ಮೆಟಾ ಸುದ್ದಿ | ವಾಟ್ಸ್‌ಆ್ಯಪ್‌ನ ಭಾರತ ಮುಖ್ಯಸ್ಥ ಹುದ್ದೆಗೆ ಗುಡ್‌ಬೈ ಹೇಳಿದ ಅಭಿಜಿತ್‌ ಬೋಸ್‌

  • ಮೆಟಾ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಮುಖ್ಯಸ್ಥರ ರಾಜೀನಾಮೆ
  • ಜಾಗತಿಕವಾಗಿ 11 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದ್ದ ಮೆಟಾ ಸಂಸ್ಥೆ

ವಾಟ್ಸ್‌ಆ್ಯಪ್‌ನ ಭಾರತದ ಮುಖ್ಯಸ್ಥ ಅಭಿಜಿತ್‌ ಬೋಸ್‌ ಮತ್ತು ಮೆಟಾ ಇಂಡಿಯಾದ ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥ ರಾಜೀವ್‌ ಅಗರ್‌ವಾಲ್‌ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಪ್ರಸ್ತುತ ವಾಟ್ಸ್‌ಆ್ಯಪ್‌ನ ಭಾರತದ ಸಾರ್ವಜನಿಕ ನೀತಿ ನಿರ್ದೇಶಕ ಶಿವನಾಥ್‌ ತುಕ್ರಾಲ್‌ ಅವರನ್ನು ಭಾರತದ ಎಲ್ಲ ಮೆಟಾ ಬ್ರಾಂಡ್‌ಗಳ ಸಾರ್ವಜನಿಕ ನೀತಿ ವಿಭಾಗದ ನಿರ್ದೇಶಕರನ್ನಾಗಿ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Eedina App

ಜಾಗತಿಕವಾಗಿ ಸುಮಾರು 11 ಸಾವಿರ ಉದ್ಯೋಗಿಗಳನ್ನು ಮೆಟಾ ಕಂಪನಿ ವಜಾಗೊಳಿಸಿದೆ. ಫೇಸ್‌ಬುಕ್‌ನ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಅತಿ ದೊಡ್ಡ ಸಂಖ್ಯೆಯಲ್ಲಿ ಸಿಬ್ಬಂದಿ ವಜಾಗೊಳಿಸಿತ್ತು. ಉದ್ಯೋಗಿಗಳ ವಜಾ ಘೋಷಣೆಯಾದ ಒಂದೇ ವಾರದಲ್ಲಿ ಭಾರತದಲ್ಲಿ ಮೆಟಾ ಮುಖ್ಯಸ್ಥ ಅಜಿತ್‌ ಮೋಹನ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

“ವಾಟ್ಸ್‌ಆ್ಯಪ್‌ ಭಾರತದ ಮೊದಲ ಮುಖ್ಯಸ್ಥ ಅಭಿಜಿತ್‌ ಬೋಸ್‌ ಅವರ ಅಪಾರ ಕೊಡುಗೆಗಳಿಗಾಗಿ ನಾನು ಅವರಿಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸುತ್ತೇನೆ. ಅವರ ಉದ್ಯಮಶೀಲತೆಯು ನಮ್ಮ ತಂಡವು ಹೊಸ ಸೇವೆಗಳನ್ನು ನೀಡಲು ಸಹಾಯ ಮಾಡಿತು. ಆ ಸೇವೆಗಳಿಂದ ಲಕ್ಷಾಂತರ ಜನರು ಮತ್ತು ವ್ಯವಹಾರಗಳಿಗೆ ಪ್ರಯೋಜನವಾಗಿದೆ. ಭಾರತದಲ್ಲಿ ವಾಟ್ಸ್‌ಆ್ಯಪ್‌ ಮಾಡಬೇಕಾದ ಕೆಲಸ ಇನ್ನೂ ಇದೆ. ದೇಶದಲ್ಲಿ ಡಿಜಿಟಲ್ ರೂಪಾಂತರ ಮುಂದುವರಿಸಲು ಇನ್ನಷ್ಟು ಸಹಾಯ ಮಾಡಲು ನಾವು ಉತ್ಸುಕರಾಗಿದ್ದೇವೆ” ಎಂದು ವಾಟ್ಸ್‌ಆ್ಯಪ್‌ ಮುಖ್ಯಸ್ಥ ವಿಲ್‌ ಕ್ಯಾತ್‌ಕರ್ಟ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

AV Eye Hospital ad

ಈ ಸುದ್ದಿ ಓದಿದ್ದೀರಾ?: ಮುರುಘಾ ಶ್ರೀ ಪ್ರಕರಣ | ಪ್ರಗತಿಪರ ಸಂಘಟನೆಗಳಿಂದ ರಾಷ್ಟ್ರಪತಿ, ಪ್ರಧಾನಿ, ಎನ್‌ಎಚ್‌ಆರ್‌ಸಿಗೆ ಪತ್ರ

ಬೋಸ್‌ ಅವರ ಬದಲಿಗೆ ಮತ್ತೊಬ್ಬರನ್ನು ಶೀಘ್ರದಲ್ಲೇ ನೇಮಿಸಲಾಗುವುದು ಎಂದು ಮಾಧ್ಯಮಗಳು ವರದಿ ಮಾಡಿವೆ. ರಾಜೀವ್ ಅಗರ್‌ವಾಲ್‌ ಅವರಿಗೆ ಮತ್ತೊಂದು ಅವಕಾಶ ಒದಗಿರುವುದರಿಂದ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂದು ಕಂಪನಿ ತಿಳಿಸಿದೆ.

“ಮಾಜಿ ದೂರದರ್ಶನ ಪತ್ರಕರ್ತ, ತುಕ್ರಾಲ್ 2017ರಿಂದ ಮೆಟಾ ಭಾರತದ ಸಾರ್ವಜನಿಕ ನೀತಿ ತಂಡದ ಭಾಗವಾಗಿದ್ದಾರೆ. ಆ ನಂತರ ಅವರು ವಾಟ್ಸ್‌ಆ್ಯಪ್‌ ತಂಡದೊಂದಿಗೆ ಕೆಲಸ ಮಾಡುತ್ತಿದ್ದರು. ಪ್ರಸ್ತುತ ತುಕ್ರಾಲ್ ಅವರು ತಮ್ಮ ಹೊಸ ಪಾತ್ರದಲ್ಲಿ ಭಾರತದಲ್ಲಿನ ಮೆಟಾ ಆ್ಯಪ್‌ಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತು ವಾಟ್ಸ್‌ಆ್ಯಪ್‌ಗಳಾದ್ಯಂತ ನೀತಿ ಅಭಿವೃದ್ಧಿ ತಂಡವನ್ನು ಮುನ್ನಡೆಸಲಿದ್ದಾರೆ” ಎಂದು ಭಾರತದ ಪಾಲುದಾರಿಕೆಗಳ ನಿರ್ದೇಶಕ ಮನೀಶ್ ಚೋಪ್ರಾ ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app