ಸ್ಮರಣೆ| ಯುವಕರ ಸ್ಫೂರ್ತಿ, ಕ್ರಾಂತಿಯ ಕಿಚ್ಚು ಚಂದ್ರಶೇಖರ್ ಆಜಾದ್

Azad

ಮಾತಿಗೆ ಮಾತು, ಏಟಿಗೆ ಏಟು, ಪ್ರಾಣಕ್ಕೆ ಪ್ರಾಣ ತೆಗೆಯಬೇಕೆಂದು ಚಂದ್ರಶೇಖರ್‌ ಅಜಾದ್‌ ತೀರ್ಮಾನಿಸಿದರು. ಲಾಲಾಜಿಯ ತಿಥಿಯ ದಿನ ಪೊಲೀಸ್‌ ಅಧಿಕಾರಿ ಸೌಂಡರ್ಸ್‌ನ ಪ್ರಾಣ ತೆಗೆಯಬೇಕೆಂದು ಕ್ರಾಂತಿಕಾರಿಗಳಿಗೆ ಕರೆ ನೀಡಿದರು. ಕರೆಯನ್ನು ಸ್ವೀಕರಿಸಿದ ರಾಜ್ ಗುರು, ಭಗತ್ ಸಿಂಗ್, ಸುಖ್ ದೇವ್ ಮೂವರೂ ಸೇರಿ ಸೌಂಡರ್ಸ್‌ನನ್ನು ಗುಂಡಿಟ್ಟು ಕೊಂದರು

ದೇಶದೆಲ್ಲಡೇ ಸ್ವಾತಂತ್ಯಕ್ಕಾಗಿ ಹೋರಾಟಗಳು ನಡೆಯುತ್ತಿರುವ ಕಾಲಘಟ್ಟವದು. ಅನೇಕ ಕ್ರಾಂತಿಕಾರಿ ಹೋರಾಟಗಾರರ ರಕ್ತದಿಂದ ಒದ್ದೆಯಾಗಿದ ಭೂಮಿ ಖಾಶಿ ನಗರ. 1921 ರಲ್ಲಿ ಪಂಜಾಬಿನ ಕಾಶಿನಗರದಲ್ಲಿ ಒಂದು ದಿನ ಸ್ವಾತಂತ್ರ್ಯಕ್ಕಾಗಿ ದೊಡ್ಡ ರ‍್ಯಾಲಿ ನಡೆಯುತ್ತಿತ್ತು. ಆ ರ‍್ಯಾಲಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರ ಬಾಯಲ್ಲೂ ವಂದೇ ಮಾತರಂ, ಭಾರತ್ ಮಾತಾಕಿ ಜೈ ಎನ್ನುವ ಘೋಷಣೆಗಳು ಕೇಳಿ ಬರುತ್ತಿತ್ತು. ಈ ಧ್ವನಿಯನ್ನು ನಿಲ್ಲಿಸಿಲು ಪೊಲೀಸರು ಗದರಿಸಿ, ಹೆದರಿಸಿದರು. ಅಲ್ಲಿನ ಹೋರಾಟಗಾರರು ಯಾರು ಕೂಡ ಘೋಷಣೆಗಳನ್ನು ನಿಲ್ಲಿಸಲಿಲ್ಲ. ಆಗ ಆ ಹೋರಾಟದಲ್ಲಿದ್ದ ಒಬ್ಬ ಮುದುಕನ ಮೇಲೆ ಪೊಲೀಸರು ಲಾಠಿ ಚಾರ್ಜ್‌ ಮಾಡುತ್ತಾರೆ. ಲಾಠಿಯೇಟು ತಿನ್ನುತ್ತಿದ್ದ ಆ ಮುದುಕನ ಬಾಯಲ್ಲಿ ಭಾರತ್ ಮಾತಾಕಿ ಜೈ, ವಂದೇ ಮಾತರಂ ಎಂದು ದೊಡ್ಡ ಧ್ವನಿಯಲ್ಲಿ ಘೋಷಣೆಗಳು ಕೇಳಿಬರುತ್ತಿತ್ತು.

