ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡುವುದು ದೇಶದ್ರೋಹ| ಕೇಜ್ರಿವಾಲ್‌; ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು

Arvind Kejriwal
  • ‘ಆಮ್‌ ಆದ್ಮಿ ಪಕ್ಷವು ಭಾರತೀಯತೆಯನ್ನು ತರಲು ಪ್ರಯತ್ನಿಸುತ್ತಿದೆ’
  • ‘ಸಚಿವರಿಗೆ ಮಾತ್ರ ಉಚಿತ ವಿದ್ಯುತ್‌ ಸೌಲಭ್ಯ, ನಾಗರಿಕರಿಗೇಕಿಲ್ಲ?’

ಸೋಮವಾರ (ಆಗಸ್ಟ್‌ 8) ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಉಚಿತ ಕೊಡುಗೆಗಳ ರೇವ್ಡಿ ಸಂಸ್ಕೃತಿಯನ್ನು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. 

ಈ ಸುದ್ದಿ ಓದಿದ್ದೀರಾ? ನೂಪುರ್ ಶರ್ಮಾ ಹೇಳಿಕೆ | ನಿರೂಪಕಿ ನಾವಿಕಾ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ಆದೇಶ

“ರೇವ್ಡಿ ಸಂಸ್ಕೃತಿಯನ್ನು ಟೀಕಿಸುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಜೊತೆ ಮಿತ್ರತ್ವ ಹೊಂದಿರುವವರ ₹ 10 ಲಕ್ಷ ಕೋಟಿ ಮೌಲ್ಯದ ಸಾಲವನ್ನು ಮನ್ನಾ ಮಾಡಿದೆ. ಸರ್ಕಾರದ ಈ ರೀತಿಯ ಕ್ರಮವನ್ನು ದೇಶದ್ರೋಹ ಎಂದು ಕರೆಯಲು ಕಾನೂನು ರೂಪಿಸಬೇಕು. ಈ ಕ್ರಮ ಕೈಗೊಂಡವರನ್ನು ಜೈಲಿಗೆ ಹಾಕಬೇಕು” ಎಂದು ಕಿಡಿಕಾರಿದರು. 

ಸುದ್ದಿಗೋಷ್ಠಿಯ ಇತರ ಪ್ರಮುಖ ಅಂಶಗಳು:
 
1.ಬಿಜೆಪಿಯ ಮಿತ್ರತ್ವವಾದ ಮತ್ತು ಕಾಂಗ್ರೆಸ್‌ನ ವಂಶಾಡಳಿತವನ್ನು ಪರೋಕ್ಷವಾಗಿ ಟೀಕಿಸಿದ ಕೇಜ್ರಿವಾಲ್

2.ತಮ್ಮ ಆಮ್‌ ಆದ್ಮಿ ಪಕ್ಷವು ಭಾರತೀಯತೆಯನ್ನು ತರಲು ಪ್ರಯತ್ನಿಸುತ್ತಿದೆ. 

3.ಸಚಿವರಿಗೆ ಮಾತ್ರ ಉಚಿತ ವಿದ್ಯುತ್‌ ಸೌಲಭ್ಯ, ನಾಗರಿಕರಿಗೇಕಿಲ್ಲ? –ಕೇಜ್ರಿವಾಲ್ ಪ್ರಶ್ನೆ

4.ನಾಗರಿಕರಿಗೆ ಕೇಂದ್ರ ಸರ್ಕಾರದಿಂದ ಉತ್ತಮ ಗುಣಮಟ್ಟದ ಶಿಕ್ಷಣ, ಉಚಿತ ಆರೋಗ್ಯ ಸೇವೆ, ಪ್ರತಿ ಮನೆಗೂ 300 ಯೂನಿಟ್‌ ಉಚಿತ ವಿದ್ಯುತ್‌, ನಿರುದ್ಯೋಗ ಭತ್ಯೆ ನೀಡುವಂತೆ ಕೇಜ್ರಿವಾಲ್‌ ಒತ್ತಾಯ

5.ಕೇಂದ್ರದಿಂದ ₹10 ಲಕ್ಷ ಕೋಟಿ ಸಾಲ ಮನ್ನಾ ಆದವರನ್ನು ದೇಶದ್ರೋಹಿಗಳೆಂದು ಕರೆಯಬೇಕು. ಅವರ ವಿರುದ್ಧ ತನಿಖೆಯಾಗಬೇಕು-ಕೇಜ್ರಿವಾಲ್‌ ಒತ್ತಾಯ.

ನಿಮಗೆ ಏನು ಅನ್ನಿಸ್ತು?
0 ವೋಟ್