ಈ ಜಗತ್ತು | ಇಂಡೋ- ಪೆಸಿಫಿಕ್ ಪ್ರದೇಶದಲ್ಲಿ ಅಮೆರಿಕ, ಇಂಡೋನೇಷ್ಯ ಹಾಗೂ ಆಸ್ಟ್ರೇಲಿಯದ ಸಮರಾಭ್ಯಾಸ

  • ಇಂಡೋನೇಷ್ಯಾದಲ್ಲಿ ಸಮರಭ್ಯಾಸ ನಡೆಸಿದ ಅಮೆರಿಕ
  • ಬಲವಂತದ ನಾಪತ್ತೆ ಖಂಡಿಸಿ ಪಾಕಿಸ್ತಾನದಲ್ಲಿ ಪ್ರತಿಭಟನೆ
Image

ಇಂಗ್ಲೆಂಡ್‌

ಇಂಗ್ಲೆಂಡ್‌ನಲ್ಲಿ ಬರಸ್ಥಿತಿ ನಿರ್ಮಾಣ

ಇಂಗ್ಲೆಂಡ್‌ನ ದಕ್ಷಿಣ, ಮಧ್ಯ ಮತ್ತು ಪೂರ್ವ ಭಾಗಗಳು ಸುದೀರ್ಘ ಅವಧಿಯ ಬಿಸಿ ಮತ್ತು ಶುಷ್ಕ ಹವಾಮಾನದ ನಂತರ ಅಧಿಕೃತವಾಗಿ ಬರ ಸ್ಥಿತಿ ತಲುಪಿವೆ ಎಂದು ಬ್ರಿಟಿಷ್ ಸರ್ಕಾರ ಶುಕ್ರವಾರ (ಆಗಸ್ಟ್‌ 12) ಹೇಳಿದೆ.

1935ರಿಂದ ಇಂಗ್ಲೆಂಡ್‌ನಲ್ಲಿ ಜುಲೈ ಮಾಸ ಭಾರಿ ಬಿಸಿಲಿನ ತಾಪಮಾನ ಅನುಭವಿಸುತ್ತಿದೆ. ಇಲ್ಲಿ ತಿಂಗಳ ಸರಾಸರಿ ಮಳೆ ಶೇ. 35ರಷ್ಟು ಮಾತ್ರ ಇದೆ. ಇಂಗ್ಲೆಂಡ್ ಮತ್ತು ವೇಲ್ಸ್‌ನ ಕೆಲವು ಭಾಗಗಳು ಈಗ ನಾಲ್ಕು ದಿನಗಳ ‘ತೀವ್ರ ಶಾಖ’ದ ಎಚ್ಚರಿಕೆಯ ಹಂತದಲ್ಲಿವೆ.

"ಎಲ್ಲ ನೀರಿನ ಕಂಪನಿಗಳು ಅಗತ್ಯ ನೀರು ಸರಬರಾಜು ಒದಗಿಸುವ ಭರವಸೆ ನೀಡಿವೆ" ಎಂದು ಜಲ ಸಚಿವ ಸ್ಟೀವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಶುಷ್ಕ ಹವಾಮಾನ ಎದುರಿಸಲು ನಾವು ಹಿಂದಿನದಕ್ಕಿಂತಲೂ ಉತ್ತಮವಾಗಿ ಸಿದ್ಧರಾಗಿದ್ದೇವೆ. ಆದರೆ ರೈತರು ಮತ್ತು ಪರಿಸರದ ಮೇಲೆ ಪರಿಣಾಮಗಳನ್ನು ಒಳಗೊಂಡಂತೆ ನಾವು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ. ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಸಚಿವರು ಹೇಳಿದ್ದಾರೆ. 

ಇಂಗ್ಲೆಂಡಿನಲ್ಲಿ 2018ರಲ್ಲಿ ಕೊನೆಯ ಬಾರಿ ಬರಗಾಲ ತಲೆದೋರಿತ್ತು. 

Image
Gotabaya Rajapaksa

ಶ್ರೀಲಂಕಾ

ಗೊಟಬಯ ರಾಜಪಕ್ಸೆ ಸಿಂಗಾಪುರದಿಂದ ಥೈಲ್ಯಾಂಡ್‌ಗೆ

ಶ್ರೀಲಂಕಾದ ಪದಚ್ಯುತ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಸಿಂಗಾಪುರದಿಂದ ಥೈಲ್ಯಾಂಡ್ ತೆರಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

ಗುರುವಾರ (ಆಗಸ್ಟ್‌ 11) ಅವರ ಅಲ್ಪಾವಧಿಯ ಪಾಸ್‌ಪೋರ್ಟ್‌ ಅವಧಿ ಮುಕ್ತಾಯಗೊಂಡ ಕಾರಣ ಅವರು ಸಿಂಗಾಪುರ ತೊರೆದಿದ್ದಾರೆ. 

ದೇಶಕ್ಕೆ ಆಗಮಿಸಲು ಅವಕಾಶ ನೀಡುವಂತೆ ಪ್ರಸ್ತುತ ಶ್ರೀಲಂಕಾ ಸರ್ಕಾರದ ಮನವಿಯನ್ನು ಥೈಲ್ಯಾಂಡ್‌ ಪುರಸ್ಕರಿಸಿದ ನಂತರ ರಾಜಪಕ್ಸೆ ಅವರು ಸಿಂಗಾಪುರದಿಂದ ಬ್ಯಾಂಕಾಕ್‌ ವಿಮಾನ ನಿಲ್ದಾಣ ಏರಿದರು ಎಂದು ವರದಿ ಹೇಳಿದೆ. 

