ಶವಗಳ ಮೇಲಿನ ರಾಜಕೀಯ ಕೊನೆಯಾದರೆ ಕರಾವಳಿ ಕ್ಷೇಮ

Mangalore clash

ಧರ್ಮ ರಕ್ಷಣೆಯ ನೆಪದಲ್ಲಿ‌ ಅಮಾಯಕರ‌‌ ಮೇಲೆ ಹಲ್ಲೆ ಮಾಡಿ ಜೈಲು‌ಪಾಲಾಗುವುದು ಕಾರ್ಯಕರ್ತರು‌ ಮಾತ್ರವೇ. ಈ ಸಂದರ್ಭದಲ್ಲಿ ‌ಪ್ರಾಣ ಕಳ್ಳೆದುಕೊಳ್ಳುವ ಯುವಕರ ‌ಮನೆಯವರಿಗೆ ಪರಿಹಾರ ನೀಡುವ ಭಾಜಪ, ಆ‌  ಹುದ್ದೆಗಳಿಗೆ ಹೊಸ ಯುವಕರನ್ನು‌ ನೇಮಿಸಿ ಮತ್ತೆ ಅವರ ಜೀವದ ಜತೆ ಚೆಲ್ಲಾಟವಾಡುವುದು ಕಾರ್ಯಕರ್ತರ ಗಮನಕ್ಕೆ ಬರುವುದಿಲ್ಲವೇ?

ಅಭಿವೃದ್ಧಿ ವಿಚಾರಗಳ ಮೇಲೆ ಜನರು ಮತ ಚಲಾವಣೆಯನ್ನು ಮಾಡುವುದು ಕರಾವಳಿಯಲ್ಲಿ ಬಹುತೇಕ ನಿಲ್ಲಿಸಿ ಬಿಟ್ಟಿದ್ದಾರೆ. ಇಲ್ಲಿ ಏನಿದ್ದರೂ ಹಿಂದುತ್ವ, ಏನಿದು ಹಿಂದುತ್ವ? ಯುವಕರ ತಲೆಯಲ್ಲಿ ಹಿಂದೂ ಧರ್ಮ ಅಪಾಯದಲ್ಲಿದೆ, ಈ ಧರ್ಮವನ್ನು ನಾಶ ಮಾಡಲು ಮುಸಲ್ಮಾನ ಹಾಗೂ ಕ್ರಿಶ್ಚಿಯನ್ ಧರ್ಮದವರು ಪ್ರಯತ್ನಿಸುತ್ತಾ ಇದ್ದಾರೆ,  ಭಾಜಪ ಹಿಂದುತ್ವವನ್ನು ರಕ್ಷಿಸುತ್ತದೆ, ಕಾಂಗ್ರೆಸ್ ‌ಮುಸಲ್ಮಾನರನ್ನು ಓಲೈಸುತ್ತದೆ ಎಂಬೆಲ್ಲಾ ವಿಚಾರಗಳನ್ನು ತುಂಬುವುದು. ಅವರು‌ ತಮ್ಮ ವೈಯಕ್ತಿಕ ಜೀವನ, ಶಿಕ್ಷಣ, ಉದ್ಯೋಗಕ್ಕಿಂತಲೂ ಜಾಸ್ತಿ ಧರ್ಮ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುವ ರೀತಿಯಲ್ಲಿ ಮಾಡಿ, ಅವರನ್ನು ಒಂದು ವರ್ಗ ದ್ವೇಷಿಸುವ ಮಟ್ಟಕ್ಕೆ ಅವರಿಂದ ಸಾರ್ವಜನಿಕ ಚಟುವಟಿಕೆಗಳನ್ನು ಮಾಡಿಸಿ, ಕೊನೆಗೆ ಅವರ ಹತ್ಯೆಯಾದರೆ, ಅದನ್ನೇ ನೆಪವಾಗಿಸಿ ಜನರನ್ನು ಭಾವನಾತ್ಮಕವಾಗಿ ರೊಚ್ಚಿಗೆಬ್ಬಿಸಿ ಚುನಾವಣೆಗಳನ್ನು ಗೆಲ್ಲುವುದು ಭಾಜಪಾಕ್ಕೆ ಕರಗತವಾಗಿದೆ.

