿಗೆ ಇಲಿ ಕಾಟ ನಿವಾರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜತೆಗೆ, "581 ಕೆ ಜಿ ಗಾಂಜಾ (60 ಲಕ್ಷ ರೂ. ಮೌಲ್ಯ)ವನ್ನು ಇಲಿಗಳು ತಿಂದಿವೆ ಎಂಬುದಕ್ಕೆ ಸೂಕ್ತ ಪುರಾವೆಯನ್ನು ನ್ಯಾಯಾಲಯಕ್ಕೆ ಒದಗಿಸಬೇಕು" ಎಂದು ಆದೇಶಿಸಿದರು. 

ಗೋದಾಮುಗಳಲ್ಲಿ ಸಂಗ್ರಹವಾಗಿರುವ ವಸ್ತುಗಳನ್ನು ಸಂರಕ್ಷಿಸಲು ಮತ್ತು ಪ್ರಯೋಜನಕ್ಕೆ ಬಾರದ ವಸ್ತುಗಳನ್ನು ವಿಲೇವಾರಿ ಮಾಡಲು ನ್ಯಾಯಾಲಯವು ಪೊಲೀಸರಿಗೆ ಐದು ನಿರ್ದೇಶನಗಳನ್ನು ನೀಡಿದೆ. ಈ ವೇಳೆ, ಮಥುರಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಾರ್ತಾಂಡ್‌ ಪಿ ಸಿಂಗ್‌ ನ್ಯಾಯಾಲಯದ ಆದೇಶ ಪಾಲಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಸಮ್ಮತಿಸಿದ ನ್ಯಾಯಾಧೀಶರು ನ.26ಕ್ಕೆ ವಿಚಾರಣೆ ಮುಂದೂಡಿದ್ದಾರೆ.

2020ರ ಮೇ ತಿಂಗಳಲ್ಲಿ ರಾಗಿ ಚೀಲದಲ್ಲಿ ಬಚ್ಚಿಟ್ಟು ಗಾಂಜಾ ಸಾಗಿಸುತ್ತಿದ್ದ ಟ್ರಕ್‌ ಅನ್ನು ತಡೆಹಿಡಿಯಲಾಗಿತ್ತು. ಈ ವೇಳೆ, ಪೊಲೀಸರು 386 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಿದ್ದರು. 

2021ರಲ್ಲಿ ಮದ್ಯ ಸೇವಿಸಿದ್ದ ಇಲಿಗಳು!

"2021ರಲ್ಲಿ ಇಟಾಹ್‌ ಜಿಲ್ಲೆಯ ಕೊತ್ವಾಲಿ ದೇಹತ್‌ ಠಾಣಾ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿದ್ದ 35 ಲಕ್ಷ ರೂ. ಮೌಲ್ಯದ ಮದ್ಯವನ್ನು ಇಲಿಗಳು ಕುಡಿದಿವೆ" ಎಂದು ಪೊಲೀಸರು ಹೇಳಿದ್ದರು! ಈ ಸಂಬಂಧ ಆಗ್ರಾ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ) ರಾಜೀವ್ ಕೃಷ್ಣ ಅವರು ಅಲಿಘರ್‌ನ ಐಪಿಎಸ್ ಅಧಿಕಾರಿಯೊಬ್ಬರಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು.

ಈ ಸುದ್ದಿ ಓದಿದ್ದೀರಾ?: ಚುನಾವಣಾ ಆಯುಕ್ತರ ನೇಮಕ | ಅರುಣ್‌ ಗೋಯೆಲ್‌ ಅವರ ತರಾತುರಿ ನೇಮಕಾತಿ ಯಾಕೆ?: ಕೇಂದ್ರಕ್ಕೆ ʻಸುಪ್ರೀಂʼ ಚಾಟಿ

"ವಶಪಡಿಸಿಕೊಂಡ ಮದ್ಯವನ್ನು ಪೊಲೀಸರು ದರೋಡೆಕೋರ ಬಂಟು ಯಾದವ್‌ಗೆ ಮಾರಾಟ ಮಾಡಿದ್ದಾರೆ" ಎಂದು ಅಧಿಕಾರಿ ವರದಿ ಸಲ್ಲಿಸಿದ್ದರು. ಬಳಿಕ ಠಾಣಾಧಿಕಾರಿ ಇಂದ್ರೇಶ್‌ಪಾಲ್ ಸಿಂಗ್ ಮತ್ತು ಮುಖ್ಯ ಗುಮಾಸ್ತ ರಸಾಲ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180