ಉತ್ತರ ಪ್ರದೇಶ | ವಿದ್ಯಾರ್ಥಿನಿಯನ್ನು 18 ಗಂಟೆಗಳ ಕಾಲ ತರಗತಿಯಲ್ಲಿ ಬಿಟ್ಟು ಬೀಗ ಹಾಕಿದ ಶಾಲಾ ಸಿಬ್ಬಂದಿ!

  • ತಡವಾಗಿ ಬೆಳಕಿಗೆ ಬಂದ ಮಗುವನ್ನು ತರಗತಿಯಲ್ಲಿ ಬಿಟ್ಟಿರುವ ವಿಷಯ 
  • ಮನೆಗೆ ಮರಳದ ಮಗುವಿಗಾಗಿ ರಾತ್ರಿ ಎಲ್ಲ ಹುಡುಕಾಡಿದ್ದ ಪೋಷಕರು

ಒಂದನೇ ತರಗತಿ ವಿದ್ಯಾರ್ಥಿನಿಯನ್ನು 18 ಗಂಟೆಗಳ ಕಾಲ ತರಗತಿಯಲ್ಲಿ ಬಿಟ್ಟು ಬೀಗ ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಶಾಲಾ ಸಿಬ್ಬಂದಿ ವಿದ್ಯಾರ್ಥಿನಿ ತರಗತಿ ಕೊಠಡಿ ಒಳಗೆ ಇರುವುದನ್ನು ಗಮನಿಸದೆ ಬೀಗ ಹಾಕಿಕೊಂಡು ಹೋಗಿದ್ದಾರೆ.

“ಗುನ್ನೌರ್ ತಾಹಸಿಲ್‌ನ ಧನರಿ ಪಟ್ಟಿಯಲ್ಲಿರುವ ಪ್ರಾಥಮಿಕ ಶಾಲೆಯ ಏಳು ವರ್ಷದ ವಿದ್ಯಾರ್ಥಿನಿಯನ್ನು ಶಾಲೆಯಲ್ಲಿ ಬಿಟ್ಟು ಬೀಗ ಹಾಕಲಾಗಿತ್ತು. ರಾತ್ರಿಯೆಲ್ಲ ಬಾಲಕಿ ಶಾಲೆ ಒಳಗೆ ಇದ್ದಳು. ಬೆಳಗ್ಗೆ ಬಂದು ನೋಡಿದಾಗ ಶಾಲೆಯಲ್ಲಿ ಬಿಟ್ಟಿರುವುದು ತಿಳಿದು ಬಂದಿದೆ. ವಿದ್ಯಾರ್ಥಿನಿಗೆ ಯಾವುದೇ ಸಮಸ್ಯೆಯಾಗಿಲ್ಲ, ಆರೋಗ್ಯವಾಗಿದ್ದಾಳೆ. ಇದು ನಿರ್ಲಕ್ಷ್ಯದ ಪ್ರಕರಣವಾಗಿದ್ದು, ಎಲ್ಲ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಅಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಬಿಎಸ್ಸಿ ನರ್ಸಿಂಗ್, ಬಿಪಿಟಿ, ಬಿಪಿಒ ಹಾಗೂ ಅಲೈಡ್ ಹೆಲ್ತ್ ಸೈನ್ಸ್ ಪ್ರವೇಶಾತಿ: ಆನ್‌ಲೈನ್ ನೋಂದಣಿ ದಿನಾಂಕ ವಿಸ್ತರಣೆ

"ಮಗು ಮನೆಗೆ ಹಿಂದಿರುಗದ ಕಾರಣ ಗಾಬರಿಗೊಂಡ ಬಾಲಕಿಯ ಅಜ್ಜಿ ಶಾಲೆಗೆ ಪರಿಶೀಲಿಸಲು ಹೋದಾಗ, ಶಾಲೆಯಲ್ಲಿ ಯಾರೂ ಇಲ್ಲ" ಎಂದು ತಿಳಿಸಿದ್ದಾಗಿ ಆಕೆಯ ಚಿಕ್ಕಪ್ಪ ತಿಳಿಸಿದ್ದಾರೆ.

ನಂತರ ಪೋಷಕರು ಮತ್ತು ಕುಟುಂಬದವರು ಮಗುವಿಗಾಗಿ ರಾತ್ರಿಯಿಡೀ ಎಲ್ಲ ಕಡೆ ಹುಡುಕಾಡಿದ್ದರೂ ಮಗು ಪತ್ತೆಯಾಗಿರಲಿಲ್ಲ. 

ನಿಮಗೆ ಏನು ಅನ್ನಿಸ್ತು?
0 ವೋಟ್