ಪಾದ್ರಿ ಮೊಳಗಿಸಿದ ಎಚ್ಚರಿಕೆಯ ಗಂಟೆ; ಇದು ಹೆಚ್ಚೂ ಕಡಿಮೆ ನಮ್ಮದೇ ದೇಶದ ಕತೆ

white conservative

ದೇವನೂರರ ಪುಸ್ತಕದ ಕುರಿತು ಎಲ್ಲೆಡೆ ಚರ್ಚೆ ಆಗುತ್ತಿರುವ ಈ ಸಮಯದಲ್ಲಿ, ಗೆಳತಿಯೊಬ್ಬಳು ಅಮೆರಿಕದ ಪಾದ್ರಿಯೊಬ್ಬರು ತನ್ನ ಅನುಯಾಯಿಗಳಿಗೆ ತಿಂಗಳ ಹಿಂದೆ ಬರೆದ ಪತ್ರವನ್ನು ನೆನಪಿಸಿದಳು. ಓದುತ್ತಾ ನನಗೆ ಅವರು ಎದುರು ಹಾಕಿಕೊಂಡ ಧಾರ್ಮಿಕ ವ್ಯವಸ್ಥೆಯ ಹೆಸರು ಅದಲು ಬದಲಾದರೆ ಇದು ಹೆಚ್ಚು ಕಡಿಮೆ ನಮ್ಮದೇ ದೇಶದ ಕಥೆ  ಎನಿಸಿತು.

ಧರ್ಮಾಂಧತೆಯು ಸದ್ಯಕ್ಕೆ ಜಗತ್ತನ್ನು ಬಾಧಿಸುತ್ತಿರುವ ಸಂಗತಿ. ಅಮೆರಿಕ ಕೂಡ ಇದರಿಂದ ಸದ್ಯಕ್ಕೆ ಬಹು ಆಳವಾಗಿ ಗಾಯಗೊಂಡಿದೆ, ಮಹತ್ವದ್ದು ಏನೋ ಕಳೆದುಕೊಳ್ಳುವ ಭಯದಲ್ಲಿದೆ. ಭಾರತವು ಸದ್ಯಕ್ಕೆ ಅದಕ್ಕಿಂತ ಹೆಚ್ಚು ಹೀನಾಯ ಸ್ಥಿತಿಯಲ್ಲಿ ಇದ್ದರೂ ಜನರು ಇನ್ನೂ ಅದನ್ನು ನಿರಾಕರಿಸುತ್ತ ಮುಂದುವರಿದಿದ್ದಾರೆ.

Eedina App

ದೇವನೂರರ ಪುಸ್ತಕದ ಕುರಿತು ಎಲ್ಲೆಡೆ ಚರ್ಚೆ ಆಗುತ್ತಿರುವ ಈ ಸಮಯದಲ್ಲಿ, ಗೆಳತಿಯೊಬ್ಬಳು ಒಂದು ತಿಂಗಳ ಹಿಂದೆ ಅಮೆರಿಕದ ಪಾದ್ರಿಯೊಬ್ಬರು ತನ್ನ ಅನುಯಾಯಿಗಳಿಗೆ ಬರೆದ ಪತ್ರವನ್ನು ನೆನಪಿಸಿದಳು. ಓದುತ್ತಾ ನನಗೆ 'ಅರೇ, ವ್ಯಕ್ತಿ  ಮತ್ತು ತಮ್ಮ ಪ್ರಭಾವಿ ಬರವಣಿಗೆಯ ಮೂಲಕ  ಅವರು ಎದುರು ಹಾಕಿಕೊಂಡ ಧಾರ್ಮಿಕ ವ್ಯವಸ್ಥೆಯ ಹೆಸರು ಅದಲು ಬದಲಾದರೆ ಇದು ಹೆಚ್ಚು ಕಡಿಮೆ ನಮ್ಮದೇ ದೇಶದ ಕಥೆ ' ಎನಿಸಿತು. ಒಂದು ವರ್ಷದ ಹಿಂದೆ ಮರಣಿಸಿದ ಸ್ಟಾನ್ ಸ್ವಾಮಿ ಕೂಡ ಕಣ್ಣ ಮುಂದೆ ಸುಳಿದರು.

