ಯಾವ ತೀರ್ಪುಗಳೂ 10% EWS ಕೋಟಾದ ಮೂಲಭೂತ ಪ್ರಶ್ನೆಯನ್ನು ಕೇಳುತ್ತಿಲ್ಲ: ಯೋಗೇಂದ್ರ ಯಾದವ್

EWS quota

ಈ ಹಿಂದೆ, ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ ಸೇರಿದಂತೆ, ಪರಿಶಿಷ್ಟರಿಗೆ ಶೈಕ್ಷಣಿಕ ಯೋಜನೆಗಳು, ಕೃಷಿಕ ಜಾತಿಗಳಿಗಾಗಿ ಕೋಟಾಗಳು ಮತ್ತು ವಂಚಿತ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಹಲವಾರು ಸಾಮಾಜಿಕ ನೀತಿಗಳನ್ನು, ಮೀಸಲಾತಿಯ 50 ಪರ್ಸೆಂಟ್ ಮಿತಿಯ ಉಲ್ಲಂಘನೆಯ ನೆಪದಲ್ಲಿ ಕೈ ಬಿಡಲಾಗಿದೆ. ಇದು ಸರಿಯಲ್ಲ

ಈಗ ನಾವು ಪುರಾವೆಗಳಿಗೆ ಅಥವಾ ಅದರ ಕೊರತೆಯ ಪ್ರಶ್ನೆಗೆ ಬರೋಣ. ವಿಚಿತ್ರವೆಂದರೆ, ಯಾವ ತೀರ್ಪುಗಳೂ 10 ಪರ್ಸೆಂಟ್ EWS ಕೋಟಾದ ಮೂಲಭೂತ ಪ್ರಶ್ನೆಯನ್ನು ಕೇಳುತ್ತಿಲ್ಲ: ಸಾಮಾನ್ಯ ವರ್ಗದ EWSನ ಜನಸಂಖ್ಯೆಯ ಪಾಲು ಎಷ್ಟು? ನಾವು ಸಿನ್ಹೋ ವರದಿಯನ್ನು ಪರಿಗಣಿಸಿದರೆ ಈ ಪ್ರಮುಖ ಪುರಾವೆಯನ್ನು ಬಹುಮತದ ತೀರ್ಪಿನಲ್ಲಿ ಉದ್ದೇಶಪೂರ್ವಕವಾಗಿ ಉಲ್ಲೇಖಿಸಲಾಗಿಲ್ಲವೇ? ಸಾಮಾನ್ಯ ವರ್ಗಕ್ಕೆ ಸೇರಿದವರಲ್ಲಿ ಬಡತನ ರೇಖೆಗಿಂತ ಕೆಳಗಿರುವವರು ದೇಶದ ಜನಸಂಖ್ಯೆಯ ಕೇವಲ ಶೇಕಡಾ 5.4ರಷ್ಟಿದ್ದಾರೆ (ದೇಶದ ಎಸ್‌ಸಿ/ಎಸ್‌ಟಿ/ಒಬಿಸಿಗಳಲ್ಲದ ಸುಮಾರು 30 ಪ್ರತಿಶತ ಜನಸಂಖ್ಯೆಯ, 18 ಪ್ರತಿಶತ BPL ಕುಟುಂಬಗಳು ಎಂದು ಲೆಕ್ಕಹಾಕಲಾಗಿದೆ).

ಅವರಿಗೆ ಶೇ 10ರಷ್ಟು ಮೀಸಲಾತಿ ನೀಡಲು ಇರುವ ಆಧಾರವೇನು? ಬಹುಮತದ ತೀರ್ಪು ಕೂಡ ನ್ಯಾಯಾಲಯಗಳು ಯಾವಾಗಲೂ ಒತ್ತಾಯಿಸುವ ಮತ್ತು ಎಂ ನಾಗರಾಜ್ vs ಯೂನಿಯನ್ ಆಫ್ ಇಂಡಿಯಾ 2008 ಪ್ರಕರಣದ ತೀರ್ಪಿನ ನಂತರ ಅತ್ಯಂತ ಸ್ಪಷ್ಟವಾಗಿ ರೂಪುಗೊಂಡ, ಪ್ರಾಯೋಗಿಕ ಅವಶ್ಯಕತೆಗಳೊಂದಿಗೆ ತೊಡಗಿಸಿಕೊಳ್ಳುವ ಕಾರ್ಯಕ್ಕೆ ಕೈ ಹಾಕಿಲ್ಲ. ಸುಪ್ರೀಂ ಕೋರ್ಟ್‌, ಅಸ್ತಿತ್ವದಲ್ಲಿರುವ ಪ್ರಾತಿನಿಧ್ಯದ ಮಟ್ಟ ಅಥವಾ ಅದರ ಆರ್ಥಿಕ ದುರ್ಬಲತೆಯ ಅಳತೆಯ ಬಗ್ಗೆ ಕೂಲಂಕಷವಾಗಿ ಇನ್ನೂ ಪರಿಶೀಲನೆ ನಡೆಸಿಲ್ಲ.

