ಉತ್ತರ ಪ್ರದೇಶ| ಎಸ್‌ಪಿ ನಾಯಕನ ಕಾರಿಗೆ ಟ್ರಕ್ ಡಿಕ್ಕಿ, 500 ಮೀಟರ್ ಎಳೆದೊಯ್ದ ವಾಹನ

Samajwadi Party leader Devendra Singh Yadav's car was hit by a truck
  • ಟ್ರಕ್ ನಿಂತ ನಂತರ ಕಾರಿನಲ್ಲಿದ್ದ ಎಸ್‌ಪಿ ನಾಯಕ ದೇವೇಂದ್ರ ಯಾದವ್ ರಕ್ಷಿಸಿದ ಜನ
  • ಟ್ರಕ್ ಕಾರನ್ನು ಎಳೆದೊಯ್ಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಉತ್ತರ ಪ್ರದೇಶದ ಮೈನ್ಪುರಿಯಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ದೇವೇಂದ್ರ ಸಿಂಗ್ ಯಾದವ್ ಅವರ ಕಾರಿಗೆ ಟ್ರಕ್‌ವೊಂದು ಡಿಕ್ಕಿ ಹೊಡೆದಿದೆ. ಬಳಿಕ ಕಾರನ್ನು 500 ಮೀಟರ್ವರೆಗೆ ಎಳೆದೊಯ್ದಿದೆ. 

ಘಟನೆಯು ಭಾನುವಾರ (ಆಗಸ್ಟ್ 7) ತಡರಾತ್ರಿ ನಡೆದಿದೆ ಎಂದು ಎಎನ್ಐ ವರದಿ ಮಾಡಿದೆ. ಕಾರಿನಲ್ಲಿದ್ದ ದೇವೇಂದ್ರ ಸಿಂಗ್ ಅವರನ್ನು ರಕ್ಷಿಸಲಾಗಿದೆ. ಯಾವುದೇ ರೀತಿಯ ಅಪಾಯ ಉಂಟಾಗಿಲ್ಲ ಎನ್ನಲಾಗಿದೆ. 

ಈ ಸುದ್ದಿ ಓದಿದ್ದೀರಾ? ಅಯೋಧ್ಯೆ ಭೂ ಅವ್ಯವಹಾರ | ಬಿಜೆಪಿಯ ಶಾಸಕ, ಮೇಯರ್‌ ಮೇಲೆ ಆರೋಪ

ಕಾರನ್ನು ಎಳೆದೊಯ್ಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.   
ದೇವೇಂದ್ರ ಯಾದವ್‌ ಅವರ ಕಾರಿಗೆ ಡಿಕ್ಕಿ ಹೊಡೆದ ನಂತರ ಟ್ರಕ್‌ ಕಾರನ್ನು ಸ್ವಲ್ಪ ದೂರ ಎಳೆದುಕೊಂಡು ಹೋಗಿದೆ. ಟ್ರಕ್‌ ನಿಲ್ಲುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ಟ್ರಕ್ ಅತ್ತ ಧಾವಿಸಿ ಬಂದು ಕಾರಿನಲ್ಲಿದ್ದ ಎಸ್‌ಪಿಯ ದೇವೇಂದ್ರ ಯಾದವ್‌ ಅವರನ್ನು ರಕ್ಷಿಸಿದ್ದಾರೆ. ಪಕ್ಷದ ಕಚೇರಿಯಿಂದ ದೇವೇಂದ್ರ ಅವರು ತಮ್ಮ ನಿವಾಸಕ್ಕೆ ಹಿಂತಿರುಗುತ್ತಿದ್ದರು. 

ಸಮಾಜವಾದಿ ಪಕ್ಷದ ಮೈನ್ಪುರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ದೇವೇಂದ್ರ ಸಿಂಗ್ ಅವರ ಕಾರನ್ನು ಎಳೆದೊಯ್ದಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೈನ್ಪುರಿಯ ಪೊಲೀಸ್ ವರಿಷ್ಠಾಧಿಕಾರಿ ಕಮಲೇಶ್ ದೀಕ್ಷಿತ್ ತಿಳಿಸಿದರು. 

ಘಟನೆಗೆ ಸಂಬಂಧಿಸಿ ದೇವೇಂದ್ರ ಯಾದವ್ ಅವರು ಮೈನ್ಪುರಿ ಸಾದರ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ಇಟಾವ ಮೂಲದ ಟ್ರಕ್ ಚಾಲಕನನ್ನು ಬಂಧಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
1 ವೋಟ್