ಶಾಲೆಗಳಲ್ಲಿ ವೇದಗಣಿತ | ಶಿಕ್ಷಣ ವ್ಯವಸ್ಥೆಯ ʼಬ್ರಾಹ್ಮಣೀಕರಣʼದ ಮುಂದುವರಿದ ಭಾಗ

vedic maths

ಈಗಾಗಲೇ ಮಕ್ಕಳು ಶಾಲೆಯಲ್ಲಿ ಗಣಿತ ವಿಷಯವನ್ನು ವೈಜ್ಞಾನಿಕವಾಗಿ ಕಲಿಯುತ್ತಿದ್ದಾರೆ. ವೇದ ಗಣಿತದ ಮೂಲಕ ಇನ್ನೊಂದು ಪದ್ಧತಿಯಲ್ಲಿ ಕಲಿಸುತ್ತೇವೆ ಎನ್ನುವುದಾದರೆ ಮಕ್ಕಳು ಮಾನಸಿಕ ಒತ್ತಡಕ್ಕೆ ಸಿಲುಕುವುದಿಲ್ಲವೇ? ಮಕ್ಕಳು ತರಗತಿಯಲ್ಲಿ ಹೇಳಿಕೊಡುವ ಗಣಿತವನ್ನು ಕಲಿಯಬೇಕಾ ಅಥವಾ ಸಂಜೆ ಕಲಿಸಿಕೊಡುವ ವೇದಗಣಿತವನ್ನು ಕಲಿಯಬೇಕಾ?

ಶಿಕ್ಷಣ ಇಲಾಖೆ ಯಾವುದೇ ಒಂದು ಹೊಸ ಪಠ್ಯವನ್ನು ಶಿಕ್ಷಣದಲ್ಲಿ ಸೇರಿಸಬೇಕೆಂದರೆ, ಸೇರಿಸಬೇಕಿರುವ ವಿಷಯ ಮತ್ತು ಮಕ್ಕಳಿಗೆ ಹೊಸ ವಿಷಯವನ್ನು ಕಲಿಸಬೇಕು ಎನ್ನುವ ತೀರ್ಮಾನ ಮಾಡಬೇಕೆಂದರೆ, ಡಿಎಸ್‌ಇಆರ್‌ಟಿ (Department of State Educational Research and Training) ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಗಮನಕ್ಕೆ ತರಬೇಕು. ಡಿಎಸ್‌ಇಆರ್‌ಟಿ ಗಮನಕ್ಕೆ ತರದೇ ಯಾವುದೇ ಒಂದು ವಿಷಯವನ್ನು ಪಠ್ಯಪುಸ್ತಕಕ್ಕೆ ಸೇರಿಸಲು ಸರ್ಕಾರಕ್ಕೆ ಅಧಿಕಾರ ಇರುವುದಿಲ್ಲ. ಹಾಗಾಗಿ ತಮ್ಮ ಅಜೆಂಡವನ್ನು ಬೇರೆ ರೀತಿಯಲ್ಲಿ ಹೇರಲು ಸರ್ಕಾರ ಹೊರಟಿದೆ.

