ಗಾಲಿಕುರ್ಚಿ ವಿಡಿಯೋ ವೈರಲ್‌ | ಸ್ವಿಗ್ಗಿ ಡೆಲಿವರಿ ಏಜೆಂಟ್‌ ಆದ ವಿಶೇಷ ಚೇತನ ಮಹಿಳೆ

  • ಸ್ವಿಗ್ಗಿ ಡೆಲಿವರಿ ಏಜೆಂಟ್‌ ಆಗಿ ಕೆಲಸ ಮಾಡುತ್ತಿರುವ ವಿಶೇಷ ಚೇತನ ಮಹಿಳೆ
  • ಗಾಲಿ ಕುರ್ಚಿಯಲ್ಲಿ ಕುಳಿತೇ ಕೆಲಸ ಮಾಡುವ ಮಹಿಳೆಯ ವಿಡಿಯೋ ವೈರಲ್‌

ಮಹಿಳೆಯರು ಫುಡ್‌ ಡೆಲಿವರಿ ಏಜೆಂಟ್‌ಗಳಾಗಿ, ಆಟೋ, ಬಸ್‌ ಡ್ರೈವರ್‌ಗಳಾಗಿ ಕೆಲಸ ಮಾಡುವುದು ಸಾಮಾನ್ಯ ಸಂಗತಿ. ಎಲ್ಲ ಬಗೆಯ ಉದ್ಯೋಗವಕಾಶಗಳಲ್ಲಿ ಸಮಾನ ಅವಕಾಶ ಪಡೆಯಲು ಮಹಿಳೆಯರು ಸದಾ ಪ್ರಯತ್ನಿಸುತ್ತಿರುತ್ತಾರೆ. ಇದೀಗ ವಿಶೇಷ ಚೇತನ ಮಹಿಳೆಯೊಬ್ಬರು ಗಾಲಿ ಕುರ್ಚಿಯಲ್ಲಿ ಕುಳಿತೇ ಸ್ವಿಗ್ಗಿ ಡೆಲಿವರಿ ಏಜೆಂಟ್‌ ಆಗಿ ಕೆಲಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ವೀಡಿಯೋ ಹಂಚಿಕೊಂಡಿರುವ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್‌, ʻʻಹೌದು, ಜೀವನವೆಷ್ಟೇ ಕಷ್ಟವಿರಬಹುದು. ಆದರೆ, ನಾವು ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಈ ಸ್ಫೂರ್ತಿ ಚೇತನಕ್ಕೆ ತುಂಬು ಹೃದಯದ ವಂದನೆಗಳುʼʼ ಎಂದು ಟ್ವೀಟ್‌ ಮಾಡಿದ್ದಾರೆ.

Eedina App

ಈ ವಿಡಿಯೋವನ್ನು ಈವರೆಗೂ 44 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಂಗವೈಕಲ್ಯವನ್ನು ಸವಾಲಾಗಿ ಸ್ವೀಕರಿಸಿ ದುಡಿಯುತ್ತಿರುವ ಯುವತಿಯ ಇಚ್ಛಾಶಕ್ತಿ ಮತ್ತು ಕಠಿಣ ಪರಿಶ್ರಮವನ್ನು ಅನೇಕ ಜನರು ಶ್ಲಾಘಿಸಿದ್ದಾರೆ.

AV Eye Hospital ad

ಈ ಸುದ್ದಿ ಓದಿದ್ದೀರಾ?: ಉತ್ತರ ಪ್ರದೇಶ | ಅಪ್ರಾಪ್ತೆ ಮೇಲೆ ಅತ್ಯಾಚಾರ; ನಿವೃತ್ತ ಶಾಲಾ ಶಿಕ್ಷಕನಿಗೆ 10 ವರ್ಷ ಜೈಲು ಸಜೆ

“ಮಹಿಳೆಯ ಕಠಿಣ ಪರಿಶ್ರಮವನ್ನು ನಾನು ಅಭಿನಂದಿಸುತ್ತೇನೆ. ಆದರೆ ಈ ವಿಡಿಯೋ ನನ್ನನ್ನು ಯೋಚಿಸುವಂತೆ ಮಾಡಿದೆ. ಸರ್ಕಾರ ಮತ್ತು ಸಮಾಜವಾಗಿ, ವಿಶೇಷ ಚೇತನರ ಅಗತ್ಯಗಳನ್ನು ಪೂರೈಸುವಲ್ಲಿ ನಾವು ವಿಫಲರಾಗಿದ್ದೇವೆ. ಆದ್ದರಿಂದಲೇ, ಅವರು ಇಂತಹ ಕಷ್ಟ ಅನುಭವಿಸಬೇಕಾಗಿದೆʼʼ ಎಂದು ಬಳಕೆದಾರರೊಬ್ಬರು ಟ್ವೀಟ್‌ ಮಾಡಿದ್ದಾರೆ.

"ತಮ್ಮ ಪರಿಸ್ಥಿತಿಗಳನ್ನು ಬದಲಾಯಿಸಲು ಹೋರಾಡುವವರು ಮತ್ತು ವಾಸ್ತವವನ್ನು ಇರುವಂತೆಯೇ ಸ್ವೀಕರಿಸುವವರು ಇದ್ದಾರೆ. ಇವರು ನಿಜವಾದ ಹೋರಾಟಗಾತಿʼʼ ಎಂದು ಅವರ ಸಾಧನೆಯನ್ನು ಮೆಚ್ಚಿ ಹಲವರು ಟ್ವೀಟ್‌ ಮಾಡಿದ್ದಾರೆ.

ವಿಶೇಷ ಚೇತನರೊಬ್ಬರು ಡೆಲಿವರಿ ಏಜೆಂಟ್‌ ಆಗಿ ಕೆಲಸ ಮಾಡುತ್ತಿರುವ ವಿಡಿಯೋ ವೈರಲ್ ಆಗಿರುವುದು ಇದೇ ಮೊದಲಲ್ಲ. ಕಳೆದ ಜುಲೈನಲ್ಲಿ, ಫುಡ್ ಡೆಲಿವರಿ ಕಂಪನಿಗಳಲ್ಲೊಂದಾದ ಜೊಮ್ಯಾಟೊ ಟೀ ಶರ್ಟ್ ಧರಿಸಿರುವ ವ್ಯಕ್ತಿ ವೀಲ್‌ಚೇರ್‌ನಲ್ಲಿ ಜನನಿಬಿಡ ರಸ್ತೆಯಲ್ಲಿ ಸವಾರಿ ಮಾಡುತ್ತಿರುವ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಿಗರಿಂದ ಪ್ರಶಂಸೆಗೊಳಗಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app