Eedina App

ಸ್ವಲ್ಪ ದೂರದಲ್ಲಿ 15ವರ್ಷದ ಯುವಕ ಅದನ್ನು ಗಮನಿಸುತ್ತಿದ್ದ, ದೇಶದ ಬಾವುಟವನ್ನು ಆ ಹುಡುಗನ ಕೈಯಲ್ಲಿಟ್ಟುಕೊಂಡಿದ್ದ ಮುದುಕನನ್ನು ಹೊಡೆಯುತ್ತಿರುವುದು ನೋಡಿ ಆ ಹುಡುಗನಿಗೆ ರಕ್ತ ಕುದಿಯುತ್ತಿತ್ತು. ಆಗ ಆ ಹುಡುಗ ಒಂದು ಕಲ್ಲನ್ನು ತೆಗೆದುಕೊಂಡು ಮುದುಕನಿಗೆ ಹೊಡೆಯುತ್ತಿರುವ ಪೊಲೀಸ್ ಅಧಿಕಾರಿಯ ತಲೆಗೆ ಎಸೆಯುತ್ತಾನೆ. ಆ ಕಲ್ಲು ಗುರಿ ತಪ್ಪದೆ ಅಧಿಕಾರಿಯ ತಲೆಗೆ ಬೀಳುತ್ತದೆ. ತಕ್ಷಣ ಮುದುಕನನ್ನು ಹೊಡೆಯುತ್ತಿರುವ ಅಧಿಕಾರಿ, ಅವರನ್ನು ಬಿಟ್ಟು ಆ ಹುಡಗನನ್ನು ಹಿಡಿಯಲು ಹೊರಟ. ಆ ಹುಡುಗ ತುಂಬಾ ಹೊತ್ತಾದ ನಂತರ ಆ ಪೊಲೀಸನ ಕೈಗೆ ಸಿಗುತ್ತಾನೆ, ನಂತರ ಆ ಹುಡುಗನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುತ್ತಾನೆ.

ನನ್ನ ತಂದೆಯ ಹೆಸರು ಸ್ವಾತಂತ್ರ್ಯ!

AV Eye Hospital ad

ನ್ಯಾಯಾಲಯದಲ್ಲಿ ನಿನ್ನ ಹೆಸರು ಏನು? ಅಂತ ಕೋರ್ಟಿನ ನ್ಯಾಯಾಧೀಶರು ಕೇಳಿದಾಗ ʼನನ್ನ ಹೆಸರು ಆಜಾದ್ʼ ಎಂದು ಗಟ್ಟಿ ಧ್ವನಿಯಲ್ಲಿ ಕೂಗಿ ಹೇಳಿದ. ನಿನ್ನ ತಂದೆಯ ಹೆಸರೇನು? ಅಂತ ಕೇಳಿದಾಗ, ʼನನ್ನ ತಂದೆಯ ಹೆಸರು ಸ್ವಾತಂತ್ರ್ಯʼ ಎಂದು ಹೇಳಿದ, ನಿನ್ನ ಊರು ಯಾವುದು? ಎಂದು ಕೇಳಿದಾಗ ʼನನ್ನ ಊರು ಜೈಲ್ʼ ಎಂದು ಧೈರ್ಯವಾಗಿ ಹೆಮ್ಮೆಯಿಂದ ಉತ್ತರವನ್ನು ನೀಡಿದ, ಈ ಮೂರು ಉತ್ತರಗಳೇ ಆ ಸಿಂಹದ ಮೊದಲ ಘರ್ಜನೆ, ಅವರೇ ನಮ್ಮ ಚಂದ್ರಶೇಖರ್ ಆಜಾದ್. ನಂತರ ನ್ಯಾಯಾಲಯವು ಅವರಿಗೆ 15 ಚಾಟಿ ಯೇಟಿನ ಶಿಕ್ಷೆಯನ್ನು ನೀಡುತ್ತದೆ. ಆದರೆ ಆ ನ್ಯಾಯಾಲಯದ ತೀರ್ಪಿಗೆ ಚಂದ್ರಶೇಖರ್ ಆಜಾದ್ ಅವರು ಹೆದರುವುದಿಲ್ಲ. ಚಾಟಿಯೇಟನ್ನು ನೀಡುವಾಗ ಪ್ರತಿಯೊಂದು ಯೇಟಿಗೂ ಚಂದ್ರಶೇಖರ್ ಆಜಾದ್ ರವರು ವಂದೇ ಮಾತರಂ, ಭಾರತ್ ಮಾತಾಕಿ ಜೈ ಎಂದು ಘೋಷಣೆಗಳನ್ನು ಕೂಗಿದರು, ಅವರ ಧೈರ್ಯವನ್ನು ಮೆಚ್ಚಿದ ಅಲ್ಲಿನ ಜನ ಅವರಿಗೆ ಆಜಾದ್ ಎಂದು ಕರೆದರು. ಅಲ್ಲಿಂದ ಅವರಿಗೆ ಚಂದ್ರಶೇಖರ್ ತಿವಾರಿ ಎನ್ನುವ ಹೆಸರಿನಿಂದ ಚಂದ್ರಶೇಖರ್ ಆಜಾದ್ ಎನ್ನುವ ಹೆಸರು ಬಂದಿತು.

