ಈ ಜಗತ್ತು| ಸಲ್ಮಾನ್ ರಶ್ದಿ ದಾಳಿಕೋರನ ಗುರುತು ಪತ್ತೆ

  • ಅಮೆರಿಕದಲ್ಲಿ ಗರಿಷ್ಠ ತಾಪಮಾನ
  • ನ್ಯೂಜೆರ್ಸಿಯ ಫೇರ್‌ವ್ಯೂದ ಹಾದಿ ಮತರ್
Image

ಅಮೆರಿಕ

ಸಲ್ಮಾನ್ ರಶ್ದಿ ದಾಳಿಕೋರನ ಗುರುತು ಪತ್ತೆ

ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಶುಕ್ರವಾರ (ಆಗಸ್ಟ್‌ 12) ದಾಳಿ ನಡೆದ ಕೆಲವೇ ಸಮಯಗಳಲ್ಲಿ, ಚೂರಿಯಿಂದ ಇರಿದ ಶಂಕಿತನನ್ನು ಪೊಲೀಸರು ಬಂಧಿಸಿದ್ದರು. ನ್ಯೂಜೆರ್ಸಿಯ ಫೇರ್‌ವ್ಯೂದ ಹಾದಿ ಮತರ್ (24) ಎಂದು ಆತನನ್ನು ಗುರುತಿಸಲಾಗಿದೆ. ಶಂಕಿತ ಹಾದಿ ಮತರ್, ರಶ್ದಿ ಅವರ ಪರಿಚಯ ಆದ ಕೂಡಲೇ ವೇದಿಕೆಗೆ ಜಿಗಿದಿದ್ದ. ಕನಿಷ್ಠ ಒಂದು ಬಾರಿ ಕತ್ತು ಹಾಗೂ ಒಮ್ಮೆ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ ಎಂದು ನ್ಯೂಯಾರ್ಕ್ ಸ್ಟೇಟ್ ಪೊಲೀಸ್ ಇಲಾಖೆಯ ಮೇಜರ್ ಯೂಜೀನ್ ಸ್ಟಾನಿಜೆವ್‌ಸ್ಕಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Image

ಮೆಕ್ಸಿಕೊ
ಹಿಂಸಾಚಾರ 8 ಮಂದಿ ಸಾವು

ಮೆಕ್ಸಿಕೊದ ಗಡಿಭಾಗದ ನಗರ ಜುವಾರೆಝ್‌ನಲ್ಲಿ ಹಲವೆಡೆ ನಡೆದ ಹಿಂಸಾಚಾರದಲ್ಲಿ ಹಲವು ವ್ಯವಹಾರ ಸಂಸ್ಥೆಗಳು ಬೆಂಕಿಗೆ ಆಹುತಿಯಾಗಿದ್ದು  8 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಪ್ರಥಮ ಘಟನೆಯಲ್ಲಿ ಜೈಲಿನಲ್ಲಿ ಕೈದಿಗಳು ನಡೆಸಿದ ದೊಂಬಿಯಲ್ಲಿ ಇಬ್ಬರು ಕೈದಿಗಳು ಮೃತಪಟ್ಟಿದ್ದು 4 ಮಂದಿ ಗಾಯಗೊಂಡಿದ್ದಾರೆ ಎಂದು ಚಿಹುವಹುವಾ ರಾಜ್ಯದ ಜೈಲು ಅಧಿಕಾರಿಗಳು ಹೇಳಿದ್ದಾರೆ. ಜೈಲಿನಲ್ಲಿ ಬಂಧಿಯಾಗಿರುವ ಸಿನಾಲೊವ ಸಂಘಟನೆಯ ಸದಸ್ಯರು ದೊಂಬಿ ನಡೆಸಿದ್ದಾರೆ. ಸಂಘಟನೆಯ ಮಾಜಿ ಮುಖಂಡ ಜೊವಾಕ್ವಿನ್ ಎಲ್ ಚಾಪೊ ಈಗ ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ನಂತರ  ನಗರದ ರೆಸ್ಟೋರೆಂಟ್‌ ಒಂದರಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ.

