ಟೆಕ್‌ ಸುದ್ದಿ | ಸಮೀಕ್ಷೆ ನಡೆಸುವ ಹೊಸ ಆಯ್ಕೆ ಪರಿಚಯಿಸುತ್ತಿದೆ ವಾಟ್ಸ್‌ಆ್ಯಪ್‌

  • ವಾಟ್ಸ್‌ಆ್ಯಪ್‌ ಪರಿಚಯಿಸಲಿದೆ ಸಮೀಕ್ಷೆ ರಚಿಸುವ ಆಯ್ಕೆ
  • ವೈಶಿಷ್ಟ್ಯ ರಚನೆಯಲ್ಲಿ ಕಾರ್ಯನಿರತವಾಗಿರುವ ವಾಟ್ಸ್‌ಆ್ಯಪ್‌

ಭಾರತದ ಜನಪ್ರಿಯ ಸಾಮಾಜಿಕ ಜಾಲತಾಣ ಹಾಗೂ ಬಳಕೆದಾರರ ನೆಚ್ಚಿನ ಅಪ್ಲಿಕೇಷನ್‌ಗಳಲ್ಲಿ ಒಂದಾದ ವಾಟ್ಸ್‌ಆ್ಯಪ್ ಒಂದಿಲ್ಲೊಂದು ವೈಶಿಷ್ಟ್ಯಗಳನ್ನು ಪರಿಚಯಿಸುವುದರ ಮೂಲಕ ಚರ್ಚೆಯಲ್ಲಿದೆ. ಈವರೆಗೂ ಪಠ್ಯ ಸಂದೇಶಗಳು, ಆಡಿಯೋ, ವಿಡಿಯೋ, ಡಾಕ್ಯುಮೆಂಟ್‌ಗಳು ಹಾಗೂ ಫೋಟೋ ಕಳಿಸಲು ಸಹಕಾರಿಯಾಗಿದ್ದ ವಾಟ್ಸ್‌ಆ್ಯಪ್ ಪ್ರಸ್ತುತ ಮತ್ತೊಂದು ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದೆ. 

ಈವರೆಗೂ ಟ್ವಿಟರ್‌, ಫೇಸ್‌ಬುಕ್‌ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಸಮೀಕ್ಷೆ (ಪೋಲ್‌) ರಚಿಸುವ ಆಯ್ಕೆ ಇತ್ತು. ಈಗ, ವಾಟ್ಸ್‌ಆ್ಯಪ್‌ನಲ್ಲಿಯೂ ಪೋಲ್ ರಚಿಸಿ ಅಭಿಪ್ರಾಯ ಸಂಗ್ರಹಿಸಬಹುದಾಗಿದೆ. 

ವಾಟ್ಸ್‌ಆ್ಯಪ್ ಬೀಟಾ ಇನ್ಫೋ ಒದಗಿಸಿದ್ದ ಮಾಹಿತಿಯ ಪ್ರಕಾರ, ವಾಟ್ಸ್‌ಆ್ಯಪ್ ಗ್ರೂಪಿನಲ್ಲಿ ಇರುವವರು ಗ್ರೂಪಿನ ಇತರ ಸದಸ್ಯರ ಅಭಿಪ್ರಾಯ ಸಂಗ್ರಹಿಸಲು ಸಮೀಕ್ಷೆ ರಚಿಸುವ ನಿಟ್ಟಿನಲ್ಲಿ ವಾಟ್ಸ್‌ಆ್ಯಪ್ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಲಾಗಿತ್ತು.

ಈ ಸುದ್ದಿ ಓದಿದ್ದೀರಾ?: ನ್ಯಾಯಾಧೀಶ ಎಸ್‌ ಕೃಷ್ಣಕುಮಾರ್‌ ವರ್ಗಾವಣೆ ಆದೇಶಕ್ಕೆ ಕೇರಳ ಹೈಕೋರ್ಟ್‌ ತಡೆ

ಪ್ರಸ್ತುತ ವಾಟ್ಸ್‌ಆ್ಯಪ್ ಬೀಟಾ ಆವೃತ್ತಿಯಲ್ಲಿ ಈ ಹೊಸ ಆಯ್ಕೆಯು ಕಾರ್ಯನಿರ್ವಹಿಸಲಿದೆ. ವಾಟ್ಸ್‌ಆ್ಯಪ್ ಸಮೀಕ್ಷೆಯನ್ನು  ಆ್ಯಂಡ್ರಾಯ್ಡ್ 2.22.20.11 ಅಪ್‌ಡೇಟ್‌ನಲ್ಲಿ ಪಡೆಯಬಹುದಾಗಿದೆ ಎಂದು ವಾಟ್ಸ್‌ಆ್ಯಪ್ ಬೀಟಾ ಇನ್ಫೊ ಮಾಹಿತಿ ಬಹಿರಂಗಪಡಿಸಿದೆ.

ಈ ಸೃಜನಾತ್ಮಕ ಸಮೀಕ್ಷೆ ರಚಿಸುವ ವೈಶಿಷ್ಟ್ಯವು ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು, ಮುಂಬರುವ ಅಪ್‌ಡೇಟ್‌ನಲ್ಲಿ  ಈ ವೈಶಿಷ್ಟ್ಯ ಪರಿಚಯಿಸಲಾಗುವುದು ಎಂದು ಕಂಪನಿ ತಿಳಿಸಿದ್ದು, ಆದರೆ, ನಿಖರವಾದ ದಿನಾಂಕ ತಿಳಿಸಿಲ್ಲ.

ಮಾಹಿತಿಯ ಪ್ರಕಾರ, ವಾಟ್ಸ್‌ಆ್ಯಪ್ ಚಾಟ್ ಆಕ್ಷನ್ ಶೀಟ್‌ನಲ್ಲಿ ಈ ಹೊಸ ವೈಶಿಷ್ಟ್ಯ ಬಳಸುವ ಆಯ್ಕೆ ನೀಡಲಾಗುವುದು ಎನ್ನಲಾಗುತ್ತಿದೆ. ವಾಟ್ಸ್‌ಆ್ಯಪ್ ಡೆಸ್ಕ್‌ಟಾಪ್ ಬೀಟಾ ಮತ್ತು ವಾಟ್ಸ್‌ಆ್ಯಪ್ ಬೀಟಾದ ಭವಿಷ್ಯದ ಅಪ್‌ಡೇಟ್‌ನಲ್ಲಿ ಈ ಹೊಸ ಆಯ್ಕೆ  ನೀಡಲಾಗುವುದು ಎಂದು ಕಂಪನಿಯು ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್