ಮೆರಿಟ್ ಮತ್ತು ಔಪಚಾರಿಕ (ನೈತಿಕ ಎಂದು ಪರಿಗಣಿಸಲ್ಪಡುವ) ಸಮಾನತೆಯ ಮೇಲೆ ಈ ಕೋಟಾದ ಪ್ರಭಾವದ ವಿಶ್ಲೇಷಣೆಯನ್ನು ಕಡೆಗಣಿಸಿರುವುದು ಆಶ್ಚರ್ಯಕರವಾಗಿದೆ. ವಾಸ್ತವವಾಗ, EWS ತಿದ್ದುಪಡಿಯನ್ನು 2019ರಲ್ಲಿ ಜಾರಿಗೊಳಿಸಿದ ನಂತರ ನಡೆಸಿದ ಒಂದು ಪ್ರಾಯೋಗಿಕ ವಿಶ್ಲೇಷಣೆಯು 'ಆರ್ಥಿಕವಾಗಿ ದುರ್ಬಲ ಮೇಲ್ಜಾತಿ' ಎಂದು ಗುರುತಿಸಲ್ಪಟ್ಟ ಗುಂಪು ಬೃಹತ್ ಪ್ರಮಾಣದಲ್ಲಿ, ಅಂದರೆ 445 ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿ ಜನಸಂಖ್ಯೆಯ ಶೇ 28ಕ್ಕಿಂತ ಹೆಚ್ಚು ಪ್ರಾತಿನಿಧ್ಯ ಪಡೆದಿದೆ ಎಂದು ತಿಳಿಸಿದೆ.

AV Eye Hospital ad

ಇನ್ನೂ ಹೇಳಬೇಕೆಂದರೆ ಬಹುಮತದ ತೀರ್ಪು ಒಟ್ಟು ಮೀಸಲಾತಿಗಿದ್ದ 50 ಪರ್ಸೆಂಟ್ ಮಿತಿಯನ್ನು ಸಂತೋಷದಿಂದ 'ಮನ್ನಾ' ಮಾಡಿದೆ. ಈ ಹಿಂದೆ, ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ ಸೇರಿದಂತೆ, ಪರಿಶಿಷ್ಟ ಪ್ರದೇಶಗಳಲ್ಲಿ ಶೈಕ್ಷಣಿಕ ನ್ಯಾಯ ಕ್ರಮಗಳು, ಕೃಷಿಕ ಜಾತಿಗಳಿಗಾಗಿ ಕೋಟಾಗಳು ಮತ್ತು ವಂಚಿತ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಹಲವಾರು ಸಾಮಾಜಿಕ ನೀತಿಗಳನ್ನು, ಮೀಸಲಾತಿಯ 50 ಪರ್ಸೆಂಟ್ ಮಿತಿಯ ಉಲ್ಲಂಘನೆಯ ನೆಪದಲ್ಲಿ ಕೈ ಬಿಡಲಾಗಿದೆ. ಇದು ವಿರೋಧಾತ್ಮಕ ಮಾನದಂಡಗಳನ್ನು ಅನುಸರಿಸಿರುವ ಅತ್ಯಂತ ಸ್ಪಷ್ಟವಾದ ಪ್ರಕರಣ ಎಂದು ತೋರುತ್ತದೆ. ಮಿತಿಯು ಈ ಮೊದಲೇ ಅಸ್ತಿತ್ವದಲ್ಲಿರುವ ಷರತ್ತುಗಳ ಅಡಿಯಲ್ಲಿ ಮಾಡಲಾದ ಮೀಸಲಾತಿಗೆ ಮಾತ್ರ ಅನ್ವಯಿಸುತ್ತದೆ ಎಂಬ ರಕ್ಷಣಾತ್ಮಕ ಹೇಳಿಕೆಯು ಸಾಂವಿಧಾನಿಕ ತತ್ವಗಳ ಬೆಳಕಿನಲ್ಲಿ ಯಾವುದೇ ರಹಸ್ಯ ಉಳಿಸಿಕೊಳ್ಳಲು ಶಕ್ತವಾಗಿಲ್ಲ.

