ಇಂಗ್ಲೆಂಡ್‌ನಲ್ಲಿ ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಸರ್ವರ್‌ ಡೌನ್‌: ವರದಿ

  • ಇಂಗ್ಲೆಂಡ್‌ನಲ್ಲಿ ಮತ್ತೆ ವಾಟ್ಸ್‌ಆ್ಯಪ್‌ ಸರ್ವರ್‌ ಡೌನ್‌
  • ಅನನುಕೂಲತೆಗೆ ಕ್ಷಮೆಯಾಚಿಸಿದ ಮೆಟಾ ವಕ್ತಾರರು

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಷನ್‌ ವಾಟ್ಸ್‌ಆ್ಯಪ್‌ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ, 2 ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ವಾಟ್ಸ್‌ಆ್ಯಪ್‌, ಇಂದು ಮತ್ತೆ ಕೆಲಕಾಲ ಸ್ಥಗಿತಗೊಂಡಿರುವುದಾಗಿ ಇಂಗ್ಲೆಂಡ್‌ನಲ್ಲಿ ವರದಿಯಾಗಿದೆ. ವಾಟ್ಸ್‌ಆ್ಯಪ್‌ ಮಾತ್ರವಲ್ಲದೇ, ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ಕೂಡ ಸ್ಥಗಿತಗೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಇಂಗ್ಲೆಂಡ್‌ನಲ್ಲಿ ಮೆಟಾದ ಎಲ್ಲ ಸೇವೆಗಳು ಕೆಲಕಾಲ ಸ್ಥಗಿತಗೊಂಡಿದ್ದವು. ಈ ಬಗ್ಗೆ ಟ್ವಿಟರ್‌ನಲ್ಲಿ ಬಳಕೆದಾರರು ವಾಟ್ಸ್‌ಆ್ಯಪ್‌ ಬಳಕೆ ಮಾಡಲು ಸಾಧ್ಯವಾಗದೇ ಇದ್ದಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

Eedina App

ʻʻಇಂದು ಬೆಳಗ್ಗೆ ಕಾನ್ಫಿಗರೇಷನ್‌ನಲ್ಲಿನ ಬದಲಾವಣೆಯಿಂದಾಗಿ ನಮ್ಮ ಸಾಮಾಜಿಕ ಜಾಲತಾಣಗಳನ್ನು ಬಳಸುವಲ್ಲಿ ಕೆಲವರಿಗೆ ತೊಂದರೆ ಉಂಟಾಗಿದೆ. ಈ ಸಮಸ್ಯೆಯನ್ನು ಈಗಾಗಲೇ ಪರಿಹರಿಸಿದ್ದೇವೆ. ಈ ಅನನುಕೂಲತೆಗಾಗಿ ನಾವು ಕ್ಷಮೆ ಯಾಚಿಸುತ್ತೇವೆʼʼ ಎಂದು ಮೆಟಾ ವಕ್ತಾರರೊಬ್ಬರು ಹೇಳಿಕೆ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಅಕ್ಟೋಬರ್‌ 25ರಂದು ವಾಟ್ಸ್‌ಆ್ಯಪ್‌ ಕೆಲಕಾಲ ಬಳಕೆದಾರರಿಗೆ ಲಭ್ಯವಿರಲಿಲ್ಲ. ಮೆಸೆಂಜರ್ ಆ್ಯಪ್‌ ಮೂಲಕ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು, ಧ್ವನಿ ಮತ್ತು ವಿಡಿಯೋ ಕರೆಗಳನ್ನು ನಡೆಸಲು ಅಥವಾ ಯಾರಿಗಾದರೂ ಫೈಲ್‌ಗಳನ್ನು ಕಳುಹಿಸಲು ಸಾಧ್ಯವಾಗದೇ ಇದ್ದದ್ದರ ಬಗ್ಗೆ ಹಲವು ದೂರುಗಳು ಬಂದಿದ್ದರು. ಸುಮಾರು ಎರಡು ಗಂಟೆಗಳ ನಂತರ ವಾಟ್ಸ್‌ಆ್ಯಪ್‌ ಮತ್ತೆ ಕಾರ್ಯಾರಂಭಿಸಿತು.

AV Eye Hospital ad

ಈ ಸುದ್ದಿ ಓದಿದ್ದೀರಾ?: ಬಿಎಂಟಿಸಿ | ಕಡಿಮೆ ಖರ್ಚಿನ ಇ ಬಸ್‌ ಬಿಟ್ಟು ಹೆಚ್ಚು ವೆಚ್ಚ ಬೇಡುವ 840 ಡೀಸೆಲ್ ಬಸ್‌ ಖರೀದಿಗೆ ಮುಂದಾದ ಸಂಸ್ಥೆ!

ಹೀಗೆ ಮೆಸೇಜಿಂಗ್‌ ಆ್ಯಪ್‌ ಸ್ಥಗಿತಗೊಂಡ ಸಂದರ್ಭದಲ್ಲಿ, ಸಂವಹನ ಮುಂದುವರಿಸಲು ಪರ್ಯಾಯ ಸೇವೆಗಳನ್ನು ಅವಲಂಬಿಸಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಸಂದೇಶಗಳನ್ನು ಕಳುಹಿಸಲು ಲಾವೋಸ್ ಟೆಲಿಗ್ರಾಮ್, ಸಿಗ್ನಲ್ ಮತ್ತು ಇತರ ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳನ್ನು ಬಳಸಬಹುದು.

ಅಕ್ಟೋಬರ್‌ 25ರಂದು ವಾಟ್ಸ್‌ಆ್ಯಪ್‌ ಸೇವೆ ಸ್ಥಗಿತಗೊಂಡಿದ್ದರ ಕುರಿತು ಕಂಪನಿಯು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಮೆಟಾ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗೆ ದೀರ್ಘಾವಧಿಯ ಸೇವೆಯ ಅಡಚಣೆಗೆ ಕಾರಣಗಳನ್ನು ತಿಳಿಸುವಂತೆ ಸಚಿವಾಲಯವು ಕಂಪನಿಗೆ ಮಾಹಿತಿ ಕೇಳಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app