ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಯುವಜನತೆ; ನೆಟ್ಟಿಗರಲ್ಲಿ ಮತ್ತೆ ಚರ್ಚೆ ಹುಟ್ಟುಹಾಕಿದ ಕೋವಿಡ್ ವ್ಯಾಕ್ಸಿನ್!

Heart Attack Puneeeth Siddharth shukla raju siddanth vivek
  • ಜೀವಕ್ಕೆ ಕುತ್ತಾಗುತ್ತಿದೆಯೇ 'ಜಿಮ್‌' : ನಟ ಸಿದ್ಧಾಂತ್ ಸಾವಿನ ಬಳಿಕ ಮತ್ತೆ ಆರಂಭವಾದ ಚರ್ಚೆ
  • ಹಲವು ನಟರು, ಖ್ಯಾತನಾಮರು ಜಿಮ್‌ನಲ್ಲಿಯೇ ಮೃತಪಟ್ಟ ಬಳಿಕ ಮತ್ತೆ ಟ್ವಿಟರ್‌ನಲ್ಲಿ ಚರ್ಚೆ 

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲಿಯೂ ಕಡಿಮೆ ವಯಸ್ಸಿನ ಹಾಗೂ ಯುವಕರಲ್ಲಿ ಹೃದಯಾಘಾತ ಕಾಣಿಸಿಕೊಂಡು ಸಾವನ್ನಪ್ಪುತ್ತಿರುವುದು ಜನಸಾಮಾನ್ಯರಲ್ಲಿ ಒಂದು ರೀತಿಯ ಆತಂಕಕ್ಕೆ ಕಾರಣವಾಗಿದೆ.

ಕೋವಿಡ್‌ ನಂತರದಲ್ಲಿ ಹಲವರು ಹೃದಯಾಘಾದಿಂದ ಸಾವನ್ನಪ್ಪಿದ್ದಾರೆ. ಅದರಲ್ಲಿಯೂ ಯುವಕರು ಜಿಮ್‌ ವರ್ಕೌಟ್ ಮಾಡುವ ಸಂದರ್ಭದಲ್ಲಿ ಮೃತಪಟ್ಟಿದ್ದೇ ಹೆಚ್ಚು. ಅಲ್ಲದೇ, ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು ಮೃತಪಟ್ಟ ಬಳಿಕ ಇದು ಇನ್ನಷ್ಟು ಆತಂಕವನ್ನು ತಂದೊಡ್ಡಿದೆ.

Eedina App

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅಗಲಿದ ಚಿತ್ರರಂಗದಲ್ಲಿ ಗುರುತಿಸಿಕೊಂಡ ಹೆಸರುಗಳಾದ ಪವರ್ ಸ್ಟಾರ್ ಡಾ ಪುನೀತ್ ರಾಜ್‌ಕುಮಾರ್, ಬಾಲಿವುಡ್ ನಟರಾದ ಸಿದ್ಧಾರ್ಥ್ ಶುಕ್ಲಾ, ಗಾಯಕ ಕೆಕೆ, ನಿರ್ಮಾಪಕ ರಾಜ್ ಕೌಶಲ್, ಜನಪ್ರಿಯ ತಮಿಳು ನಟ ವಿವೇಕ್  ಇವರೆಲ್ಲರ ಹೆಸರುಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ ಜನಪ್ರಿಯ ಟಿವಿ ನಟ ಸಿದ್ದಾಂತ್ ಸೂರ್ಯವಂಶಿ ಅವರು ಶುಕ್ರವಾರ ಜಿಮ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವುದು.

ಸಿದ್ದಾಂತ್ ಅವರ ನಿಧನವು ಕೋವಿಡ್ ಬಳಿಕ ಹೆಚ್ಚಾಗುತ್ತಿರುವ ಹೃದಯಾಘಾತ, ಜಿಮ್ ವರ್ಕೌಟ್ ಮತ್ತು ಕೋವಿಡ್ ವ್ಯಾಕ್ಸಿನ್‌ನ ಸುತ್ತ ಮತ್ತೊಂದು ಸುತ್ತಿನ ಚರ್ಚೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದೆ.  ಟ್ವಿಟ್ಟರ್ ನಲ್ಲಿ #ಹಾರ್ಟ್‌ಅಟ್ಯಾಕ್‌ ದಿನವಿಡಿ ಟ್ರೆಂಡಿಂಗ್‌ನಲ್ಲಿತ್ತು.