ಜಾನ್ ಪಾವ್ಲೋವಿಟ್ಜ್  ಅವರು ಇವಾಂಜೆಲಿಕಲ್ ಧಾರ್ಮಿಕ  ಪ್ರಪಂಚದಿಂದ ಬಂದವರು ಮತ್ತು  ಅಲ್ಲಿ ಏನಾಗುತ್ತಿದೆ ಎಂದು ನಿಖರವಾಗಿ ತಿಳಿದಿದ್ದಾರೆ. ತಡಮಾಡದೇ ಅದರ ಅನುವಾದವನ್ನು ನಿಮ್ಮ ಮುಂದಿಡುತ್ತೇನೆ ಹಾಗೂ ಕೊನೆಯ ಎರಡು ಎಚ್ಚರಿಕೆಯ ಸಾಲುಗಳು ನಿಮ್ಮ ಎದೆಯನ್ನು ತಲುಪಲಿ ಎಂದು ಆಶಿಸುತ್ತೇನೆ.

AV Eye Hospital ad

ʼನಾನು ಎರಡು ದಶಕಗಳಿಂದ ಚರ್ಚ್‌ನಲ್ಲಿ ಪಾದ್ರಿಯಾಗಿದ್ದೇನೆ. ಅಮೆರಿಕದ ದಕ್ಷಿಣದಲ್ಲಿರುವ ಬಿಳಿಯ ಚರ್ಚುಗಳಲ್ಲಿ ಹೆಚ್ಚು ಕೆಲಸ ಮಾಡಿದ್ದೇನೆ. ಚರ್ಚ್ ಸಿಬ್ಬಂದಿ ಸಭೆಗಳು, ಪುರುಷರ ಬೈಬಲ್ ಅಧ್ಯಯನಗಳು ಮತ್ತು ಯುವ ಪಾದ್ರಿ ಸಮ್ಮೇಳನಗಳಲ್ಲಿ ಲೆಕ್ಕವಿಲ್ಲದಷ್ಟು ಗಂಟೆಗಳ ಕಾಲ ಕಳೆದಿದ್ದೇನೆ. ಆ ಚರ್ಚ್‌ಗಳಲ್ಲಿನ ಇನ್ನೂ ಸಾವಿರಾರು ಜನರೊಂದಿಗೆ ನಾನು ಸಾಮಾಜಿಕ ಮಾಧ್ಯಮದಲ್ಲಿ ಸಂಪರ್ಕದಲ್ಲಿರುತ್ತೇನೆ. ಅವರು ಏನು ಮಾಹಿತಿ ಹಂಚಿಕೊಳ್ಳುತ್ತಾರೆ, ಬರೆಯುತ್ತಾರೆ ಮತ್ತು ಹೇಗೆ ಹೆಚ್ಚು ಜನರನ್ನು ತಲುಪುತ್ತಾರೆ ಎಂಬುದನ್ನು ನಾನು ಗಮನಿಸಿದ್ದೇನೆ. ಅವರು ಹೇಗೆ ಯೋಚಿಸುತ್ತಾರೆ ಮತ್ತು  ಏನು ನಂಬುತ್ತಾರೆ ಎಂದು ನನಗೆ ತಿಳಿದಿದೆ.

ನೀವು ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಾದ ವಿಷಯವೊಂದಿದೆ ಮತ್ತು ನಾನು ಅದನ್ನು ಯಾವುದೇ ಅತಿಶಯೋಕ್ತಿಯಿಲ್ಲದೆ ಹೇಳುತ್ತೇನೆ: ಬಿಳಿ ಇವಾಂಜೆಲಿಕಲ್‌ಗಳನ್ನು ಈಗ ತಡೆಯಬೇಕಾಗಿದೆ.
2022ರ ಮಧ್ಯಂತರ ಚುನಾವಣೆಗಳು ರಿಪಬ್ಲಿಕನ್ನರು ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಲು ಅವಕಾಶ ಮಾಡಿಕೊಟ್ಟರೆ, ಮೂಲಭೂತವಾದಿ ಕ್ರಿಶ್ಚಿಯನ್ನರು ಈ ರಾಷ್ಟ್ರವನ್ನು ನಾಶಪಡಿಸುತ್ತಾರೆ,  ಹಾಗಾದರೆ LGBTQ ಜನರು, ಮುಸ್ಲಿಮರು, ಮಹಿಳೆಯರು, ಇತರೆ ವರ್ಣಗಳಿಗೆ ಸೇರಿದ ಜನರು ಮತ್ತು ಕ್ರಿಶ್ಚಿಯನ್ನರಲ್ಲದವರು ಮತ್ತೆ ಕಾನೂನಿನ ಅಡಿಯಲ್ಲಿ ಸಮಾನತೆಯನ್ನು ಹೊಂದಿರುವುದಿಲ್ಲ. ನಾವೆಲ್ಲರೂ ಅವರ ಕರುಣೆಯಲ್ಲಿರುತ್ತೇವೆ.