ನ್ಯಾಯಮೂರ್ತಿ ಬೇಲಾ ತ್ರಿವೇದಿ
ನ್ಯಾಯಮೂರ್ತಿ ಬೇಲಾ ತ್ರಿವೇದಿ

ಅಂತಿಮವಾಗಿ, ತೀರ್ಪಿನಲ್ಲಿ ಮೀಸಲಾತಿಯನ್ನು ಚರ್ಚಿಸುವಾಗ ಆಗಾಗ್ಗೆ ಉಲ್ಲೇಖಿಸಲಾಗುವ 'ಮೆರಿಟ್’ ಎಂಬ ತತ್ವದ  ಯಾವುದೇ ಉಲ್ಲೇಖವಿಲ್ಲ. ಈ ಮೌನವು ಮೊದಲ ಎರಡು ವರ್ಷಗಳ EWS ಕೋಟಾದ ಅನ್ವಯಿಸುವಿಕೆಯಲ್ಲಿ ಕಂಡುಬಂದ, EWSಗಿದ್ದ ಕಟ್-ಆಫ್ OBCಗಿಂತ ಕಡಿಮೆಯಾಗಿದೆ ಎಂಬ ಸಾಕ್ಷ್ಯದ ಎದುರು ಸ್ಪಷ್ಟವಾಗಿದೆ. ಅಂದರೆ ನಾವು ಮೇಲ್ವರ್ಗದ ಮಕ್ಕಳ ಬಗ್ಗೆ ಚರ್ಚಿಸುವಾಗ ಮಾತ್ರ ಅರ್ಹತೆ/ಮೆರಿಟ್ ಮುಖ್ಯವಾಗುತ್ತದೆ, 'ನಮ್ಮ' ಮಕ್ಕಳು ಕ್ಯಾಪಿಟೇಷನ್ ಫೀಗಳಿಂದ ಪ್ರಯೋಜನ ಪಡೆಯುತ್ತಿರುವಾಗ, ವಿದೇಶದಲ್ಲಿ ನಕಲಿ ಪದವಿಗಳನ್ನು ಪಡೆಯುವಾಗ ಅಥವಾ EWS ಕೋಟಾವನ್ನು ಪಡೆಯುವುದರ ಬಗ್ಗೆ ನಾವು ಚರ್ಚಿಸುವಾಗ ಖಂಡಿತ ಮುಖ್ಯವಾಗುವುದಿಲ್ಲ!.

ನ್ಯಾಯಮೂರ್ತಿ ಬೇಲಾ ತ್ರಿವೇದಿ ಅವರ ಆದೇಶದಲ್ಲಿ 'ದೇಶದ ಹಿತಾಸಕ್ತಿಗಾಗಿ ಮತ್ತು 'ಪರಿವರ್ತಕ ಸಾಂವಿಧಾನಿಕತೆ’ ಯತ್ತ ಹೆಜ್ಜೆ ಹಾಕಲು, ಮೀಸಲಾತಿಗಳನ್ನು ಮರುಪರಿಶೀಲಿಸುವ ಮತ್ತು ಸಮಯದ ಮಿತಿಯನ್ನು ನಿಗದಿಪಡಿಸುವ ವಿಚಿತ್ರವಾದ ಪ್ರಯತ್ನವಿದೆ.