Image

ಅಮೆರಿಕ 
ಅಮೆರಿಕದಲ್ಲಿ ಗರಿಷ್ಠ ತಾಪಮಾನ 

ಅಮೆರಿಕದಲ್ಲಿ ತಾಪಮಾನ ಗರಿಷ್ಠ ಮಟ್ಟಕ್ಕೇರಿದ್ದು ಸುಡುವ ಬಿಸಿಲಿನ ತಾಪ ತಾಳಲಾರದೆ ಗಾಡಿ ಎಳೆಯುವ ಕುದುರೆಯೊಂದು ರಸ್ತೆಯಲ್ಲೇ ಕುಸಿದು ಬಿದ್ದಿರುವ ಭಯಾನಕ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಮ್ಯಾನ್ಹಟನ್‌ನ ಹೆಲ್ಸ್ ಕಿಚನ್ ಪ್ರದೇಶದ ಡಬ್ಲೂ 45ನೇ ರಸ್ತೆ ಮತ್ತು 9ನೇ ಅವೆನ್ಯೂ ರಸ್ತೆ ಸಂಧಿಸುವ ಸ್ಥಳದಲ್ಲಿ ಕುದುರೆ ಕುಸಿದು ಬಿದ್ದಾಗ ಸ್ಥಳದಲ್ಲಿರುವವರು ಭೀತಿಯಿಂದ ಅತ್ತ ಗಮನ ಹರಿಸಿದ್ದಾರೆ. ಪ್ರಾಣಿಪ್ರಿಯರು ಕುದುರೆಗಾಡಿಯನ್ನು ನಿಷೇಧಿಸುವಂತೆ ಆಗ್ರಹಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Image

ಆಸ್ಟ್ರೇಲಿಯಾ 
ಬಲವಂತ ಲೈಂಗಿಕತೆಯನ್ನು ತಪ್ಪಿಸಲು ಕರಡು ರೂಪಿಸಿದ ಆಸ್ಟ್ರೇಲಿಯಾ 

ಬಲವಂತದ ಲೈಂಗಿಕತೆಯನ್ನು ತಪ್ಪಿಸಲು ರಾಷ್ಟ್ರೀಯ ಯೋಜನೆಯನ್ನು ರೂಪಿಸುವುದಾಗಿ ಆಸ್ಟ್ರೇಲಿಯಾ ಸರ್ಕಾರ ನಿರ್ಧರಿಸಿದೆ. ಫೆಡರಲ್ ಅಟಾರ್ನಿ-ಜನರಲ್ ಮಾರ್ಕ್ ಡ್ರೇಫಸ್ ಶುಕ್ರವಾರ (ಆಗಸ್ಟ್‌ 12) ಆಸ್ಟ್ರೇಲಿಯಾದ ರಾಜ್ಯಗಳು ಮತ್ತು ಪ್ರಾಂತ್ಯಗಳು ಮತ್ತು ನ್ಯೂಜಿಲೆಂಡ್‌ನ ತಮ್ಮ ಸಹವರ್ತಿಗಳೊಂದಿಗೆ ಲೈಂಗಿಕ ದೌರ್ಜನ್ಯಕ್ಕೆ ಕ್ರಿಮಿನಲ್ ನ್ಯಾಯದ ಪ್ರತಿಕ್ರಿಯೆಯನ್ನು ಬಲಪಡಿಸುವ ಕುರಿತು ಚರ್ಚಿಸಿದ್ದಾರೆ. ಮಹಿಳೆಯ ಮೇಲಿನ ದಬ್ಬಾಳಿಕೆಯ ನಿಯಂತ್ರಣವನ್ನು ಪರಿಹರಿಸಲು ರಾಷ್ಟ್ರೀಯ ತತ್ವಗಳ ಕರಡು ಪ್ರಸ್ತಾಪವನ್ನು ಸಭೆ ಅನುಮೋದಿಸಿದೆ ಎಂದು ಡ್ರೇಫಸ್ ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್