ಜಿಎಸ್‌ಟಿ ಪ್ರಹಾರ | ನೂತನ ಸರಕು ಸೇವಾ ತೆರಿಗೆ ವಿರುದ್ಧ ಮೀಮ್ಸ್‌ ಸಮರ

ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಇತ್ತೀಚೆಗೆ ತನ್ನ 47ನೇ ಸಭೆಯಲ್ಲಿ ಅಗತ್ಯ ವಸ್ತುಗಳು, ಆಹಾರ ಪದಾರ್ಥಗಳ ಮೇಲಿದ್ದ ತೆರಿಗೆ ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ. ಜುಲೈ 18ರಿಂದ ನೂತನ ತೆರಿಗೆ ಜಾರಿಯಾಗಿದೆ. ತೆರಿಗೆ ವ್ಯಾಪ್ತಿಯಿಂದ ಹೊರಗಿದ್ದ ಮೊಸರು, ಮಜ್ಜಿಗೆ, ಲಸ್ಸಿ ಮುಂತಾದ ಆಹಾರ ಪದಾರ್ಥಗಳ ಮೇಲೆ ತೆರಿಗೆ ವಿಧಿಸಿ ಜನಾಕ್ರೋಶಕ್ಕೆ ತುತ್ತಾಗಿದೆ.

ಆರೋಗ್ಯ ಸೇವೆ ಒದಗಿಸುವ ಆಸ್ಪತ್ರೆಗಳ ಹಾಸಿಗೆಗಳು, ಪ್ರಿಂಟಿಂಗ್ ಇಂಕ್, ಎಲ್ಇಡಿ ದೀಪಗಳ ಮೇಲೂ ಶೇ 5 ರಿಂದ 18 ರವರೆಗೆ ಜಿಎಸ್‌ಟಿ ಹೇರಲಾಗಿದೆ. ಕೇಂದ್ರ ಸರ್ಕಾರದ ಈ ಜಿಎಸ್‌ಟಿ ಹೆಚ್ಚಳದ ವಿರುದ್ಧ ರಾಜಕೀಯ ನಾಯಕರು ಸೇರಿದಂತೆ ಜನಸಾಮಾನ್ಯರೂ ಮೀಮ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವರು ವ್ಯಂಗ್ಯವಾಗಿ ಕುಟುಕಿರುವ ಕೆಲವು ಮೀಮ್‌ಗಳು ಇಲ್ಲಿವೆ. 

Eedina App

ಅನಾರೋಗ್ಯದಲ್ಲೂ ಮಧ್ಯಮ ವರ್ಗವನ್ನು ಬಿಡುತ್ತಿಲ್ಲ

₹5,000 ಸಾವಿರ ಬೆಲೆಯ ಆಸ್ಪತ್ರೆಯ ಕೊಠಡಿಗೆ ಶೇ 5 ಜಿಎಸ್‌ಟಿ. ತೆರಿಗೆ ಪಾವತಿಸಿದರೂ ಪ್ರಧಾನಿ ಮೋದಿ ಅವರು ಮಧ್ಯಮ ವರ್ಗವನ್ನು ಅನಾರೋಗ್ಯದಲ್ಲೂ ಬಿಡುತ್ತಿಲ್ಲ” ಎಂದು ಕುಮಾರ್ ಸೇವಕ್ ಎಂಬುವವರು ಟೀಕಿಸಿದ್ದಾರೆ. "ನಾನು ನಿಮಗೆ ಸಹಾಯ ಮಾಡುತ್ತಿಲ್ಲ, ನಿಮ್ಮನ್ನು ದೋಚಲು ಪ್ರಯತ್ನಿಸುತ್ತಿದ್ದೇನೆ" ಎಂದು ಹೇಳುವ ಮೀಮ್‌ವೊಂದನ್ನು ಅವರು ಹಂಚಿಕೊಂಡಿದ್ದಾರೆ. 