‘ಗೌರವಾನ್ವಿತ ನ್ಯಾಯಮೂರ್ತಿ ಬೇಲಾ, ʼ104ನೇ ಸಾಂವಿಧಾನಿಕ ತಿದ್ದುಪಡಿಯ ಪ್ರಕಾರ, ಸಂಸತ್ತು ಮತ್ತು ಅಸೆಂಬ್ಲಿಗಳಲ್ಲಿ  SC/ST ಮೀಸಲಾತಿಯು 2030ರಲ್ಲಿ ಕೊನೆಗೊಳ್ಳುತ್ತದೆ ಹಾಗೂ ಆಂಗ್ಲೋ ಇಂಡಿಯನ್ಸ್ ಕೋಟಾ ಈಗಾಗಲೇ ಸ್ಥಗಿತಗೊಂಡಿದೆʼ ಎಂದು ನೆನಪಿಸುತ್ತಾರೆ (ಪ್ಯಾರಾ 28-29). ಜಸ್ಟೀಸ್ ಪರ್ದಿವಾಲಾ, ʼತಮ್ಮ ಜಾತಿ ಆಧಾರಿತ ಕೋಟಾಗಳ ಬಗೆಗಿನ ದೃಷ್ಟಿಕೋನಗಳ ಕಾರಣದಿಂದಾಗಿ ದೋಷಾರೋಪಣೆಯಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡವರು. ಜಾತಿಯಿಲ್ಲದ ಸಮಾಜದ ಕಡೆಗೆ ಸಾಗಲು, ಸ್ವಾತಂತ್ರ್ಯದ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಗುಂಪುಗಳ ನಡುವಿನ ಅಂತರಕ್ಕೆ ಸೇತುವೆ ಕಟ್ಟಲಾಗಿದೆʼ ಎಂಬ ಹುರುಳಿಲ್ಲದ ಮಾತುಗಳನ್ನು ಸೇರಿಸಿದರು.

ನ್ಯಾಯಮೂರ್ತಿ ಪರ್ದಿವಾಲಾ
ನ್ಯಾಯಮೂರ್ತಿ ಪರ್ದಿವಾಲಾ

ನ್ಯಾಯಮೂರ್ತಿ ಪರ್ದಿವಾಲಾ ಅವರು ಮೀಸಲಾತಿಗೆ ಸಮಯ ಮಿತಿಯನ್ನು ಹಾಕುವ ಮೂಲ ಉದ್ದೇಶದ ಬಗ್ಗೆ ನಿಜಕ್ಕೂ ಹಾಸ್ಯಾಸ್ಪದವಾದ ಎಚ್ಚರಿಕೆಯನ್ನು ಚರ್ಚಿಸುತ್ತಾರೆ ಮತ್ತು ಮೀಸಲಾತಿಗಳು ಪಟ್ಟಭದ್ರ ಹಿತಾಸಕ್ತಿಗಳಾಗುವುದನ್ನು ತಡೆಯಬೇಕು ಎಂದು ಬಲವಾಗಿ ವಾದಿಸುತ್ತಾರೆ (ಪ್ಯಾರಾ 190). ಈ ದುರದೃಷ್ಟಕರ ಹೇಳಿಕೆಗಳು ಅವರ ಅಂತರ್ಗತ (ವಿಶ್ವ) ದೃಷ್ಟಿಕೋನಕ್ಕೆ ಸಮ್ಮತವಾಗಿರುವ, ಪ್ರಸ್ತುತ ನಿರ್ಧಾರದಲ್ಲಿ ಢಾಳಾಗಿ ಕಾಣುವ ವಿರೋಧಾತ್ಮಕ ಮಾನದಂಡಗಳನ್ನು ಬಹಿರಂಗಪಡಿಸುತ್ತವೆ.

ಸದ್ಯದ ಪರಿಸ್ಥಿತಿಯಲ್ಲಿ, ಈ ನಿರ್ಧಾರವು, 'ಸಾಮಾನ್ಯ ವರ್ಗ'ಕ್ಕಾಗಿ ರಚಿಸಲಾದ ಕೋಟಾಕ್ಕೆ, ವಿನಾಯಿತಿಯ ಕ್ಷೇತ್ರವನ್ನು ‘ಸಾರ್ವತ್ರಿಕವಾಗಿ ಸ್ವೀಕಾರಾರ್ಹ‘ ಆರ್ಥಿಕ ಆಧಾರಗಳ ಮೇಲೆ ಗುರುತಿಸುವಲ್ಲಿ ಭಾರತದ ಸೂಕ್ಷ್ಮವಾದ ಸಕಾರಾತ್ಮಕ ಕ್ರಿಯಾ ಯೋಜನೆಯ ನ್ಯಾಯಸಮ್ಮತತೆಗೆ ಹಾನಿ ಮಾಡಬಹುದು. ಒಂದು ವೇಳೆ ಹಿಂದುಳಿದ ಪ್ರಾದೇಶಿಕ ಪಕ್ಷಗಳು ಮತ್ತು ಇತರ ಬಹುಜನ ಸಾಮಾಜಿಕ ಗುಂಪುಗಳು ಪ್ರತಿಕ್ರಿಯೆ ನೀಡಿದಲ್ಲಿ ಭಾರತೀಯ ನ್ಯಾಯಾಂಗವು ತೀವ್ರ ಅಸಮಾಧಾನಕ್ಕೆ ಗುರಿಯಾಗಲಿದೆ.  