AV Eye Hospital ad

 

ಇತ್ತೀಚೆಗೆ ಹಲವೆಡೆ ವರದಿಯಾಗುತ್ತಿರುವ ಹೃದಯಾಘಾತವು ಜಿಮ್‌ಗೆ ಹೋಗುತ್ತಿರುವ ಯುವಜನತೆಯಲ್ಲಿ ಒಂದು ರೀತಿಯ ಭಯದ ವಾತಾವರಣ ಸೃಷ್ಟಿಸಿದೆ. ಪುರುಷ ಸೆಲೆಬ್ರಿಟಿಗಳಲ್ಲಿ ಹೆಚ್ಚುತ್ತಿರುವ ಹೃದಯಾಘಾತವು ಹೆಚ್ಚುತ್ತಿರುವ ಒತ್ತಡ, ಖಿನ್ನತೆ ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಗಂಭೀರವಾಗಿ ಚರ್ಚಿಸುವಂತೆ ಮಾಡಿದೆ. ಇದಕ್ಕೆ ಕೋವಿಡ್ ವ್ಯಾಕ್ಸಿನ್ ಕೂಡ ಕಾರಣ ಎಂದು ಕೆಲವರು ಟ್ವಿಟರ್‌ನಲ್ಲಿ ಆರೋಪಿಸುತ್ತಿದ್ದಾರೆ.

ದೇಶದ ಎಲ್ಲೆಡೆ 30-55 ವಯಸ್ಸಿನವರಲ್ಲಿ ಹೃದಯಾಘಾತದ ಪ್ರಮಾಣ ಒಂದೇ ಸಮನೆ ಹೆಚ್ಚುತ್ತಿದೆ. ಇದಕ್ಕೆ ಕೋವಿಡ್ ವ್ಯಾಕ್ಸಿನ್ ಕಾರಣ ಎಂದು ಕೆಲವರು ನೇರವಾಗಿ ಆರೋಪಿಸುತ್ತಿದ್ದಾರೆ. ಹೀಗೆ ಆರೋಪ ಮಾಡುವವರು ಯಾವುದೇ ಅಂಕಿ-ಅಂಶಗಳನ್ನು ನೀಡಿಲ್ಲ.

ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ವೈದ್ಯಕೀಯ ಸಂಶೋಧನಾ ಸಂಸ್ಥೆಯಾಗಿರುವ ಭಾರತೀಯ ವೈದ್ಯವಿಜ್ಞಾನ ಸಂಶೋಧನಾ ಸಂಸ್ಥೆ (ICMR) ಈ ಎಲ್ಲ ಹೃದಯಾಘಾತಗಳ ಬಗ್ಗೆ ತನಿಖೆ ನಡೆಸಿ, ಸೂಕ್ತವಾದ ವರದಿ ನೀಡಬೇಕೆಂಬ ಆಗ್ರಹವೂ ಇಲ್ಲಿ ಕೇಳಿ ಬರುತ್ತಿದೆ.

 

ಇದಕ್ಕೆ ಉದಾಹರಣೆ ಎಂಬಂತೆ ಕೆಲವರು ಟ್ವೀಟ್ ಕೂಡ ಮಾಡಿ, ತಮ್ಮೊಳಗಿನ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.
"ಕೋವಿಡ್ ಮತ್ತು ಲಸಿಕೆಗಳು ದೇಹವನ್ನು ತೀವ್ರವಾಗಿ ಹಾನಿಗೊಳಿಸಿವೆ. ಈಗ ನಾವು ನಮ್ಮ ಜೀವ ತೆರುವ ಮೂಲಕ ಇದಕ್ಕೆ ಬೆಲೆ ಪಾವತಿಸಬೇಕಿದೆ" ಎಂದು ಸನ್ನಿ ಎಂಬವರು ಟ್ವೀಟ್ ಮಾಡಿದ್ದಾರೆ. ಇದೇ ರೀತಿಯ ಹಲವು ಟ್ವೀಟ್‌ಗಳು ಇಲ್ಲಿವೆ. ಗಮನಿಸಿ.

ಒಟ್ಟಾರೆಯಾಗಿ, ಹಠಾತ್ ಸಾವಿನ ಬಗ್ಗೆ ಜನಸಾಮಾನ್ಯರಲ್ಲಿ ಹಲವು ಅಪನಂಬಿಕೆಗಳು ತಲೆ ಎತ್ತಿವೆ. ಈ ಸಾವುಗಳಿಗೆ ಕೋವಿಡೋತ್ತರ ದೀರ್ಘಕಾಲಿಕ ಪರಿಣಾಮಗಳು ಅಥವಾ ಕೋವಿಡ್ ಲಸಿಕೆ ಅಥವಾ ಮಾನಸಿಕ ಒತ್ತಡ, ಜೀವನ ಶೈಲಿ ಕಾರಣ ಆಗಿರಬಹುದೆಂಬ ಸಂಶಯಗಳು ಜನಮನದಲ್ಲಿ ಬೆಳೆಯುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಸರ್ಕಾರಗಳು ಕ್ರಮ ಕೈಗೊಳ್ಳಬೇಕೆಂಬ ಆಗ್ರಹಗಳು ಕೂಡ ಕೇಳಿ ಬಂದಿವೆ.

ನಿಮಗೆ ಏನು ಅನ್ನಿಸ್ತು?
4 ವೋಟ್
eedina app