ಇದು, ಆಕಾಶ ಬೀಳುತ್ತಿದೆ ಎನ್ನುವ ಥರದ ನಾಟಕೀಯ ಎಚ್ಚರಿಕೆಯ ಗಂಟೆ ಅಲ್ಲ. ಇದು ಈ ಜನರನ್ನು ಎಲ್ಲರಿಗಿಂತ ಚೆನ್ನಾಗಿ ತಿಳಿದಿರುವ ವ್ಯಕ್ತಿಯಿಂದ ಸ್ಪಷ್ಟ ಮತ್ತು ಸಮಚಿತ್ತದ ಮುನ್ಸೂಚನೆ.

ಕಳೆದ ಒಂದೂವರೆ ದಶಕದಲ್ಲಿ, ನನ್ನ ಧರ್ಮಶಾಸ್ತ್ರವು ಸೌಮ್ಯವಾದಂತೆ ಮತ್ತು ನನ್ನ ನಂಬಿಕೆಗಳು ಹೆಚ್ಚು ಹೆಚ್ಚು ಪ್ರಗತಿಪರವಾಗಿ ಬೆಳೆಯುತ್ತಿದ್ದಂತೆ, ನಾನು ಉಗ್ರ ಧಾರ್ಮಿಕತೆಯು  ಹೆಚ್ಚುತ್ತಿರುವ ಪರಿಸರದಲ್ಲಿರುವ  ಒಂದು ರೀತಿಯ ರಹಸ್ಯವಾದ ಲಿಬರಲ್ ಆಗಿದ್ದೇನೆ. ಒಮ್ಮೆ ಸಣ್ಣ ಮಟ್ಟದ ಗಲಭೆ ಕೋರರ ಗುಂಪಾಗಿ ಉಳಿಯುವಷ್ಟು ನಿಶ್ಯಕ್ತವಾಗಿದ್ದ ಈ ಜನರು ಈಗ ರೋಮನ್ ಸಾಮ್ರಾಜ್ಯದ ಮಟ್ಟದ ಶಕ್ತಿ ಪಡೆದಿದ್ದಾರೆ.

ಸಂಪೂರ್ಣ ಪ್ರಾಬಲ್ಯಕ್ಕೇ ಅವರು ಎರಡು ವರ್ಷಗಳಿಗಿಂತಲೂ ಕಡಿಮೆ ದೂರದಲ್ಲಿದ್ದಾರೆ. ಅನಂತರ ಅಹಿಂಸೆಯ ಖಾತ್ರಿ ಇಲ್ಲ, ಮತ್ತು ಈ ಪ್ರಾಬಲ್ಯವನ್ನು ಅವರು ಬಿಟ್ಟುಕೊಡುವುದೂ ಇಲ್ಲ.

ನಾನು ಆ ವ್ಯವಸ್ಥೆಯ ಒಳಗಿದ್ದು ಕೊಂಡು ಎಲ್ಲವೂ ಅಲೆಯಾಗಿ ತೆರೆದುಕೊಳ್ಳುವುದನ್ನು ನೋಡಿದೆ: ಒಬಾಮಾ ಚುನಾಯಿತರಾದಾಗ ನಾನು ಉತ್ತರ ಕೆರೊಲಿನಾ ಮೆಗಾಚರ್ಚ್‌ನಲ್ಲಿದ್ದೆ ಮತ್ತು ಬದಲಾವಣೆಯು ನೇರ ವೀಕ್ಷಕನಾದೆ, ಭಯವು ನಿಧಾನವಾಗಿ ಉಲ್ಬಣಗೊಳ್ಳುವುದನ್ನು ನೋಡಿದೆ, ಅಜೆಂಡಾ ಗಟ್ಟಿಯಾಗುವುದನ್ನು,  ಪೂರ್ವಾಗ್ರಹಗಳನ್ನು ಬಿತ್ತುವುದನ್ನು ಮೂಕ ಪ್ರೇಕ್ಷಕನಾಗಿ ನೋಡಿದೆ.