ಜಾತಿ ಗಣತಿಗೆ ಮತ್ತು ಮೀಸಲಾತಿಗಿರುವ 50 ಪರ್ಸೆಂಟ್ ಮಿತಿಯನ್ನು ತೆಗೆದುಹಾಕುವ ಬೇಡಿಕೆಯು ಸಮಾಜದ ಒಪ್ಪಿಗೆ ಪಡೆದುಕೊಂಡಂತೆ, ಕೋಟಾಗಳ ಮೇಲಿನ ಇಂದ್ರ ಸಾಹ್ನಿ ತೀರ್ಪಿನ ಒಮ್ಮತವು ಬಹುತೇಕ ನಾಶವಾಗುತ್ತದೆ ಹಾಗೂ ಸಾಂವಿಧಾನಿಕ ಅಂಗವೊಂದು ನ್ಯಾಯಯುತ ಮತ್ತು ಬುದ್ಧಿವಂತಿಕೆ ಪ್ರದರ್ಶಿಸುವವರೆಗೆ ಹೆಚ್ಚಿನ ಸಂಘರ್ಷ ನಡೆಯುತ್ತಿರುತ್ತದೆ.

ಈ ಹೊತ್ತಿನಲ್ಲಿ ಸಾಂವಿಧಾನಿಕ ರಾಜನೀತಿಯೊಂದಿಗೆ, ಸುಧಾರಿತ ಕೋಟಾ ನೀತಿಗಳನ್ನು ಪರಿಚಯಿಸುವುದರ ವಿರುದ್ಧ ಮೇಲ್ವರ್ಗಗಳ ತೀವ್ರ ಅಸಮಾಧಾನ, ಭಿನ್ನಮತದ ಸಮಯದಲ್ಲಿ ಮೀಸಲಾತಿಯ ಮೂಲ ತತ್ವಗಳಿಗೆ ಜಾತ್ಯತೀತ ಮತ್ತು ತತ್ವಬದ್ಧ ತಳಹದಿ ಹಾಕಿದ ಸುಪ್ರೀಂ ಕೋರ್ಟ್‌ನ 9 ನ್ಯಾಯಾಧೀಶರನ್ನು ನಾವು ನೆನಪಿಸಿಕೊಳ್ಳಬೇಕು.

EWS ಮೆರಿಟ್‌

ಹಾಗೆಯೇ ಜಸ್ಟಿಸ್ ಸುಬ್ಬಾ ಅವರಿಂದ ಪ್ರಾರಂಭವಾಗುವ ಟಿ ದೇವದಾಸನ್ ಪ್ರಕರಣದ ರಾವ್ ಆದೇಶ (1964), ಎನ್ ಎಂ ಥಾಮಸ್(1976) ಪ್ರಕರಣದ ತೀರ್ಪು, ಇತ್ತೀಚಿನ ನಿರ್ಧಾರಗಳಾದ BK ಪವಿತ್ರ II (2019), ಸೌರವ್ ಯಾದವ್ (2020) ಮತ್ತು ನೀಲ್ ಆರೆಲಿಯೊ ನ್ಯೂನ್ಸ್ (2022) ಸಾಮಾಜಿಕ ನ್ಯಾಯದ ಕಾನೂನು ಕೌಶಲದ ಭಿನ್ನಮತೀಯ ತೀರ್ಪನ್ನೂ ನೆನಪಿಸಿಕೊಳ್ಳಬೇಕು.

ಸಾಮಾನ್ಯವಾಗಿ ನ್ಯಾಯಾಧೀಶರ ಪ್ರವೃತ್ತಿಗೆ ವಿರುದ್ಧವಾದ, ಈ ಸೂಕ್ಷ್ಮವಾದ ಒಮ್ಮತ, ಬಹುತೇಕ ಭಾರತೀಯ ಮೇಲ್ವರ್ಗದ ಅರೆ ಮನಸ್ಸಿನ, ಜಾತಿ ಅಸಮಾನತೆಗಳು ಮತ್ತು ತಾರತಮ್ಯವನ್ನು ಆಧರಿಸಿದೆ. ಮೇಲ್ಜಾತಿಯ ಸುತ್ತ ಈಗ ಆಗುತ್ತಿರುವ ರಾಜಕೀಯ ಬಲವರ್ಧನೆ, ಈ ಮನಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಈ ಗಣ್ಯರು ಈಗಿರುವ ರಕ್ಷಣೋಪಾಯಗಳನ್ನು ನಿರ್ಲಜ್ಜವಾಗಿ ಕಿತ್ತುಕೊಳ್ಳುತ್ತಿದ್ದಾರೆ. ಹಿಂದೂ ಮೇಲ್ಜಾತಿಯ ಬಲಿಷ್ಠರು ಬಹಳ ಹಿಂದಿನಿಂದಲೂ ಮೀಸಲಾತಿ ವ್ಯವಸ್ಥೆಯಿಂದ ಗಾಯ ಮತ್ತು ನೋವು ತಿಂದೆವೆಂಬ ವಿಚಿತ್ರವಾದ ಐತಿಹಾಸಿಕ ಪ್ರಜ್ಞೆಯಿಂದ ಬಳಲಿದ್ದಾರೆ.

