ಖುದಾ, ಸರಸ್ವತೀ, ಗಣಪತಿ, ಶಿವ-ನಟರಾಜ ಸಬ್ ಗವಾಹ್ ಹೈ

tippu

ಕಾರ್ಯಪ್ಪನವರ ಆ ತಥಾಕಥಿತ ಕಲಾಕೃತಿಯ ಪ್ರದರ್ಶನ ಯಥೇಚ್ಛ ನಡೆಯಲಿ. ಅದು ತುಚ್ಛವಾದದ್ದಾದರೆ ಹಾಗೆಂದು ಹೇಳುವ ಸ್ವಾತಂತ್ರ್ಯ ನಮ್ಮೆಲ್ಲರಿಗೆ ಇದ್ದೇ ಇದೆ. ಹಾಗೆಯೆ, ಅದಕ್ಕಿಂತ ಒಳ್ಳೆಯ ನಾಟಕ (ಅಲ್ಲ, ಅಸಲಿ ನಾಟಕ) ಬರೆದು, ಆಡುವ ಸ್ವಾತಂತ್ರ್ಯವೂ ನಮಗಿದೆ. ನಮ್ಮ ಆ ಸ್ವಾತಂತ್ರ್ಯಕ್ಕೆ ಅವರೇನು ಕಡಿವಾಣ ಹಾಕುತ್ತಾರೋ, ನೋಡಿಬಿಡುವ.

ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಬರೆದು ನಿರ್ದೇಶಿಸಿರುವ ‘ಟಿಪ್ಪು ನಿಜಕನಸುಗಳು’ ನಾಟಕದ ಪ್ರದರ್ಶನದ ವಿರುದ್ಧ ಪ್ರತಿಭಟಿಸುತ್ತೇವೆ ಎಂದು ಕೆಲವು ಸಂಘಟನೆಗಳು ಹೇಳುತ್ತಿವೆ.

ಅವುಗಳ ಪೈಕಿ, ಒಂದು ಸಂಘಟನೆ ನಾಟಕ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಕೋರಿ ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಿದೆ ಎಂದೂ ಮತ್ತೊಂದು ಸಂಘಟನೆ ಅದರ ನಿಷೇಧಕ್ಕಾಗಿ ಆಗ್ರಹಿಸುತ್ತಿದೆ ಎಂದೂ ವರದಿಯಾಗಿದೆ.

ಅದರ ಪ್ರದರ್ಶನ ಆಗಕೂಡದೆಂದು ಕೋರಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ಕಾಂಗ್ರೆಸ್ ಪಕ್ಷದ ತನ್ವೀರ್‌ ಸೇಠ್ ಮತ್ತು ಜೆಡಿಎಸ್ ಪಕ್ಷದ ಸಿ. ಎಂ. ಇಬ್ರಾಹಿಂ ಅವರು ಹೇಳುತ್ತಿದ್ದಾರೆ. ಈ ಎಲ್ಲ ಪ್ರತಿಕ್ರಿಯೆಗಳೂ, ನಿಲುವುಗಳೂ ಅಸಮಂಜಸವಾದುವು.

ಬಿಜೆಪಿ ಮತ್ತು ಸಂಘಪರಿವಾರಗಳವರು ಸಾಹಿತಿ-ಕಲಾವಿದರು, ಪತ್ರಕರ್ತರು, ಸಾಮಾಜಿಕ-ರಾಜಕೀಯ ಆಕ್ಟಿವಿಸ್ಟರು ಮತ್ತಿತರರ ಮೇಲೆ ಹಲಬಗೆ, ಹಲವು ಮಜಲಿನ ಫ್ಯಾಶಿಸ್ಟ್ ದಾಳಿ ಮಾಡುವುದನ್ನು ನಾವೆಲ್ಲ ಕಾಣುತ್ತ ಬಂದಿದ್ದೇವೆ. ತಮಗೆ ಆಗದವರ ವಿರುದ್ಧ ಹಲವು ಕೋರ್ಟುಗಳಲ್ಲಿ ಮೊಕದ್ದಮೆ ಹೂಡುವುದು, ಹಲವು ರಾಜ್ಯ, ಹಲವು ಪೊಲೀಸು ಠಾಣೆಗಳಲ್ಲಿ ಎಫ್ಐಆರ್‌ಗಳನ್ನು ದಾಖಲಿಸುವುದು– ಇಂಥದೆಲ್ಲ ಅವರ ವರಸೆ.

ಅದಕ್ಕೆ ಬೇಕಾದ ಅಧಿಕಾರದ ಸವಲತ್ತು, ಹಣಕಾಸಿನ ಜರುಬು, ಪೊಲೀಸು ವ್ಯವಸ್ಥೆಯ ಬೆಂಬಲ ಮತ್ತು ಅವರು ಉಣಿಸಿದ್ದನ್ನು ಉಂಡು, ಅವರು ಹೇಳಿದಂತೆ ಕೇಳುವ ಮಾಧ್ಯಮಗಳವರ ಸಹಕಾರ– ಇದೆಲ್ಲವೂ ಅವರಿಗೆ ಇದೆ. ಆದರೆ ಈಗ, ರಂಗಾಯಣದ ಈ ನಾಟಕದ ವಿಷಯದಲ್ಲಿ, ಸಂಘಪರಿವಾರದ ಫ್ಯಾಶಿಸ್ಟ್‌ ತತ್ತ್ವ ಮತ್ತು ಕಾರ್ಯಗಳನ್ನು ವಿರೋಧಿಸುವವರು ತಾವೂ ಆ ಪರಿವಾರದ ವರಸೆಗಳನ್ನು ಅನುಸರಿಸುವುದು ತರವಲ್ಲ.

ಕಾರ್ಯಪ್ಪನವರ ಆ ತಥಾಕಥಿತ ಕಲಾಕೃತಿಯ ಪ್ರದರ್ಶನ ಯಥೇಚ್ಛ ನಡೆಯಲಿ. ಅದು ತುಚ್ಛವಾದದ್ದಾದರೆ ಹಾಗೆಂದು ಹೇಳುವ ಸ್ವಾತಂತ್ರ್ಯ ನಮ್ಮೆಲ್ಲರಿಗೆ ಇದ್ದೇ ಇದೆ. ಹಾಗೆಯೆ, ಅದಕ್ಕಿಂತ ಒಳ್ಳೆಯ ನಾಟಕ (ಅಲ್ಲ, ಅಸಲಿ ನಾಟಕ) ಬರೆದು, ಆಡುವ ಸ್ವಾತಂತ್ರ್ಯವೂ ನಮಗಿದೆ. ನಮ್ಮ ಆ ಸ್ವಾತಂತ್ರ್ಯಕ್ಕೆ ಅವರೇನು ಕಡಿವಾಣ ಹಾಕುತ್ತಾರೋ, ನೋಡಿಬಿಡುವ. ಈ ಸದ್ಯ, ಅದೇನು ನಾಟಕವೋ ಅವರದ್ದು, ಆಗಲಿ. ಖುದಾ, ಸರಸ್ವತೀ, ಗಣಪತಿ, ಶಿವ-ನಟರಾಜ ಸಬ್ ಗವಾಹ್ ಹೈ.

ನಿಮಗೆ ಏನು ಅನ್ನಿಸ್ತು?
2 ವೋಟ್
Image
av 930X180