ಭಗತ್‌ ಸಿಂಗ್‌ ಮತ್ತು ಚಂದ್ರಶೇಖರ್‌ ಅಜಾದ್‌
ಭಗತ್‌ ಸಿಂಗ್‌ ಮತ್ತು ಚಂದ್ರಶೇಖರ್‌ ಅಜಾದ್‌

ಆಜಾದ್ ಅವರ ಕಣ್ಣೆದುರಿಗೆ ಯಾವುದೇ ಅನ್ಯಾಯ, ದೌರ್ಜನ್ಯಗಳು ನಡೆದರೆ ಆ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದರು. ಆಜಾದ್ ರವರು ರಾಮ್‌ಪ್ರಸಾದ್ ಬಿಸ್ಮಿಲ್ ಅನ್ನುವ ಕ್ರಾಂತಿಕಾರಿಗಳ ಜೊತೆಗೆ ಸೇರಿಕೊಂಡರು. ಝಾನ್ಸಿ, ಬುಂದೆಲಾಖಾಡ್, ಅನ್ನುವ ಅರಣ್ಯದಲ್ಲಿ ಬಂದೂಕು, ಪಿಸ್ತೂಲನ್ನು ಬಳಸುವುದನ್ನು ಕಲಿತು ಅದರಲ್ಲಿ ಶಕ್ತರಾದರು. ಕ್ರಾಂತಿಕಾರಿ ನಾಯಕರಾಗಿ ಆಜಾದ್  ಬೆಳೆದರು. ಆ ಸಂದರ್ಭದ ದಿನಗಳಲ್ಲಿ ಹೋರಾಟಗಾರರಿಗೆ, ಕ್ರಾಂತಿಕಾರಿಗಳಿಗೆ ಜೈಲು ಶಿಕ್ಷೆ ನೀಡುವುದು ಇಲ್ಲದಿದ್ದರೆ ಗಲ್ಲಿಗೇರಿಸುವ ದೊಡ್ಡ ದೊಡ್ಡ ಶಿಕ್ಷೆಗಳನ್ನು ವಿಧಿಸುತ್ತಿದ್ದರು. ಆದರೆ ಆಜಾದ್ ಅವರು ಪೊಲೀಸರ ಕಣ್ಣಿಗೆ ಕಾಣುವುದಿಲ್ಲ, ಕೈಗೆ ಸಿಗುವುದಿಲ್ಲ. ಆಜಾದ್ ಊರು ಊರು ತಿರುಗುತ್ತಿದ್ದರು. ಹೋಗಿದ್ದ ಕಡೆಯಲ್ಲಾ ಅವರು ಒಂದೊಂದು ಹೊಸ ವೇಷವನ್ನು ಹಾಕುತ್ತಿದ್ದರು. ಅವರು ಸೇವಕರಾಗಿ, ಸನ್ಯಾಸಿಯಾಗಿ, ಪಂಡಿತರಾಗಿ, ಡ್ರೈವರ್ ಆಗಿ, ಸಮಯ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಭಿನ್ನ ಭಿನ್ನವಾಗಿ ವೇಷಭೂ಼ಷಣಗಳನ್ನು ಹಾಕುತ್ತಿದ್ದರು. ಅವರು ವಾಸುಸುತ್ತಿದ್ದ ಎಲ್ಲಾ ಕಡೆಯೂ ಜನರನ್ನು ಸಂಘಟಿಸಿತ್ತಾ, ಕ್ರಾಂತಿಕಾರಿಗಳಾಗಿ ಅವರನ್ನು ಬದಲಾಯಿಸುವಂತಹ ಕೆಲಸವನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಬಂದೂಕನ್ನು ಬಳಸುವುದು ಹೇಗೆ ಎಂದು ಕ್ಲಾಸ್ ಕೂಡ ಮಾಡುತ್ತಿದ್ದರು.