Fox news america

ಫಾಕ್ಸ್ ನ್ಯೂಸ್ ವರದಿಗಾರರು ಮತ್ತು ಸಾರಾ ಪಾಲಿನ್ ಅವರಂತಹ ರಿಪಬ್ಲಿಕನ್‌ಗಳು, ಹೆಚ್ಚು ಹೆಚ್ಚು ಸಭಾಂಗಣಗಳಲ್ಲಿ ಕಾಣಿಸಲು ಪ್ರಾರಂಭಿಸಿದ ಸಮಯದಲ್ಲಿ ನಾನು ಬಿಲ್ಲಿ ಗ್ರಹಾಂ ಪ್ರಧಾನ ಕಚೇರಿಯಲ್ಲಿ ನಿಯಮಿತವಾಗಿ ಮಾತನಾಡುತ್ತಿದ್ದೆ. ಪಾದ್ರಿಗಳ ಸಮ್ಮೇಳನಗಳಲ್ಲಿನ ಸಂದೇಶಗಳು ಹೆಚ್ಚು ಬೆಂಕಿಯಿಡುವ  ತುರ್ತಿನಲ್ಲಿರುವುದನ್ನು ನೋಡಿದೆ ಮತ್ತು ಸರ್ವಾಧಿಕಾರದ ನಾಯಿಗಳು ಜೋರಾಗಿ, ಗಟ್ಟಿಯಾಗಿ, ಪದೇ ಪದೇ ಊಳಿಡುವುದನ್ನು ಕೇಳಿದೆ.

ಈ ರಾಷ್ಟ್ರದ ಅನೇಕ ಸಭ್ಯ ಜನರು ಕಪ್ಪು ಅಧ್ಯಕ್ಷರ ಪ್ರಗತಿಯನ್ನು, ನಾಗರಿಕ ಮತ್ತು ಮಾನವ ಹಕ್ಕುಗಳ ವಿಜಯಗಳನ್ನು ಆಚರಿಸಿದರು ಮತ್ತು ಕ್ರಮೇಣ ಭರವಸೆಯಿಂದ ಎನ್ನುವಂತೆ, ನಾಗರಿಕ ಹಕ್ಕುಗಳ ಕಾವಲು ಕೆಲಸವನ್ನು  ಕಡಿತಗೊಳಿಸಿದರು-ಆದರೆ ಬಿಳಿ ಕನ್ಸರ್ವೇಟಿವ್(ಸಂಪ್ರದಾಯವಾದಿ) ಚರ್ಚ್‌ಗಳು ಎಚ್ಚರಿಕೆಯ ಗಂಟೆ ಮೊಳಗಿಸಿ ಪವಿತ್ರ ಯುದ್ಧಕ್ಕೆ ಸಿದ್ಧವಾದವು.

ಆದರೂ, 2016ರವರೆಗೆ ಈ ಗುಂಪು  ಶಕ್ತಿಹೀನವಾಗಿ, ಸಾಯುತ್ತಿರುವ ದೈತ್ಯ ಡೈನೋಸಾರ್‌ನಂತೆ ಇತ್ತು. ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡದ್ದೇ, ಇವಾಂಜೆಲಿಕಲ್‌ಗಳಿಗೆ ಪರಿಪೂರ್ಣ ಅನೈತಿಕ ಪಾಲುದಾರನಾಗಿ ದೊಡ್ಡಮಟ್ಟದ ಬೆದರಿಕೆಯ ವೇದಿಕೆ ಸಿದ್ಧಪಡಿಸಲು ನೆರವಾದರು. ಒಗ್ಗಟ್ಟಿಲ್ಲದ ಎಡಪಕ್ಷಗಳು, ಹೆಚ್ಚಿನ ಜನಸಂಖ್ಯೆಯಲ್ಲಿ ಆಡಳಿತ ಬಗ್ಗೆ ಇದ್ದ ಆಯಾಸ, ಅಮೆರಿಕನ್ ಕಾಂಗ್ರೆಸ್‌ನಲ್ಲಿ ವಿಧ್ಯುಕ್ತ ವಿಜಯ (ಇದಕ್ಕೆ ಕಾರಣರಾದ ಜೋ ಮಂಚಿನ್ ಮತ್ತು ಕ್ರಿಸ್ಟನ್ ಸಿನಿಮಾಗೆ ಧನ್ಯವಾದಗಳು) ಮತ್ತು ಮತದಾರರ ಹಕ್ಕುಗಳ ಮೇಲೆ ರಿಪಬ್ಲಿಕನ್ ದಾಳಿಗಳು... ಇವುಗಳೆಲ್ಲದರ ಕಾರಣದಿಂದ ನಾವು ಈವರೆಗೆ ಸಾಧಿಸಿದ ವೈವಿಧ್ಯಮಯ ಮಾನವೀಯತೆಯನ್ನು ಕಳೆದುಕೊಳ್ಳುವ ಅಪಾಯಕ್ಕೆ ಕೂದಲೆಳೆ ಅಂತರದಲ್ಲಿದ್ದೇವೆ.