ಅದಲ್ಲದೇ ಬೇರೆ ಬೇರೆ ಕೊಲೆಗಳು, ಅಸಹಜ ಸಾವು, ಆತ್ಮಹತ್ಯೆ ನಡೆದಾಗಲೂ ಅದರಿಂದ ಏನಾದರೂ ರಾಜಕೀಯ ಲಾಭ ಇದೆ ಎಂದೆನಿಸಿದರೆ ಅವುಗಳನ್ನು ದೊಡ್ಡ ವಿಷಯ ಮಾಡುವುದು, ಹಾಗೆಂದು ಎಲ್ಲಾ ಕೊಲೆಗಳಿಗೆ ಇದೇ‌ ರೀತಿ ಸ್ಪಂದಿಸುವುದಿಲ್ಲ. ಆರೋಪಿಗಳು ಅನ್ಯ ಧರ್ಮದವರಲ್ಲದೇ‌ ಇದ್ದಾಗ, ಅದರಲ್ಲೂ ತಮ್ಮ ಪಕ್ಷದ‌ಪರ ಇರುವವರೇ ಆದಾಗ ಅಂತಹಾ ಕೊಲೆಗಳ‌ ಬಗ್ಗೆ ದಿವ್ಯ ಮೌನ ತಾಳುವುದು ಕೂಡ ಭಾಜಪ ಸಾಮಾನ್ಯವಾಗಿ ಮಾಡುವ ವಿಚಾರಗಳು.

ಹಾಗಾದರೆ ಇದು ಶಾಶ್ವತವೇ? ಎಷ್ಟು ವರ್ಷಗಳ ಕಾಲ ನಡೆಯಬಲ್ಲದು? ನಾಯಕರ‌ ಮಕ್ಕಳು ಧರ್ಮ ರಕ್ಷಣೆಯ ಕಾಯಕದಲ್ಲಿ ತೊಡಗಿಸಿಕೊಳ್ಳದೆ, ಒಳ್ಳೆಯ ಶಿಕ್ಷಣ ‌ಪಡೆದು ಉನ್ನತ ಉದ್ಯೋಗ ಅಥವಾ ಸ್ವಂತ ಉದ್ಯಮ ನಡೆಸಿ ಸುಖವಾಗಿ ಬಾಳುವುದು ಕಾರ್ಯಕರ್ತರ ಕಣ್ಣಿಗೆ ಕಾಣುವ ದಿನಗಳು ಬಾರವೇ?

ಕಾನೂನು, ಪೊಲೀಸ್, ನ್ಯಾಯಾಂಗ, ಸರಕಾರ ಇವೆಲ್ಲವನ್ನೂ‌ ಕಾಲ ಕಸದಂತೆ ಕಂಡು ಧರ್ಮ ರಕ್ಷಣೆಯ ನೆಪದಲ್ಲಿ‌ ಅಮಾಯಕರ‌‌ ಮೇಲೆ ಹಲ್ಲೆ ಮಾಡಿ, ಕೇಸು ಜಡಿಸಿಕೊಳ್ಳುವುದು, ಜೈಲು‌ಪಾಲಾಗುವುದು ಕೇವಲ ಕಾರ್ಯಕರ್ತರು‌ ಮಾತ್ರವೇ. ಈ ಸಂದರ್ಭದಲ್ಲಿ ‌ಪ್ರಾಣ ಕಳ್ಳೆದುಕೊಳ್ಳುವ ಪದಾಧಿಕಾರಿ ಯುವಕರ ‌ಮನೆಯವರಿಗೆ ಪರಿಹಾರ ನೀಡಿ ಭಾಜಪ, ಆ‌  ಹುದ್ದೆಗಳಿಗೆ ಹೊಸ ಯುವಕರನ್ನು‌ ನೇಮಿಸಿ ಮತ್ತೆ ಅವರ ಜೀವದ ಜತೆ ಚೆಲ್ಲಾಟವಾಡುವುದು ಕಾರ್ಯಕರ್ತರ ಗಮನಕ್ಕೆ ಬರುವುದಿಲ್ಲವೇ!