ಒಂದು ಅಪೂರ್ವ ಘಟನೆ ಕ್ರಾಂತಿ ಕಾರಿ ಜೀವನದಲ್ಲಿ ಆಜಾದ್ ಅವರಿಗೆ ದೊರಕಿತು. ಒಬ್ಬ ಕ್ರಾಂತಿಕಾರಿ ಜೀವನದಲ್ಲಿ ಇನ್ನೊಬ್ಬ ಕ್ರಾಂತಿಕಾರಿಯಾದ ಭಗತ್‌ಸಿಂಗ್ ಅವರ ಪರಿಚಯವಾಗುತ್ತಾರೆ. ಇವರಿಬ್ಬರು ಸೇರಿ ದೇಶದಲ್ಲಿರುವ ಎಲ್ಲಾ ಕ್ರಾಂತಿಕಾರಿ ಹೋರಾಟಗಾರರೆಲ್ಲರನ್ನೂ ಒಟ್ಟಿಗೆ ಸೇರಿಸಿದರು. ಸೈಮನ್ ಕಮಿಷನ್ ಅನ್ನು ವಿರೋಧಿಸುವ ಹೋರಾಟದಲ್ಲಿ ಇನ್ನೊಬ್ಬ ಕ್ರಾಂತಿಕಾರರು ಹೋರಾಟ ಮಾಡುತ್ತಿದ್ದರು, ಅವರೇ  ಲಾಲಾ ಲಜಪತರಾಯ್. ಆ ಹೋರಾಟದಲ್ಲಿ  ಪೊಲೀಸ್ ಅಧಿಕಾರಿಯ ಲಾಠಿ ಚಾರ್ಜ್‌ನಿಂದಾಗಿ ಲಾಲಾ ಲಜಪತರಾಯ್ ಮೃತರಾಗುತ್ತಾರೆ. ಈ ಸಂಗತಿಯನ್ನು ಕೇಳಿದ ಆಜಾದ್ ಅವರು ಆವೇಶ, ಆಕ್ರೋಶಗಳಿಂದ ಮರುಗುತ್ತಾರೆ.