Eedina App

ಕೋವಿಡ್‌ನಿಂದ ಸತತವಾಗಿ ಮೂರು ವರ್ಷಗಳ ಕಾಲ ಸರಿಯಾಗಿ ಮಕ್ಕಳಿಗೆ ಕಲಿಕೆ ಆಗಿಲ್ಲವೆಂದು ಮತ್ತು ಇದರಿಂದಾಗಿ ವಿದ್ಯಾರ್ಥಿಗಳು ನಷ್ಟ ಅನುಭವಿಸಿದ್ದಾರೆ ಎಂದು ವರದಿಗಳು ಬಂದಿರುವುದನ್ನು ನಾವು ನೋಡಬಹುದು. ಈ ಸಮಯದಲ್ಲಿ ಸರ್ಕಾರ ಮಕ್ಕಳನ್ನು ಹೇಗೆ ಇನ್ನಷ್ಟು ಕಲಿಕೆಯಲ್ಲಿ ತೊಡಗುವಂತೆ ಮಾಡುವತ್ತ ಚಿಂತಿಸುತ್ತಿಲ್ಲ. ಶೈಕ್ಷಣಿಕ ವರ್ಷ ಆರಂಭವಾದ ನಂತರ ಪಠ್ಯ ಪುಸ್ತಕ ಮರು ಪರಿಷ್ಕರಣೆಯಲ್ಲಿ ಅದ ಗೊಂದಲ, ಈಗ ವೇದಗಣಿತ ಕಲಿಸುವ ನಿಟ್ಟಿನಲ್ಲಿ ಸರ್ಕಾರವು ತೆಗೆದುಕೊಂಡ ನಿರ್ಣಯವು ಸರಿಯಾದ ದಿಕ್ಕಿನಲಿಲ್ಲ. ಇಲ್ಲಿಯವರೆಗೆ ವೇದಗಣಿತದ ಬಗ್ಗೆ ಯಾವ ಪಠ್ಯಕ್ರಮದಲ್ಲಾಗಲಿ ಪ್ರಸ್ತಾಪ ಮಾಡಿರುವುದನ್ನು ನೋಡಿಲ್ಲ. ವೇದಗಣಿತದ ಬಗ್ಗೆ ಇಲ್ಲಿಯವರೆಗೆ ಯಾವ ಗಣಿತ ತಜ್ಞರೂ ಚರ್ಚೆ ಮಾಡಿರುವುದಾಗಲಿ ನೋಡಿಲ್ಲ. ಆದರೂ ವೇದಗಣಿತವನ್ನು ಬೋಧಿಸಲು ಸರ್ಕಾರ ಹೊರಟಿರುವುದು ಸಂವಿಧಾನದ ಉಲ್ಲಂಘನೆ ಎಂದೇ ಹೇಳಬಹುದು.

ಶಿಕ್ಷಣದ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದು ಕೂಡ ಶಿಕ್ಷಣ ಸಚಿವರಿಗೆ ಪ್ರಸ್ತಾಪವಿಲ್ಲದೇ ಅಥವಾ ಅವರ ಗಮನಕ್ಕೆ ತರದೇ ಏಕಾಏಕಿ ಇಂತಹ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಿಲ್ಲ, ಅದನ್ನು ಜಾರಿ ಮಾಡಲು ಸಾಧ್ಯವಿಲ್ಲ. ಇದೆಲ್ಲವೂ ಶಿಕ್ಷಣ ಸಚಿವರ ಗಮನಕ್ಕಿದ್ದರೂ ಕೂಡ ಇದನ್ನು ಗೌಪ್ಯವಾಗಿ, ಬಹಳ ನಿಪುಣತೆಯಿಂದ ಶಿಕ್ಷಣ ಕ್ಷೇತ್ರವನ್ನು ಚಾತುವರ್ಣ ಪದ್ಧತಿ ಪುನುರುತ್ಥಾನ ಮಾಡಬೇಕೆಂದು ಹೊರಟಂತಿದೆ.

AV Eye Hospital ad

ಭಾರತ ಸಂವಿಧಾನದ ಆಶಯಕ್ಕೆ ವಿರುದ್ಧ

ಈಗ ಮಕ್ಕಳು ಶಾಲೆಯಲ್ಲಿ ಗಣಿತ ವಿಷಯವನ್ನು ವೈಜ್ಞಾನಿಕವಾಗಿ ಕಲಿಯುತ್ತಿದ್ದಾರೆ. ಇದನ್ನು ವೇದ ಗಣಿತದ ಮೂಲಕ ಇನ್ನೊಂದು ಪದ್ದತಿಯಲ್ಲಿ ಕಲಿಸುತ್ತೇವೆ ಅನ್ನುವುದಾದರೆ, ಮಕ್ಕಳು ಶಿಕ್ಷಣದಲ್ಲಿ ಇನ್ನಷ್ಟು ಹಿಂದುಳಿಯುವುದಲ್ಲದೇ, ಮಾನಸಿಕ ತೊಂದರೆಗಳಿಗೆ ಸಿಲುಕುವುದಿಲ್ಲವೇ! ಮಕ್ಕಳು ಶಾಲೆಯಲ್ಲಿ ಕಲಿಸಿಕೊಡುವ ಪಾಠವನ್ನು ಕಲಿಯಬೇಕಾ ಅಥವಾ ಸಂಜೆ ಕಲಿಸಿಕೊಡುವ ವೇದಗಣಿತವನ್ನು ಕಲಿಯಬೇಕಾ? ವೇದ ಗಣಿತ ಎಂದರೆ ಸುಲಭವಾಗಿ ತ್ವರಿತ ಗತಿಯಲ್ಲಿ, ಗಣಿತವನ್ನು, ಸಮಸ್ಯೆಯನ್ನು ಬಗೆಹರಿಸುವ ಕ್ರಮ ಅಂತ ಹೇಳುತ್ತಾರೆ. ವೇದ ಗಣಿತವು ಬಹಳ ಶಾರ್ಟ್‌ಕಟ್ ವಿಧಾನವನ್ನು ಅನುಸರಿಸಿ ಕಲಿಸುವುದಾಗಿದೆ. ವೈಜ್ಞಾನಿಕ ಚಿಂತನೆಯನ್ನ ಕಲಿಸುವ ಮತ್ತು ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವ ಭಾರತದ ಸಂವಿಧಾನದ ಆಶಯಕ್ಕೆ ವೇದ ಗಣಿತವು ವಿರುದ್ಧವಾಗಿದೆ.

