ಉತ್ತರಪ್ರದೇಶ | ದಲಿತ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿದ ರೌಡಿ ಶೀಟರ್

gun firing
  • ತನ್ನ ಅಕ್ರಮ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದ್ದ ಎಂಬ ಕಾರಣ
  • ಹತ್ಯೆಯ ಬಳಿಕ ತಲೆಮರೆಸಿಕೊಂಡಿರುವ ಮೂವರು ಆರೋಪಿಗಳು

ತನ್ನ ಅಕ್ರಮ ಚುಟುವಟಿಕೆಗಳಿಗೆ ಅಡ್ಡಿಯಾಗಿದ್ದ ಎಂಬ ಕಾರಣಕ್ಕೆ ದಲಿತ ಕಾರ್ಯಕರ್ತನನ್ನು ರೌಡಿ ಶೀಟರ್ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಠಾಕುರ್‌ದ್ವಾರದಲ್ಲಿ ನಡೆದಿದೆ.

“ಅತುಲ್ ಶರ್ಮಾ ಪಂಡಿತ್ ಸೂಚನೆ ಮೇರೆಗೆ ರೌಡಿ ಶೀಟರ್ ಬಿಲಾಲ್ ಮತ್ತು ಗೋಲು ಎಂಬುವರು, ದಲಿತ ಕಾರ್ಯಕರ್ತ ವಿಶಾಲ್ ವಾಲ್ಮೀಕಿಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಮೃತನ ಕುಟುಂಬದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಐದು ತಂಡಗಳನ್ನು ರಚಿಸಲಾಗಿದೆ” ಎಂದು ಮೊರಾದಾಬಾದ್ ಎಸ್‌ಪಿ ಹೇಮರಾಜ್ ಮೀನಾ ತಿಳಿಸಿದ್ದಾರೆ.

Eedina App

ಆರೋಪಿಗಳಾದ ಅತುಲ್ ಶರ್ಮಾ, ಬಿಲಾಲ್ ಮತ್ತು ಗೋಲು ವಿರುದ್ಧ ಐಪಿಸಿ ಸೆಕ್ಷನ್ 302, 120 ಬಿ ಹಾಗೂ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

“ನನ್ನ ಮಗ ಇತ್ತೀಚೆಗೆ ಬಲಪಂಥೀಯ ಸಂಘಟನೆಗೆ ಸೇರಿದ್ದ ಮತ್ತು ಎಲ್ಲ ಸಮುದಾಯಗಳ ಯುವಕರಲ್ಲಿ ಆತನ ಜನಪ್ರಿಯತೆ ಹೆಚ್ಚುತ್ತಿತ್ತು. ದಲಿತನೊಬ್ಬ ಜನಪ್ರಿಯನಾಗುತ್ತಿರುವುದನ್ನು ಒಪ್ಪಿಕೊಳ್ಳಲು ಶರ್ಮಾಗೆ ಸಾಧ್ಯವಾಗಲಿಲ್ಲ” ಎಂದು ವಿಶಾಲ್ ಅವರ ತಂದೆ ಮುಖೇಶ್ ವಾಲ್ಮೀಕಿ ಆರೋಪಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಅಸ್ಪೃಶ್ಯತೆ ಹೇಳಿಕೆ ವಿವಾದ| ಎಚ್ ಡಿ ಕುಮಾರಸ್ವಾಮಿ ದಲಿತ ಸಮುದಾಯದ ಕ್ಷಮೆ ಕೇಳಲು ಆಗ್ರಹ

ಪ್ರಕರಣದ ತನಿಖೆ ನಡೆಸುತ್ತಿರುವ ಠಾಕುರ್‌ದ್ವಾರದ ಸರ್ಕಲ್ ಆಫೀಸರ್ ಅರ್ಪಿತ್ ಕಪೂರ್ ಮಾತನಾಡಿ, “ಕೊಲೆಯ ನಂತರ ಪರಿಸ್ಥಿತಿ ಉದ್ವಿಗ್ನವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಅವರನ್ನು ಶೀಘ್ರವೇ ಬಂಧಿಸಲಾಗುವುದು” ಎಂದು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app