ಮಾತಿಗೆ ಮಾತು, ಏಟಿಗೆ ಏಟು, ಪ್ರಾಣಕ್ಕೆ ಪ್ರಾಣ ತೆಗೆಯಬೇಕೆಂದು ತೀರ್ಮಾನಿಸಿದರು. ಲಾಲಾಜಿಯ ತಿಥಿಯ ದಿನ ಅಂದರೆ ಡಿಸೆಂಬರ್ 17ರಂದು ಸೌಂಡರ್ಸ್‌ನ ಪ್ರಾಣ ತೆಗೆಯಬೇಕೆಂದು ಕ್ರಾಂತಿಕಾರಿಗಳಿಗೆ ಕರೆಯನ್ನು ನೀಡಿದರು. ಕರೆಯನ್ನು ಸ್ವೀಕರಿಸಿದ ರಾಜ್ ಗುರು, ಭಗತ್ ಸಿಂಗ್, ಸುಖ್ ದೇವ್, ಮೂರು ಜನ ಸೌಂಡರ್ಸ್‌ ಅನ್ನು ಗುಂಡಿಟ್ಟು ಕೊಂದರು. ಗುಂಡಿಟ್ಟು ಸಾಯಿಸುತ್ತಿರಬೇಕಾದರೆ ಭಗತ್‌ಸಿಂಗ್ ಅವರ ಕಡೆಗೆ ಬರುತ್ತಿದ್ದಂತಹ ಪೊಲೀಸ್ ಅಧಿಕಾರಿಯನ್ನು ಚಂದ್ರಶೇಖರ್ ಆಜಾದ್  ಗುಂಡಿಟ್ಟು ಸಾಯಿಸುತ್ತಾರೆ.

ಆಜಾದ್ ಕ್ರಾಂತಿಕಾರಿ ಹೋರಾಟಗಳನ್ನು ದೇಶವ್ಯಾಪ್ತಿಯಲ್ಲಿ ವಿಸ್ತರಿಸಬೇಕೆಂದು ತೀರ್ಮಾನಿಸುತ್ತಾರೆ. ಅದೇ ಸಂದರ್ಭದಲ್ಲಿ ಅಸೆಂಬ್ಲಿಯು ಜನರಿಗೆ ವಿರುದ್ಧವಾಗಿ ಎರಡು ಬಿಲ್‌ಗಳನ್ನು ಪ್ರವೇಶ ಮಾಡುತ್ತದೆ. ಆ ಬಿಲ್‌ಗಳ ವಿರುದ್ಧವಾಗಿ ಅಸೆಂಬ್ಲಿಯಲ್ಲಿ ಬಾಂಬ್ ಹಾಕಬೇಕು ಎಂದು ಆಜಾದ್ ಸೇನೆಯು ತೀರ್ಮಾನಿಸಿಕೊಂಡಾಗ ಭಗತ್‌ಸಿಂಗ್‌ರು, ಕ್ರಾಂತಿಕಾರಿಗೆ ಹತ್ತಿರ ಮತ್ತು ಆಪ್ತರಾಗಿರುವಂತಹ ಆಜಾದ್ ಅವರು ಪೊಲೀಸರಿಗೆ ದೊರಕಿದರೆ ಕ್ರಾಂತಿಕಾರಿಯ ಕಿಚ್ಚು, ಹೋರಾಟದ ದಾರಿಯು ನಶಿಸಿ ಹೋಗುತ್ತದೆ ಎನ್ನುವ ಉದ್ದೇಶದಿಂದ, ಭಗತ್‌ಸಿಂಗ್ ಅವರು ʼನಾನು ಹೋಗುತ್ತೇನೆʼ ಎಂದು ಹೇಳುತ್ತಾರೆ, ಮೊದಲಿಗೆ ಒಪ್ಪದ ಆಜಾದ್ ರವರು ತದನಂತರ ಭಗತ್ ಸಿಂಗ್ ಮಾತಿಗೆ ಒಪ್ಪುತ್ತಾರೆ.