ವೇದ ಗಣಿತ ಅನ್ನುವುದು ಯಾರಿಗೂ ಗೊತ್ತಿಲ್ಲದೇ ಇರುವಂತಹ ಸಮಯದಲ್ಲಿ ಎಸ್‌ಸಿಪಿ ಟಿಎಸ್‌ಪಿ ಹಣವನ್ನು ಬಳಸಿಕೊಂಡು ಚಾತುವರ್ಣ ವ್ಯವಸ್ಥೆಯನ್ನು ಮರಳಿ ಜಾರಿ ಮಾಡಲು ಹೊರಟಿರುವ ಹುನ್ನಾರವಾಗಿದೆ. ಎಸ್‌ಸಿಪಿ-ಟಿಎಸ್‌ಪಿ ಹಣವನ್ನು ದುರ್ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ ಇವರು ಶಿಕ್ಷಣದ ಹೆಸರಿನಲ್ಲಿ ವೇದ ಗಣಿತವನ್ನು ಕಲಿಸುತ್ತೇವೆ ಎಂದು ಹೇಳುತ್ತಿರುವುದು ಕಾನೂನು ಬಾಹಿರವಾದ ನಡವಳಿಕೆ. ಅಷ್ಟೇ ಅಲ್ಲದೇ ಕಾನೂನು ಉಲ್ಲಂಘನೆಯನ್ನು ಮಾಡುತ್ತಿದೆ. 

ಈ ಸುದ್ದಿ ಓದಿದ್ದೀರಾ? ಕೋಲಾರ | ದೇವರ ವಿಗ್ರಹ ಮುಟ್ಟಿದ್ದಕ್ಕೆ ದಲಿತ ಬಾಲಕನಿಗೆ 60 ಸಾವಿರ ರೂ.ದಂಡ

ಶಿಕ್ಷಕರಿಗೆ ಆಧುನಿಕ ತಂತ್ರಜ್ಞಾನದ ಪ್ರಜ್ಞೆಯನ್ನು ಹೊಂದಿರಬೇಕು ಎಂದು ಹೇಳುವ ಸಂದರ್ಭದಲ್ಲಿ ಅವೈಜ್ಞಾನಿಕ ಪದ್ಧತಿಯನ್ನು ಶಿಕ್ಷಕರಿಗೆ ತರಬೇತಿ ನೀಡಿ ಅವರನ್ನು ಮರಳಿ ಗುರುಕುಲ ಪದ್ದತಿಗೆ ತಳ್ಳುತ್ತಿರುವುದು ಖಂಡನಾರ್ಹವಾಗಿದೆ ಮತ್ತು ಅವರೇ ಜಾರಿ ಮಾಡಿರುವ ಹೊಸ ಶಿಕ್ಷಣ ನೀತಿ 2020 ನೀತಿಗೆ ವಿರುದ್ದವಾಗಿದೆ. ಮತ್ತು ಪಠ್ಯಪುಸ್ತಕದ ಪರಿಷ್ಕರಣೆಯ ಮುಂದಿನ ಭಾಗವೇ ವೇದಗಣಿತ ಜಾರಿ. ಇವೆಲ್ಲವೂ ಶಿಕ್ಷಣವನ್ನು ಸಂಪೂರ್ಣವಾಗಿ ಕೇಸರಿಕರಣ ಮಾಡುವ ಹುನ್ನಾರವಾಗಿದೆ.

ನಿಮಗೆ ಏನು ಅನ್ನಿಸ್ತು?
6 ವೋಟ್
eedina app