ಕಾಂಗ್ರೆಸ್ ಸರಕಾರ ಇದ್ದಾಗಂತೂ ಆದ‌ ಬಹುತೇಕ‌ ಕೊಲೆಗಳನ್ನು, ಅದರಲ್ಲೂ ಖಾಸಗಿ ವೈಯಕ್ತಿಕ ವಿಚಾರಗಳಿಗೆ ನಡೆದರೂ ಅವುಗಳನ್ನು ಧಾರ್ಮಿಕ ‌ಕಾರಣಕ್ಕೆ ಎಂದು ಬಿಂಬಿಸಿ, ಯುವಕರನ್ನು ಸರಕಾರದ ವಿರುದ್ಧ ‌ಸದಾ ಎತ್ತಿ ಕಟ್ಟುತ್ತಿದ್ದ ಭಾಜಪಕ್ಕೆ ಈಗ ತನ್ನ ಸರಕಾರದಲ್ಲೂ ನಡೆಯುತ್ತಾ ಇರುವ ಕೊಲೆಗಳನ್ನು ನಿಲ್ಲಿಸಲು ಅಸಾಧ್ಯ‌ವಾಗಿದ್ದು ಕಾರ್ಯಕರ್ತರಲ್ಲಿ ತೀವ್ರವಾದ ಅಸಮಾಧಾನ ಉಂಟು ಮಾಡಿದೆ.

ಇದನ್ನು ಓದಿದ್ದೀರಾ? ಭಾರತವನ್ನು ಪುಢಾರಿಗಳಿಂದ ರಕ್ಷಿಸಿ ಎಂದಿದ್ದರು ಸಾದತ್‌ ಹಸನ್‌ ಮಂಟೋ

ಬಿಜೆಪಿಯ ನಕಲಿ ಹಿಂದುತ್ವದ ಪರದೆಯ ಅನಾವರಣದ‌ ಪ್ರಾರಂಭ ಎಂದೇ‌ ಭಾವಿಸಬೇಕಾಗುತ್ತದೆ.  ಇದೇ ಕಾರ್ಯಕರ್ತರು ಬಿಜೆಪಿ‌ ನಾಯಕರ‌ ದುಷ್ಟತನವನ್ನು‌ ಅರಿತು ಬಂಡಾಯ ಎದ್ದು ಬಿಜೆಪಿ ಸೋಲಿಸುವುದು ಶತಸಿದ್ಧ ಅನ್ನಿಸುತ್ತಿದೆ. ಯಾವತ್ತೂ ‌ಪ್ರಕೃತಿಯೇ ನ್ಯಾಯ ನೀಡುತ್ತದೆ ಎಂಬ ಮಾತು ಸತ್ಯವಾಗಲಿ ಎಂಬ ಆಶಯದೊಂದಿಗೆ ಕರಾವಳಿಯ ಕೊಲೆಗಳು ನಿಲ್ಲಲಿ. ಸೌಹಾರ್ದ ಸಮಾಜ ನಿರ್ಮಾಣ‌‌ ಆಗಲಿ. ಆರ್ಥಿಕತೆ ಎತ್ತರಕ್ಕೆ ಬೆಳೆಯಲಿ. ಶಾಂತಿ ನೆಲಸಲಿ ಎಂಬುದೇ ನೈಜ‌ ಭಾರತೀಯರ ಸದಾಶಯಗಳು.

ನಿಮಗೆ ಏನು ಅನ್ನಿಸ್ತು?
3 ವೋಟ್