ಅಸೆಂಬ್ಲಿ ಬಾಂಬ್ ಬ್ಲಾಸ್ಟ್ ನಲ್ಲಿ ಭಗತ್ ಸಿಂಗ್ ಮತ್ತು ಬುಟಕೇಶ್ವರ ದತ್ತ ಇಬ್ಬರು ಅರೆಸ್ಟ್ ಆಗುತ್ತಾರೆ. ಸೌಂಡರ್ಸ್‌ ಹತ್ಯೆಯ ಕೇಸಿನಲ್ಲಿ ಭಗತ್ ಸಿಂಗ್  ಪ್ರಧಾನ ಆರೋಪಿ ಎಂದು ತಿಳಿಯುತ್ತದೆ. ಆಗ ನ್ಯಾಯಾಲಯವು ಭಗತ್ ಸಿಂಗ್‌ಗೆ ಗಲ್ಲು ಶಿಕ್ಷೆಯ ತೀರ್ಪನ್ನು ನೀಡುತ್ತದೆ. ಈ ವಿಷಯವನ್ನು ತಿಳಿದ ಚಂದ್ರ ಶೇಖರ್‌ಆಜಾದ್ ಮನಸ್ಸಿಗೆ ತುಂಬಾ ನೋವನ್ನು ಉಂಟುಮಾಡುತ್ತದೆ. ಆಗ  ಭಗತ್‌ಸಿಂಗ್ ಮತ್ತು ಬುಟಕೇಶ್ವರ ದತ್ತ ಅವರನ್ನು ರಾತ್ರೋ ರಾತ್ರಿ ಜೈಲಿನಿಂದ ತಪ್ಪಿಸಬೇಕು ಎಂದು ಯೋಚಿಸುತ್ತಾರೆ. ಆದರೆ ಆಜಾದ್ ಮಾತನ್ನು ಭಗತ್‌ಸಿಂಗ್‌ರು ಒಪ್ಪಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಜಾದ್‌ ತಂಡದಲ್ಲಿದ್ದ ಒಬ್ಬ ಪೊಲೀಸರ ಕೈಗೆ ಸಿಕ್ಕಿಬಿಡುತ್ತಾನೆ. ಆ ಕ್ರಾಂತಿಕಾರಿಯ ದ್ರೋಹಿ ಪೊಲೀಸರಿಗೆ ಶರಣಾಗಿ ಆಜಾದ್ ಇರುವಂತಹ ಜಾಗ ಮತ್ತು ಅವರು ಮಾಡುತ್ತಿದ್ದಂಹ ಕೆಲಸಗಳನ್ನು ಪೊಲೀಸರಿಗೆ ಹೇಳಿ ಬಿಡುತ್ತಾನೆ.

