ಅತ್ಯಾಚಾರ ಸಂತ್ರಸ್ತರಿಗೆ ಎಚ್‌ಐವಿ ಪರೀಕ್ಷೆ; ದೆಹಲಿ ಆಸ್ಪತ್ರೆಗಳಿಗೆ ಮಹಿಳಾ ಆಯೋಗದ ಶಿಫಾರಸು

  • ಅತ್ಯಾಚಾರ ಸಂತ್ರಸ್ತರಿಗೆ ಎಚ್‌ಐವಿ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು
  • ಸಂತ್ರಸ್ತರಿಗೆ ಮೂರು ಮತ್ತು ಆರು ತಿಂಗಳಿಗೊಮ್ಮೆ ಕೌನ್ಸೆಲಿಂಗ್‌ ಮಾಡುತ್ತಿಲ್ಲ

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾದ ಎಲ್ಲಾ ಸಂತ್ರಸ್ತರಿಗೂ ಮೊದಲ ವೈದ್ಯಕೀಯ ಪರೀಕ್ಷೆ ನಡೆಸುವಾಗ ಕಡ್ಡಾಯವಾಗಿ ಎಚ್‌ಐವಿ ಪರೀಕ್ಷೆಗಳನ್ನು ನಡೆಸುವಂತೆ ದೆಹಲಿ ಮಹಿಳಾ ಆಯೋಗವು ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಿದೆ.

ಪ್ರಸ್ತುತ ಕೆಲವು ಆಸ್ಪತ್ರೆಗಳು ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರಲ್ಲಿ ಹಲವರಿಗೆ ಎಚ್‌ಐವಿ ಪರೀಕ್ಷೆಗಳನ್ನು ನಡೆಸುತ್ತಿಲ್ಲ ಎಂಬುದು ಸಮಿತಿಯ ಗಮನಕ್ಕೆ ಬಂದಿದ್ದು, ಆಸ್ಪತ್ರೆಗಳಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸುವಂತೆ ತಿಳಿಸಿದೆ.

Eedina App

ಅತ್ಯಾಚಾರ ಪ್ರಕರಣದ ಸಂತ್ರಸ್ತರು ಮತ್ತು ಆರೋಪಿಗಳು ಸೇರಿದಂತೆ ಒಟ್ಟು ಎಷ್ಟು ಪ್ರಕರಣಗಳಲ್ಲಿ ಎಚ್‌ಐವಿ ಪರೀಕ್ಷೆ ನಡೆಸಲಾಗಿದೆ? ಲೈಂಗಿಕ ದೌರ್ಜನ್ಯ ಸಂತ್ರಸ್ತರಿಗೆ ಎಚ್‌ಐವಿ ಹರಡದಂತೆ ತಡೆಯಲು ಅನುಸರಿಸುತ್ತಿರುವ ಕ್ರಮಗಳೇನು ಎನ್ನುವುದರ ಬಗ್ಗೆ ಮಾಹಿತಿ ಕೋರಿ ಆಯೋಗವು ದೆಹಲಿ ಸರ್ಕಾರದ ಆರೋಗ್ಯ ಇಲಾಖೆಗೆ ನೋಟಿಸ್‌ ನೀಡಿತ್ತು.

ಇಲಾಖೆಯಿಂದ ಸ್ವೀಕರಿಸಿದ ಮಾಹಿತಿಯ ಪ್ರಕಾರ, ಹಲವಾರು ಆಸ್ಪತ್ರೆಗಳು ಅತ್ಯಾಚಾರ ಸಂತ್ರಸ್ತರಿಗೆ ಎಚ್‌ಐವಿ ಪರೀಕ್ಷೆಗಳನ್ನು ಶಿಫಾರಸು ಮಾಡುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ ಎಂದು ಅಯೋಗವು ತಿಳಿಸಿದೆ.

AV Eye Hospital ad

ದೀಪ್‌ ಚಂದ್‌ ಬಂಧು ಆಸ್ಪತ್ರೆಯನ್ನು ಉಲ್ಲೇಖಿಸಿರುವ ಆಯೋಗವು, ಈ ಆಸ್ಪತ್ರೆಯೂ ಈವರೆಗೆ 180 ಮಂದಿ ಸಂತ್ರಸ್ತರಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಅದರಲ್ಲೂ ಕೆಲವೇ ಪ್ರಕರಣಗಳ ಸಂತ್ರಸ್ತರಿಗೆ ಎಚ್‌ಐವಿ ಪರೀಕ್ಷೆ ನಡೆಸಿದ್ದಾರೆ ಎಂದು ತಿಳಿಸಿದೆ.

"ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆ ಮತ್ತು ರಾವ್ ತುಲಾ ರಾಮ್ ಆಸ್ಪತ್ರೆಯಂತಹ ದೊಡ್ಡ ದೊಡ್ಡ ಆಸ್ಪತ್ರೆಗಳು, ಅತ್ಯಾಚಾರ ಸಂತ್ರಸ್ತರಿಗೆ ನಡೆಸಿದ ಎಚ್‌ಐವಿ ಪರೀಕ್ಷೆಗಳಿಗೆ ಸಂಬಂಧಿಸಿದ ದತ್ತಾಂಶವನ್ನು ಸಹ ನಿರ್ವಹಿಸುವುದಿಲ್ಲ. ಇದಲ್ಲದೆ, ಮೂರು ಮತ್ತು ಆರು ತಿಂಗಳ ನಂತರ ಮಾಡಬೇಕಾದ ಫಾಲೋ- ಅಪ್ ಎಚ್‌ಐವಿ ಪರೀಕ್ಷೆ ಮತ್ತು ಕೌನ್ಸೆಲಿಂಗ್‌ ಸಹ ಮಾಡುತ್ತಿಲ್ಲ. ಲೈಂಗಿಕ ದೌರ್ಜನ್ಯ ಸಂತ್ರಸ್ತರ ಆರೋಗ್ಯ ಮಾಹಿತಿಯ ದತ್ತಾಂಶಗಳನ್ನು ಆಸ್ಪತ್ರೆಗಳು ಸರಿಯಾಗಿ ದಾಖಲಿಸಿ, ನಿರ್ವಹಿಸುವುದಿಲ್ಲ" ಎಂದು ಸಮಿತಿ ಹೇಳಿದೆ.

ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು | ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ: ಮೂವರು ವೈದ್ಯರ ಮೇಲೆ ಪ್ರಕರಣ ದಾಖಲು

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌), ರಾವ್‌ ತುಲಾ ರಾಮ್‌ ಆಸ್ಪತ್ರೆ ಹಾಗೂ ಜಗ್‌ ಪ್ರವೇಶ್‌ ಚಂದ್ರ ಆಸ್ಪತ್ರೆಗಳು ಅತ್ಯಾಚಾರ ಸಂತ್ರಸ್ತರ ನಿಯಮಿತ ಆರೋಗ್ಯ ಪರೀಕ್ಷೆ ನಡೆಸುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಹೇಳಿಕೊಂಡಿದೆ ಎಂದು ಆಯೋಗವು ತಿಳಿಸಿದೆ.

ಕೇವಲ ಆಚಾರ್ಯಭಿಕ್ಷು ಸರ್ಕಾರಿ ಆಸ್ಪತ್ರೆ ಮತ್ತು ಪಶ್ಚಿಮ ಜಿಲ್ಲೆಯ ಗುರು ಗೋಬಿಂದ್ ಸಿಂಗ್ ಸರ್ಕಾರಿ ಆಸ್ಪತ್ರೆಗಳು ಆರೋಪಿಗಳ ಎಚ್‌ಐವಿ ಸ್ಥಿತಿಯ ಬಗ್ಗೆ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಮಹಿಳಾ ಆಯೋಗವು ವಿವರಿಸಿದೆ.

ಮಹಿಳಾ ಸಮಿತಿಯು ʻಇಂಟಿಗ್ರೇಟೆಡ್ ಕೌನ್ಸೆಲಿಂಗ್ ಮತ್ತು ಟೆಸ್ಟಿಂಗ್ ಸೆಂಟರ್ʼ (ಐಸಿಟಿಸಿ) ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ, ಹಲವಾರು ಸಂತ್ರಸ್ತರು ಎಚ್‌ಐವಿ ಪರೀಕ್ಷೆಗಾಗಿ ಮತ್ತೊಂದು ದಿನಕ್ಕಾಗಿ ಕಾಯುವಂತಹ ಪರಿಸ್ಥಿತಿ ಇದೆ ಎಂದು ಆಯೋಗವು ಬೇಸರ ವ್ಯಕ್ತಪಡಿಸಿದೆ.

ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರಿಗೆ ಎಚ್‌ಐವಿ ಚಿಕಿತ್ಸೆ ಮತ್ತು ಎಚ್‌ಐವಿಗೆ ತುತ್ತಾದವರಿಗೆ ಪ್ರಾಥಮಿಕ ಆರೈಕೆ ಪೂರೈಸಲಾಗುತ್ತಿದೆಯೇ ಎಂಬುದನ್ನು ಸರ್ಕಾರ ಮತ್ತು ಪೊಲೀಸರು ಖಚಿತಪಡಿಸಿಕೊಳ್ಳಬೇಕು ಎಂದು ಮಹಿಳಾ ಆಯೋಗವು ಶಿಫಾರಸ್ಸು ಮಾಡಿದೆ.

"ಎಲ್ಲ ಆಸ್ಪತ್ರೆಗಳು ಅತ್ಯಾಚಾರಕ್ಕೊಳಗಾದ ಸಂತ್ರಸ್ತರ ಎಚ್‌ಐವಿ ಪರೀಕ್ಷೆಯನ್ನು ಮೊದಲ ವೈದ್ಯಕೀಯ ಪರೀಕ್ಷೆ, ಮೂರು ಮತ್ತು ಆರು ತಿಂಗಳ ನಂತರ ಪರೀಕ್ಷಿಸಬೇಕು. ಎಲ್ಲ ಸಂತ್ರಸ್ತರಿಗೂ ಎಚ್‌ಐವಿ ಪರೀಕ್ಷಾ ಕಾರ್ಡ್‌ಗಳನ್ನು ನೀಡಿರುವ ದತ್ತಾಂಶವನ್ನು ನಿರ್ವಹಿಸುವಂತೆ ಆಯೋಗವು ಆಸ್ಪತ್ರೆಗಳಿಗೆ ಸಲಹೆ ನೀಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app