ಜಿಎಸ್‌ಟಿ| ʼರೈತಾ, ನೀನು ಹೊಲದಲ್ಲೇ ಇರುʼ ಎನ್ನುತ್ತಿದೆ ಮೋದಿ ಸರ್ಕಾರ

ಸಣ್ಣ ಯಂತ್ರಗಳನ್ನು ಬಳಸಿ ಧಾನ್ಯವನ್ನು ಸ್ವಚ್ಛಗೊಳಿಸುವುದು ಮತ್ತು ಗ್ರೇಡಿಂಗ್ ಮಾಡುವುದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮೌಲ್ಯವರ್ಧನೆಯ ಮೊದಲ ಹಂತವೆಂದು ಎಲ್ಲರೂ ಒಪ್ಪಿಕ್ಕೊಳ್ಳುವ ವಾಸ್ತವ. ಇಲ್ಲಿಯವರೆಗೆ, ಈ ಯಂತ್ರಗಳು 5% ಜಿ.ಎಸ್.ಟಿ. ದರಕ್ಕೆ ಒಳಪಟ್ಟಿದ್ದವು. ಮೋದಿ ಸರ್ಕಾರವು ಜುಲೈ 18 ರಿಂದ ಇವುಗಳ ಜಿ.ಎಸ್.ಟಿ. ದರವನ್ನು 18% ಕ್ಕೆ ಹೆಚ್ಚಿಸಿದೆ

ಎರಡು ವಾರಗಳ ಹಿಂದಿನವರೆಗೂ ಜಿ.ಎಸ್‌.ಟಿ. ಕೌನ್ಸಿಲ್‌ನ ಅಧ್ಯಕ್ಷೆ ನಿರ್ಮಲಾ ಸೀತಾರಾಮನ್ ಸೇರಿದಂತೆ,  ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ತಾವು ರೈತ ಪರ ಎಂದು ಹೇಳಿಕೊಳ್ಳಲು ಉಲ್ಲೇಖಿಸಲು ಕೆಲವು ಕ್ರಮಗಳಾದರೂ ಇದ್ದವು. ಜೂನ್ ಕೊನೆಯ ವಾರದಲ್ಲಿ ನಡೆದ ಜಿ.ಎಸ್.ಟಿ. ಕೌನ್ಸಿಲ್‌ನ ಇತ್ತೀಚಿನ ಸಭೆಯ ಶಿಫಾರಸುಗಳು ಹಾಗೂ ತದನಂತರದ ಜುಲೈ 14 ರಂದು ಗೆಜೆಟ್‌ನ (#237280) ಅಧಿಸೂಚನೆಯು, ಈ ಸರ್ಕಾರವು ಕೇವಲ ಕಂಪನಿಗಳ ಪರವಲ್ಲ, ದೊಡ್ಡ ಕಾರ್ಪೊರೇಟ್‌ಗಳ ಪರವಾಗಿ ಕೆಲಸ ಮಾಡುತ್ತಿದೆ ಎಂಬ ವಾಸ್ತವವನ್ನು ಬಯಲಿಗೆಳೆಯುತ್ತದೆ.

ಸಣ್ಣ ಯಂತ್ರಗಳನ್ನು ಬಳಸಿ ಧಾನ್ಯವನ್ನು ಸ್ವಚ್ಛಗೊಳಿಸುವುದು ಮತ್ತು ಗ್ರೇಡಿಂಗ್ ಮಾಡುವುದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮೌಲ್ಯವರ್ಧನೆಯ ಮೊದಲ ಹಂತವೆಂದು ಎಲ್ಲರೂ ಒಪ್ಪಿಕ್ಕೊಳ್ಳುವ ವಾಸ್ತವ. ಇಲ್ಲಿಯವರೆಗೆ, ಈ ಯಂತ್ರಗಳು 5% ಜಿ.ಎಸ್.ಟಿ. ದರಕ್ಕೆ ಒಳಪಟ್ಟಿದ್ದವು. ಮೋದಿ ಸರ್ಕಾರವು ಈಗ  ಜುಲೈ 18 ರಿಂದ ಇವುಗಳ ಜಿ.ಎಸ್.ಟಿ. ದರವನ್ನು 18% ಕ್ಕೆ ಹೆಚ್ಚಿಸಿದೆ. ರೈತರ ಉತ್ಪನ್ನಗಳಿಗೆ ಮೌಲ್ಯವರ್ಧನೆಗಾಗಿ ಅತ್ಯಂತ ಮೂಲಭೂತ ಯಂತ್ರಗಳ ಮೇಲಿನ ತೆರಿಗೆಯ ಈ ಹೆಚ್ಚಳದೊಂದಿಗೆ, ಮೋದಿ ಸರ್ಕಾರವು ಕಾರ್ಪೊರೇಟ್‌ಗಳು ಕೇವಲ ಕೃಷಿ ಉತ್ಪನ್ನ ಸರಪಳಿಯ ಕೆಲವು ಭಾಗಗಳನ್ನು (ಮಾರುಕಟ್ಟೆ) ನಿಯಂತ್ರಿಸಿದರೆ ಸಾಲದು, ರೈತರ ಹತ್ತಿರವಿರುವ, ರೈತರ ಕೈಗೆ ಎಟುಕುವಂತಹ ಭಾಗಗಳನ್ನೂ, ಅಂದರೆ ಧಾನ್ಯದ ಶುದ್ಧೀಕರಣ ಮತ್ತು ಶ್ರೇಣೀಕರಣವನ್ನೂ ರೈತರಿಂದ ದೂರ ಸರಿಸಿ ತಮ್ಮ ಕಾರ್ಪೊರೇಟ್‌ ಗೆಳೆಯರು ತಮ್ಮ ಹತೋಟಿಯಲ್ಲಿ ತೆಗೆದುಕೊಳ್ಳಲಿ, ಅದರಿಂದಲೂ ಲಾಭ ಗಳಿಸಿಕೊಳ್ಳಲಿ ದಯಮಾಡಿ ಬನ್ನಿ ಎಂದು ಕರೆಯುತ್ತಿದ್ದಾರೆ.