ಇದನ್ನು ಓದಿದ್ದೀರಾ? ಸಾದತ್‌ ಹಸನ್‌ ಮಾಂಟೋನನ್ನು ನಮ್ಮ ಎದೆಗಿಳಿಸಿದವರು ಜಿ ಆರ್‌

ಸ್ವಾತಂತ್ರ ಇಲ್ಲದ ಜೀವನ ಮರಣಕ್ಕೆ ಸಮಾನ

ಆಜಾದ್  ಒಂದು ದಿನ  ಪಾರ್ಕಿನಲ್ಲಿ ಕುಳಿತುಕೊಂಡು ಸುಖ್‌ದೇವ್ ರಾಜ್ ಸ್ನೇಹಿತನ ಜೊತೆಗೆ ಕೆಲವು ಯೋಜನೆಗಳ ಬಗ್ಗೆ ಮಾತನಾಡುತ್ತಿರುತ್ತಾರೆ.ಆಜಾದ್ ರವರು ಇರುವಂತಹ ಜಾಗವನ್ನು ತಿಳಿದುಕೊಂಡ  ಪೊಲೀಸರು  ಮುತ್ತಿಗೆಯನ್ನು ಹಾಕುತ್ತಾರೆ. ಆಗ ಒಬ್ಬ ಪೊಲೀಸ್ ಅಧಿಕಾರಿಯು ಆಜಾದ್ ಅವರ ಎದುರಿಗೆ ಬಂದು ನಿಂತು ಯಾರು ನೀವು ಅಂತ ಕೇಳುತ್ತಲೇ ಆ ಪೋಲೀಸ್ ಅಧಿಕಾರಿ ಆಜಾದ್‌ರವರ ತೊಡೆಯ ಭಾಗಕ್ಕೆ ಗುಂಡು ಹಾರಿಸುತ್ತಾನೆ. ಆಜಾದ್ ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗದೇ, ಆತನ ಸ್ನೇಹಿತನನ್ನು ಪೊಲೀಸರಿಂದ ತಪ್ಪಿಸಲು ಅಧಿಕಾರಿಯ ಮೇಲೆ ಆಜಾದ್ ವಾಪಸ್ ಗುಂಡು ಹಾರಿಸುತ್ತಾರೆ. ಪಾರ್ಕ್‌ ಸುತ್ತಲು 80 ಪೊಲೀಸರು ಮುತ್ತಿಗೆ ಹಾಕುತ್ತಾರೆ. ಚಂದ್ರಶೇಖರ್ ಆಜಾದ್‌ರವರು ಮರದ ಕೆಳಗೆ ಮರೆಸಿಕೊಂಡು ಪೊಲೀಸರ ಮೇಲೆ ಗುಂಡು ಹಾರಿಸುತ್ತಾರೆ. ಆಜಾದ್‌ರವರ ಪಿಸ್ತೂಲಿನಲ್ಲಿ ಎಲ್ಲಾ ಗುಂಡುಗಳು ಖಾಲಿಯಾಗುತ್ತವೆ, ಅವರ ಪಿಸ್ತೂಲಿನಲ್ಲಿ ಕೊನೆಯ ಗುಂಡು ಮಾತ್ರ ಉಳಿಯುತ್ತದೆ. ಆಜಾದ್  ʼನನ್ನ ಕೊನೆಯ ಉಸಿರು ಇರುವ ತನಕ ಪೊಲೀಸ್ ಅಧಿಕಾರಿಗಳು ನನ್ನ ಮೇಲೆ  ಕೈ ಹಾಕಲು ಬಿಡುವುದಿಲ್ಲ ʼ ಎಂದು ಆತನ ಸಂಗಡಿಗರಗಳೊಂದಿಗೆ ಮೀಸೆ ತಿರುಗಿಸುತ್ತ ಹೇಳುತ್ತಿದ್ದರು. ಆ ಮಾತು ಅವರ ಮನಸ್ಸಿನಲ್ಲಿ ಯಾವಾಗಲೂ ಉಳಿದುಕೊಂಡಿತ್ತು. ಅದನ್ನು ನೆನಪಿಸಿಕೊಂಡು ಎರಡು ಕೈಯಲ್ಲಿ ಮಣ್ಣನ್ನು ಮುಟ್ಟಿಕೊಂಡು ʼನನ್ನನ್ನು ಕ್ಷಮಿಸಿ ಬಿಡು ಭಾರತ ಮಾತೆʼ ಎಂದು ಹೇಳುತ್ತಾ ಪಿಸ್ತೂಲಿನಿಂದ ತನಗೆ ತಾನೇ ತಲೆಗೆ ಗುಂಡು ಹಾರಿಸಿಕೊಂಡು ಹುತಾತ್ಮರಾಗುತ್ತಾರೆ. ಆಗ ನಮ್ಮ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್‌ ವಯಸ್ಸು ಕೇವಲ 24 ವರ್ಷಗಳು! ʼಸ್ವಾತಂತ್ರ್ಯ ಇಲ್ಲದ ಜೀವನ ಮರಣಕ್ಕೆ ಸಮಾನʼ ಎಂದು ಹೇಳಿದ ಚಂದ್ರ ಶೇಖರ್ ಆಜಾದ್ ಇಂದಿಗೂ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app