ವಾಹನಗಳಿಗೆ ಕ್ರ್ಯಾಶ್ ಟೆಸ್ಟ್; ನಿತಿನ್ ಗಡ್ಕರಿ ಘೋಷಣೆ

crash test
  • ವಾಹನಗಳಿಗೆ ಸ್ಟಾರ್ ರೇಟಿಂಗ್ ವ್ಯವಸ್ಥೆ
  • ಕ್ರ್ಯಾಶ್ ಟೆಸ್ಟ್ ಘೋಷಿಸಿದ ನಿತಿನ್ ಗಡ್ಕರಿ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೋಮವಾರ ಸರಣಿ ಟ್ವೀಟ್‌ಗಳನ್ನು ಮಾಡಿ ದೇಶದಲ್ಲಿ ಶೀಘ್ರವೇ ‘ಕ್ರ್ಯಾಶ್ ಟೆಸ್ಟ್’ (ಅಪಘಾತ ಪರೀಕ್ಷೆ) ಮಾಡಿಸಿ ವಾಹನಗಳಿಗೆ ಸ್ಟಾರ್ ರೇಟಿಂಗ್ (ಶ್ರೇಯಾಂಕ) ಕೊಡುವ ವ್ಯವಸ್ಥೆ ಜಾರಿಗೆ ತರುವುದಾಗಿ ಹೇಳಿದ್ದಾರೆ. 

ಕಾರುಗಳಲ್ಲಿ ರಚನಾತ್ಮಕ ಮತ್ತು ಪ್ರಯಾಣಿಕರ ಸುರಕ್ಷೆಯ ದೃಷ್ಟಿಯಿಂದ, ಭಾರತೀಯ ಆಟೋಮೊಬೈಲ್‌ಗಳ ರಫ್ತು ಮೌಲ್ಯವನ್ನು ವೃದ್ಧಿಸುವ ದೃಷ್ಟಿಯಿಂದಲೂ ಈ ರೇಟಿಂಗ್ ಕೊಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಭಾರತ್ ಎನ್‌ಸಿಎಪಿ (ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ) ಎನ್ನುವ ಹೊಸ ಕಾರು ಪರಾಮರ್ಶೆ ಕಾರ್ಯಕ್ರಮವನ್ನು ನಿತಿನ್ ಗಡ್ಕರಿ ಅವರು ಪರಿಚಯಿಸಿದ್ದು, ಕ್ರ್ಯಾಶ್ ಟೆಸ್ಟ್‌ನಲ್ಲಿ ದಕ್ಷತೆಗೆ ಅನುಗುಣವಾಗಿ ವಾಹನಗಳಿಗೆ ಸ್ಟಾರ್ ರೇಟಿಂಗ್ ನೀಡುವ ವ್ಯವಸ್ಥೆಯನ್ನು ತರಲಾಗುವುದು ಎಂದು ಹೇಳಿದ್ದಾರೆ. ಭಾರತದಲ್ಲಿ ಮೂಲ ಸಾಧನ ತಯಾರಕರ ನಡುವೆ ಆರೋಗ್ಯಕರವಾದ ಸ್ಪರ್ಧೆಯನ್ನು ಪ್ರೋತ್ಸಾಹಿಸುವ ಉದ್ದೇಶವೂ ಈ ಯೋಜನೆ ಹೊಂದಿದೆ. 

ಈ ಸುದ್ದಿಯನ್ನು ಓದಿದ್ದೀರಾ? ಲಾರಿ ಚಾಲಕರ ಜೀವನ ಸುಧಾರಿಸಲು ಬೇಕಿದೆ ತಂತ್ರಜ್ಞಾನ

ಎನ್‌ಸಿಎಪಿಯಲ್ಲಿ ಜಾಗತಿಕ ಪರೀಕ್ಷಾ ನಿಯಮ ಅಳವಡಿಸಿಕೊಂಡು ಭಾರತೀಯ ನಿಯಮಗಳನ್ನು ರೂಪಿಸಲಾಗುವುದು. ಹೀಗಾಗಿ ವಾಹನಗಳನ್ನು ಭಾರತೀಯ ಪರೀಕ್ಷಾ ಸೌಲಭ್ಯಗಳಲ್ಲಿ ತಪಾಸಣೆ ಮಾಡಿಕೊಳ್ಳುವ ಅವಕಾಶ ಲಭ್ಯವಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್