ಗೊಟಬಯ ರಾಜಪಕ್ಸೆ ಅವರು ಸಿಂಗಾಪುರವನ್ನು ತೊರೆದಿದ್ದಾರೆ ಎಂದು ಸಿಂಗಾಪುರದ ವಲಸೆ ಮತ್ತು ಚೆಕ್‌ ಪಾಯಿಂಟ್‌ಗಳ ಪ್ರಾಧಿಕಾರ ಹೇಳಿದೆ ಎಂದು 'ದಿ ಸ್ಟೇಟ್‌ ಟೈಮ್ಸ್‌' ಪತ್ರಿಕೆ ವರದಿ ಮಾಡಿದೆ. 

Image

ಇಂಡೋನೇಷ್ಯ

5000ಕ್ಕೂ ಹೆಚ್ಚು ಸೈನಿಕರಿಂದ ಸಮರಭ್ಯಾಸ

ಇಂಡೋ- ಪೆಸಿಫಿಕ್ ಪ್ರದೇಶದಲ್ಲಿ ಚೀನೀ ಸೈನಿಕರ ಕಡಲ ಚಟುವಟಿಕೆ ಹೆಚ್ಚುತ್ತಿರುವ ನಡುವೆ, ಸುಮಾತ್ರಾ ದ್ವೀಪದಲ್ಲಿ ಅಮೆರಿಕ, ಇಂಡೋನೇಷ್ಯ ಹಾಗೂ ಆಸ್ಟ್ರೇಲಿಯದ ಸೈನಿಕರು ಶುಕ್ರವಾರ ವಾರ್ಷಿಕ ಜಂಟಿ ಯುದ್ಧ ಸಮರಭ್ಯಾಸದ ನಡೆಸುತ್ತಿದ್ದಾರೆ.

ಅಮೆರಿಕ, ಇಂಡೋನೇಷ್ಯ, ಆಸ್ಟ್ರೇಲಿಯ, ಜಪಾನ್ ಹಾಗೂ ಸಿಂಗಾಪುರದಿಂದ ಒಟ್ಟು 5,000ಕ್ಕೂ ಹೆಚ್ಚು ಸೈನಿಕರು 2022ರ ಸೂಪರ್ ಗರುಡ ಶೀಲ್ಡ್ ಸಮರಭ್ಯಾಸದಲ್ಲಿ ಭಾಗವಹಿಸುತ್ತಿದ್ದಾರೆ. 2009ರಲ್ಲಿ ಸಮರಭ್ಯಾಸ ಪ್ರಾರಂಭವಾದಾಗಿನಿಂದ ಸೇರಿರುವ ಸೈನಿಕರ ಪ್ರಮಾಣ ಈ ಭಾರಿ ಅಧಿಕವಾಗಿದೆ. 

ಚೀನಾದ ಪ್ರಭಾವ ಹೆಚ್ಚುತ್ತಿರುವ ಇಂಡೋನೇಷ್ಯ ಪ್ರದೇಶದಲ್ಲಿ ಮಿಲಿಟರಿ ಮತ್ತು ರಾಜತಾಂತ್ರಿಕ ಪ್ರಭಾವ ಮಿತಿಗೊಳಿಸಲು 'ನ್ಯಾಟೊ'ದಂತಹ ಇಂಡೋ-ಪೆಸಿಫಿಕ್ ಮೈತ್ರಿಯನ್ನು ಅಮೆರಿಕ ನಿರ್ಮಿಸುತ್ತಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ಆರೋಪಿಸಿವೆ.

Image

ಪಾಕಿಸ್ತಾನ

ಪ್ರತಿಭಟನೆಗಳನ್ನು ನಿರ್ಬಂಧಿಸದಂತೆ ಕೇಳಿದ ಅಮ್ನೆಸ್ಟಿ ಸಂಸ್ಥೆ

ಬಲವಂತದ ನಾಪತ್ತೆಗೆ ನ್ಯಾಯ ಕೋರಿ ಕುಟುಂಬಗಳು ಪ್ರತಿಭಟನೆ ನಡೆಸುತ್ತಿವೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರ ಮೇಲಿನ ದೌರ್ಜನ್ಯವನ್ನು ತಕ್ಷಣವೇ ನಿಲ್ಲಿಸುವಂತೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಸಂಸ್ಥೆ ಗುರುವಾರ ಪಾಕಿಸ್ತಾನದ ಅಧಿಕಾರಿಗಳಿಗೆ ತಿಳಿಸಿದೆ.

ಬಲವಂತದ ನಾಪತ್ತೆಯು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ಗಂಭೀರ ಉಲ್ಲಂಘನೆ ಮತ್ತು ಅಂತಾರಾಷ್ಟ್ರೀಯ ಅಪರಾಧವಾಗಿದೆ ಎಂದು ಹೇಳಿದೆ. 

ಮಾನವ ಹಕ್ಕುಗಳ ಕಾವಲು ಸಮಿತಿಯು ಸರ್ಕಾರವು ಎಲ್ಲಾ ಬಂಧಿತರಿಗೆ ಅವರ ಬಂಧನಕ್ಕೆ ಕಾರಣಗಳನ್ನು ತಕ್ಷಣವೇ ತಿಳಿಸಬೇಕು ಮತ್ತು ಅವರ ಹಕ್ಕುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು ಎಂದು ಹೇಳಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180