ಧಾನ್ಯ ಸ್ವಚ್ಛಗೊಳಿಸುವ ಯಂತ್ರಗಳಿಗೂ 18% ಜಿಎಸ್‌ಟಿ!

ಜಿ.ಎಸ್.ಟಿ. ದರಗಳನ್ನು ತರ್ಕಬದ್ಧಗೊಳಿಸಬೇಕೆಂದು ಜಿ.ಎಸ್.ಟಿ. ಕೌನ್ಸಿಲ್ ದರಗಳಲ್ಲಿನ ಈ ಹೆಚ್ಚಳದ ಶಿಫಾರಸನ್ನು ಸಮರ್ಥಿಸುವ ಪ್ರಮುಖ ಕಾರಣವೆಂದು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೊಂಡಿತ್ತು. ಇದನ್ನು ಸ್ವಲ್ಪ ಪರಿಕ್ಷಿಸೋಣ. ಲಾನ್ ಕೇರ್ ಯಂತ್ರಗಳು, ಕೃಷಿ, ತೋಟಗಾರಿಕೆ ಮತ್ತು ಅರಣ್ಯದಲ್ಲಿ ಬಳಸುವ ಯಂತ್ರಗಳು, ಕಾಂಪೋಸ್ಟ್ ಮಾಡುವ ಯಂತ್ರಗಳು, ಹಾಲು ಕರೆಯುವ ಮತ್ತು ಡೈರಿ ಯಂತ್ರೋಪಕರಣಗಳು ಇವೆಲ್ಲವೂ 12% ಜಿ.ಎಸ್.ಟಿ.ಗೆ ಒಳಪಟ್ಟಿವೆ.

ಇತ್ತೀಚಿನ ತರ್ಕಬದ್ಧಗೊಳಿಸುವಿಕೆಯ ನಂತರ, 18% ಜಿ.ಎಸ್.ಟಿ ಸ್ಲ್ಯಾಬ್‌ನಲ್ಲಿ ಆಭರಣಗಳ ತಯಾರಿಕೆ ಯಂತ್ರಗಳು, ಪರಮಾಣು ರಿಯಾಕ್ಟರ್‌ಗಳು ಮತ್ತು ಸಂಬಂಧಿತ ಯಂತ್ರಗಳು, ಬಾಟಲ್ ಶುಚಿಗೊಳಿಸುವ ಮತ್ತು ಒಣಗಿಸುವ ಯಂತ್ರಗಳು, ಪಾನೀಯಗಳಲ್ಲಿ ಗಾಳಿ ಅಥವ ಸೋಡ ತುಂಬುವ ಯಂತ್ರಗಳು ಮತ್ತು ಬುಲ್ಡೋಜರ್‌ಗಳಿಗೆ ಸಮಾನವಾಗಿ ಈಗ ಧಾನ್ಯ ಸ್ವಚ್ಛಗೊಳಿಸುವ ಮತ್ತು ಗ್ರೇಡಿಂಗ್ ಯಂತ್ರಗಳನ್ನು ಕಾಣುತ್ತೇವೆ. ಅಂದರೆ ಮಹಾನುಭಾವರ ಜಿ.ಎಸ್.ಟಿ. (ಉಪ)ಸಮಿತಿಗಳು, ಜಿ.ಎಸ್.ಟಿ. ಕೌನ್ಸಿಲ್ ಮತ್ತು ನರೇಂದ್ರ ಮೋದಿಯವರ ಮಂತ್ರಿ ಪರಿಷತ್ತಿನ ಪ್ರಕಾರ, ರೈತರ ಆರ್ಥಿಕ ಸುಧಾರಣೆಗೆ ಮೊದಲ ಹೆಜ್ಜೆಯಾಗುವ ಧಾನ್ಯ ಶುಚಿಗೊಳಿಸುವ ಮತ್ತು ಗ್ರೇಡಿಂಗ್ ಯಂತ್ರಗಳ ಮೇಲೆ ಕೂಡ, ಪರಮಾಣು ರಿಯಾಕ್ಟರ್ ಮತ್ತು ಬುಲ್ಡೋಜರ್‌ಗಳಂತೆಯೇ ತೆರಿಗೆ ವಿಧಿಸಬೇಕು ಎಂದು ಪರಿಗಣಿಸುತ್ತಾರೆ!

ಸರ್ಕಾರವು ಮೊದಮೊದಲು ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂಬ ಮಂತ್ರವನ್ನು ಜಪಿಸಿತು. ಈಗ ತಮ್ಮ ನಿಜವಾದ ಬಣ್ಣವನ್ನು ತೋರಿಸಿದ್ದಾರೆ. ದೊಡ್ಡ ಕೃಷಿ ಕಾರ್ಪೊರೇಟ್‌ಗಳ ಲಾಭವನ್ನು ಪ್ರತಿ ವರ್ಷ ದ್ವಿಗುಣಗೊಳಿಸಲು ಕೆಲಸ ಮಾಡುವ ಸರ್ಕಾರವಿದು ಅಂತ. ಈಗ ಹೇಳೋಣ ವ್ಹಾ! ಮೋದಿಜೀ ವ್ಹಾ !!

ನಿಮಗೆ ಏನು ಅನ್ನಿಸ್ತು?
6 ವೋಟ್