ಅವರು ಬಳಸುವ ಆಲಂಕಾರಿಕ ಭಕ್ತಿಯ ಪದಗಳ ಹೊರತಾಗಿಯೂ ಇವರು ಯೇಸುವಿನ ಅನುಯಾಯಿಗಳಲ್ಲ. ಅವರು ಬಹುಶಃ ಯೇಸುವೇ ಒಪ್ಪದ ತೀವ್ರವಾದಿಗಳು: ಅಧಿಕಾರಕ್ಕಾಗಿ  ಕುರುಡು ಉತ್ಸಾಹಿಗಳು, ವೈವಿಧ್ಯತೆಯನ್ನು ಇವರು ಬೆದರಿಕೆಯಾಗಿ ನೋಡುತ್ತಾರೆ. ಪ್ರಗತಿ/ಅಭಿವೃದ್ಧಿಯನ್ನು ಅಮೆರಿಕದ ಮೇಲಿನ ದಾಳಿ ಎಂದು ಭಾವಿಸುತ್ತಾರೆ ಮತ್ತು ಇತರೆ ಜನರನ್ನು ಘನತೆಯಿಂದ ನಡೆಸಿಕೊಳ್ಳುವುದು ಇವರಿಗೆ ಬಿಳಿ ಜನರ ಮೇಲೆ ದಬ್ಬಾಳಿಕೆ ಎನಿಸುತ್ತದೆ.

ದಶಕಗಳಿಂದ, ಕಲುಷಿತಗೊಂಡ ಧರ್ಮ ಶಾಸ್ತ್ರ ಮತ್ತು ಫಾಕ್ಸ್‌ನ್ಯೂಸ್‌ನಂತಹ ಪರ್ಯಾಯ ಮೂಲಗಳ ಸುದ್ದಿಗಳನ್ನು ಉಣ ಬಡಿಸಿ ಈ ರೀತಿ ಯೋಚಿಸಲು /ವ್ಯಾಖ್ಯಾನಿಸಲು ಅವರನ್ನು ತಯಾರು ಮಾಡಲಾಗಿದೆ. ನನ್ನನ್ನು ದಯವಿಟ್ಟು ನಂಬಿರಿ, ಇವಾಂಜೆಲಿಕಲ್‌ಗಳು ನಿರ್ಮಿಸುತ್ತೀವೆಂದು ಹೇಳುತ್ತಿರುವ ʼದೇವಪ್ರಭುತ್ವವುʼ ಸ್ಥಾಪಿತವಾದರೆ ನಂತರ ನಾವು ಚೇತರಿಸಿಕೊಳ್ಳುವುದಿಲ್ಲ .

ಸಾರಾ ಪಾಲಿನ್‌
ರಿಪಬ್ಲಿಕನ್‌ ಪಕ್ಷದ ನಾಯಕಿ, ಲೇಖಕಿ ಸಾರಾ ಪಾಲಿನ್‌

2022ರಲ್ಲಿ ನಾವು ವಿಫಲವಾದರೆ, ಅವರು ಪ್ರತಿ ಚುನಾವಣೆಯನ್ನು ಶೂನ್ಯ ಮತ್ತು ಅನೂರ್ಜಿತಗೊಳಿಸಬಲ್ಲ ರಾಜಕೀಯ ಶಕ್ತಿಯನ್ನು ಹೊಂದಿರುತ್ತಾರೆ ಮತ್ತು  ಜೀವಿತಾವಧಿಗೆ ನಾವು ನಮ್ಮ ಧ್ವನಿ ಕಳೆದು ಕೊಳ್ಳುತ್ತೇವೆ. ಮಹಿಳೆಯರು ತಮ್ಮ ದೇಹದ ಮೇಲೆ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಾರೆ. LGBTQ ಸಮುದಾಯದ ಜನರು ಮದುವೆಯಾಗುವ ಮತ್ತು ದತ್ತು ತೆಗೆದುಕೊಳ್ಳುವ ಹಕ್ಕುಗಳನ್ನು ಕಳೆದುಕೊಳ್ಳಬಹದು, ಇತರೆ ವರ್ಣಗಳ ಜನರು ಚುನಾವಣಾ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ಹೊರಗುಳಿಯುತ್ತಾರೆ. ವಲಸಿಗರಿಗೆ ಇಲ್ಲಿ ಅವಕಾಶ ಮತ್ತು ಆಶ್ರಯದ ಪ್ರವೇಶವನ್ನು ನಿರಾಕರಿಸಲಾಗುವುದು.