AV Eye Hospital ad

"ಪನೀರ್‌ ಮೇಲೆ ಶೇ 5ರಷ್ಟು ಜಿಎಸ್‌ಟಿಯನ್ನು ನೀವು ನಂಬುತ್ತೀರಾ?" ಎಂದು ನ್ಯೂಟನ್‌ ಬ್ಯಾಂಕ್‌ ಕುಮಾರ್‌ ಎಂಬವರು ಮಗನಿಗೆ ಪನ್ನೀರ್‌ ತಿನ್ನಬಾರದು ಎಂದು ಹೇಳುವ ಚಿತ್ರವೊಂದನ್ನು ಪೋಸ್ಟ್‌ ಮಾಡಿದ್ದಾರೆ. 

ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಅಣಕವಾಡಿರುವ ಇನ್ನೂ ಕೆಲವು ಮೀಮ್‌ಗಳು

"ಪನೀರ್‌, ಮಜ್ಜಿಗೆ, ಮಸಾಲಾಗೆ ಹೊಸ ಜಿಎಸ್‌ಟಿ. ಈ ಜಿಎಸ್‌ಟಿ ಗಣಿತವು ಪರೀಕ್ಷೆಯಲ್ಲಿ ಹೊಸ ಲೆಕ್ಕಾಚಾರದ ಪ್ರಶ್ನೆಗಳಿಗೆ ಸಹಾಯ ಮಾಡುತ್ತದೆ" ಎಂದು ಅಹ್ಮದ್‌ ಎಂಬುವವರು ಪರೀಕ್ಷೆಯಲ್ಲಿ ಜಿಎಸ್‌ಟಿ ಲೆಕ್ಕಾಚಾರದ ಪೋಸ್ಟ್‌ ಮಾಡಿದ್ದಾರೆ.

ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರೂ ಸಹ ಜಿಎಸ್‌ಟಿ ಕುರಿತ ಈ ಹೊಸ ಲೆಕ್ಕಾಚಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಪನೀರ್‌, ಮಜ್ಜಿಗೆ, ಮಸಾಲಾ ನನಗೆ ಹಾಸ್ಟೆಲ್‌ನಲ್ಲಿ ಆಹಾರವಾಗಿತ್ತು" ಎಂದು ವರ್ಷ ಎಂಬ ಹುಡುಗಿಯೊಬ್ಬಳು ಗೋಡೆಗೆ ಒರಗಿ ಅಳುತ್ತಿರುವ ಚಿತ್ರವೊಂದನ್ನು ಪೋಸ್ಟ್‌ ಮಾಡಿದ್ದಾರೆ.

ಇನ್ನೂ ಕೆಲವರು ಜಿಎಸ್‌ಟಿ ಕುರಿತು ವಿಡಿಯೊಗಳ ಮೂಲಕ ವ್ಯಂಗ್ಯವಾಡಿದ್ದಾರೆ.

ಜುಲೈ 18ರಿಂದ ಮೊಸರು, ಮಜ್ಜಿಗೆಗಳ ಮೇಲೆ ಜಿಎಸ್‌ಟಿ ಜಾರಿಯಾಗುತ್ತಿದ್ದಂತೆ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್‌) ತನ್ನ ಹಾಲು ಉತ್ಪನ್ನಗಳ ಬೆಲೆಯನ್ನು ₹1 ರಿಂದ ₹ 3 ಹೆಚ್ಚಿಸಿ ನೂತನ ಪ್ರಕಟಣೆ ಹೊರಡಿಸಿತು. ಇದು ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆಗೆ ಒಳಗಾಯಿತು.  ಭಾರಿ ವಿರೋಧದ ನಂತರ ಕೆಲವು ಗಂಟೆಗಳಲ್ಲೇ ಕೆಎಂಎಫ್‌ ಪರಿಷ್ಕರಣೆ ಮಾಡಿದ್ದ ಮೊಸರು, ಮಜ್ಜಿಗೆ, ಲಸ್ಸಿಗಳ ಬೆಲೆಯನ್ನು ಮರುಪರಿಷ್ಕರಣೆ ಮಾಡಿ ₹1 ಇಳಿಕೆ ಮಾಡಿತ್ತು.  

ನಿಮಗೆ ಏನು ಅನ್ನಿಸ್ತು?
3 ವೋಟ್
eedina app