ಇದನ್ನು ಓದಿದ್ದೀರಾ? EWS ತೀರ್ಪಿನ ಅರ್ಥ, ಮೆರಿಟ್ 'ಅವರ' ಮಕ್ಕಳ ಭವಿಷ್ಯಕ್ಕಾಗಿ ಮಾತ್ರ ಮುಖ್ಯ, ನಮ್ಮ 'ಮಕ್ಕಳ’ ಬಗ್ಗೆ ಅಲ್ಲ ಎಂದೇ ?

ಇತ್ತೀಚಿನ ತೀರ್ಪು, ಸವಲತ್ತುಳ್ಳ ವರ್ಗದ ಸಾಮಾಜಿಕ ದೃಷ್ಟಿಕೋನದಲ್ಲಿನ ಈ ಬದಲಾವಣೆಯನ್ನು ಕಾನೂನುಬದ್ಧ ಸಿದ್ಧಾಂತವಾಗಿ ಪರಿವರ್ತಿಸುತ್ತದೆ. ಅನುಕೂಲ ವರ್ಗದ ಈ ಮೀಸಲಾತಿಯು ದೂರಗಾಮಿ ಪರಿಣಾಮಗಳನ್ನುಂಟು ಮಾಡಬಹುದು. ಕೊಲಿಜಿಯಂ ವ್ಯವಸ್ಥೆಯನ್ನು ಕೊನೆಗೊಳಿಸಲು ಮತ್ತು ನ್ಯಾಯಾಂಗವನ್ನು ಹೆಚ್ಚು ಪ್ರಾತಿನಿಧ್ಯ ಪೂರ್ವಕ ಮಾಡುವ ಬೇಡಿಕೆ ಬಲ ಪಡೆದಂತೆ, ಇದು ನ್ಯಾಯಸಮ್ಮತತೆಯ ಬಿಕ್ಕಟ್ಟೊಂದನ್ನು ಹುಟ್ಟುಹಾಕಬಹುದು.

ಸಾಂವಿಧಾನಿಕ ಪೀಠದ ಸದಸ್ಯರ ಉಪನಾಮಗಳು ಮತ್ತು ಸೈದ್ಧಾಂತಿಕ ಒಲವುಗಳು, ಸಾರ್ವಜನಿಕ ಚರ್ಚೆಯ ವಿಷಯವಾದಲ್ಲಿ ಮತ್ತು ಅನುಚಿತ ಟೀಕೆಗಳಿಗೆ ಗುರಿಯಾದಲ್ಲಿ ಅದಕ್ಕೆ ನ್ಯಾಯಾಲಯವೇ ಜವಾಬ್ದಾರಿಯಾಗಿರುತ್ತದೆ. ಹೊಸದಾಗಿ ನೇಮಕಗೊಂಡ ಮುಖ್ಯ ನ್ಯಾಯಮೂರ್ತಿಗಳು ಶಾಂತಿ ಮತ್ತು ಸ್ಥಿರ ಸಾಮಾಜಿಕ ರಚನೆ ಸೃಷ್ಟಿಸುವ ಗುರಿ ಹೊಂದಿರುವ ನ್ಯಾಯಾಂಗದ ‘ಪ್ರತಿಪಾದಿತ’ ಬದ್ಧತೆಯನ್ನು ಕಾರ್ಯಗತಗೊಳಿಸಲಿ ಎಂದು ನಾವು ಆಶಿಸಬಹುದು.

ಅನುವಾದ | ರಂಜಿತಾ ಜಿ ಹೆಚ್‌
ನಿಮಗೆ ಏನು ಅನ್ನಿಸ್ತು?
1 ವೋಟ್
eedina app