ಇವು ಸೃಜನಾತ್ಮಕ ಮುನ್ಸೂಚನೆಗಳಲ್ಲ. ಇವೇ ತಮ್ಮ ಉದ್ದೇಶಗಳೆಂದು ನಿಖರವಾಗಿ ಇವಾಂಜೆಲಿಕಲ್‌ಗಳು ಪದೇ ಪದೇ ಹೇಳಿದ್ದಾರೆ ಮತ್ತು ಅಧಿಕೃತ ಮುದ್ರೆಯೊಂದನ್ನು ಹೊಂದಲು ಅವರು ಹಿಂದೆಂದಿಗಿಂತಲೂ ಹತ್ತಿರವಾಗಿದ್ದಾರೆ. ಈಗಲೂ ನಾವು ಇದನ್ನು ನಿಲ್ಲಿಸಬಹುದು. ಅದಕ್ಕಾಗಿ ಅವರಿಗಿಂತ ಹೆಚ್ಚಿನ  ಏಕತೆ ಮತ್ತು ಸಮನ್ವಯವನ್ನು ಸಾಧಿಸುವ ಅಗತ್ಯವಿದೆ. ಅವರ ನಿರಂತರ ಆಕ್ರಮಣಗಳಿಗೆ ಪ್ರತಿಸ್ಪರ್ಧಿಯಾಗಿ, ಮಾನವೀಯತೆಯ ನಿರಂತರ, ಭಾವೋದ್ರಿಕ್ತ, ಸಮರ್ಪಿತ ರಕ್ಷಣೆಯ ಅಗತ್ಯವಿದೆ.

ಇದೆಲ್ಲದರಿಂದ ನಾವು ಭಯಭೀತರಾಗಿದ್ದಾರೆಂದು ಅನೇಕ ಜನರು ಹೇಳುವುದನ್ನು ನಾನು ಕೇಳಿದ್ದೇನೆ. ನಾವು ಭಯಗ್ರಸ್ತರಾಗಿರುವುದು ಅವರಿಗೆ ಸಹಾಯ ಮಾಡುತ್ತದೆ. ಭಯಭೀತರಾಗಿ ಮತ್ತು ಕೋಪಗೊಳ್ಳಿರಿ. ಭಯಭೀತರಾಗಿ ಮತ್ತು ಕಾರ್ಯನಿರತರಾಗಿರಿ. ಭಯಭೀತರಾಗಿ ಕಾರ್ಯಪ್ರವೃತ್ತರಾಗಿ, ಭಯಭೀತರಾಗಿ ಹೋರಾಟ ಮಾಡಿ.

ರಿಪಬ್ಲಿಕನ್ ಕ್ರಿಶ್ಚಿಯನ್ನರು ಅಸಹಾಯಕ ಬಲಿಪಶುಗಳಂತೆ ವರ್ತಿಸುವ ಬದಲು, ಅಮೆರಿಕದ ಯೋಗ್ಯ ನಾಗರಿಕರು ತಾವು ಅವರಿಗಿಂತ ಬಹುಸಂಖ್ಯಾತರು ಎಂದು ನೆನಪಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ನಾವು ಅವರನ್ನು ಸೋಲಿಸಬಹುದು ಮತ್ತು ಅವರನ್ನು ಸೋಲಿಸುವ ಅಗತ್ಯವಿದೆ. ಅವರು ಎಷ್ಟು ಹಾನಿ ಮಾಡುತ್ತಿದ್ದಾರೆ ಎಂದು ನಾವು ದುಃಖಿಸುವುದನ್ನು ನಿಲ್ಲಿಸಬೇಕು ಮತ್ತು ಅವರನ್ನು ವಿರೋಧಿಸುವ ಕೆಲಸ ಪ್ರಾರಂಭಿಸಬೇಕು.

ಅಮೆರಿಕ ಒರೆಗಾನ್ ಲಿಬರಲ್ ಚರ್ಚ್ ನ ಸಂದೇಶಗಳು
ಅಮೆರಿಕ ಒರೆಗಾನ್ ಲಿಬರಲ್ ಚರ್ಚ್‌ನ ಸಂದೇಶಗಳು

ಇತಿಹಾಸದುದ್ದಕ್ಕೂ ನಾವು ಈ ನಾಟಕವನ್ನು ನೋಡಿದ್ದೇವೆ ಮತ್ತು ಅದು ಹೇಗೆ ಕೊನೆಗೊಳ್ಳುತ್ತದೆ ಎಂದು ನಮಗೆ ತಿಳಿದಿದೆ. ಅನಿಯಂತ್ರಿತ ಧಾರ್ಮಿಕ ಉಗ್ರವಾದವು ಏನು ಮಾಡಬಲ್ಲದು ಎಂದು ನಮಗೆ ತಿಳಿದಿದೆ, ಒಳ್ಳೆಯ ಜನರ ಮೌನ ಮತ್ತು ನಿಷ್ಕ್ರಿಯತೆಯ ಬೆಲೆ ನಮಗೆ ತಿಳಿದಿದೆ. ಬೈಬಲ್‌ನಲ್ಲಿ ಮುಚ್ಚಿ, ಧ್ವಜದಲ್ಲಿ ಸುತ್ತಿ ಕೊಟ್ಟ ಫ್ಯಾಸಿಸಂ ಮತ್ತು ಬಿಳಿಯರ ಪ್ರಾಬಲ್ಯವನ್ನು ಜನರು ಸ್ವೀಕರಿಸಲು ನಿರಾಕರಿಸಿದಾಗ, ಒಟ್ಟಿಗೆ ಅಂತರ್ಗತವಾಗಿ ಒಳ್ಳೆಯದಕ್ಕಾಗಿ ಹೋರಾಡಿದಾಗ ಜನರ ಸಾಮರ್ಥ್ಯದ ಬಗ್ಗೆ ನಮಗೆ ಅರಿವಾಗಿದೆ.

ಇದನ್ನು ಓದಿದ್ದೀರಾ? ಬಿಹಾರ| ಪ್ರಧಾನಿ ಹತ್ಯೆಗೆ ಸಂಚು, ಮಾಜಿ ಪೊಲೀಸ್‌ ಅಧಿಕಾರಿ ಸೇರಿದಂತೆ ಇಬ್ಬರು ಶಂಕಿತ ಉಗ್ರರ ಬಂಧನ

ಈ ಕ್ರೈಸ್ತರು ತಮ್ಮ ನಂಬಿಕೆಯ ಸಂಪ್ರದಾಯದ ದಾರಿಯನ್ನು ಎಷ್ಟು ಕಳೆದುಕೊಂಡಿದ್ದಾರೆಂದು ತಿಳಿದಿರುವ ವ್ಯಕ್ತಿಯಾಗಿ, ಈ ರಾಷ್ಟ್ರವನ್ನು ಮುನ್ನಡೆಸಲು ಅವರಿಗೆ ಅನುಮತಿ ನೀಡಬಾರದು ಎಂದು ನಾನು ನಿಮಗೆ ಹೇಳಿದಾಗ ನನ್ನನ್ನು ದಯವಿಟ್ಟು ನಂಬಿರಿ. ಈ ದೇಶವನ್ನು ತನ್ನ ಮನೆ ಎಂದು ಕರೆಯುವ ಅಥವಾ ಒಂದು ದಿನ  ಕರೆಯಬಯಸುವ  ಜನರಿಗೆ ಇದು ಅವರು ಬಯಸಿದ ನಾಡಾಗದೇ ಉಳಿಯಬಹುದು.

ಪ್ರೀತಿ, ಸಮಾನತೆ ಮತ್ತು ವೈವಿಧ್ಯತೆ ಸಮತೋಲನದಲ್ಲಿದೆ. ನಾವು ಆಯ್ಕೆ ಮಾಡುವ ಸಮಯ ಇದು. ಇದು ನಾವು ಪಡೆಯುವ ಕೊನೆಯ ಆಯ್ಕೆಯಾಗಿರಬಹುದು.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app