ತೀಸ್ತಾ ಬಂಧನ: ಈಗ ಭಾರತದಲ್ಲಿ ಪ್ರಜಾಸತ್ತೆಯು ನಳನಳಿಸುತ್ತಿದೆಯೇ?

teesta

ನಮ್ಮ  ಪ್ರಧಾನಮಂತ್ರಿ ಇದೇ 25ರಂದು ಜರ್ಮನ್‍ಗೆ ಹೋಗಿ ಅಲ್ಲಿ ʼಇಂದಿರಾಗಾಂಧಿಯವರು ಭಾರತದಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಿ, ಪ್ರಜಾಸತ್ತೆಯನ್ನು ಸಾಯಿಸಿದ್ದರು. ಆದರೆ ಈಗ  ಭಾರತದಲ್ಲಿ ಪ್ರಜಾಸತ್ತೆಯು ನಳನಳಿಸುತ್ತಿದೆʼ ಎಂದು ಹೇಳುತ್ತಿರುವಾಗಲೇ ಭಾರತದ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತ್ ಸೆಟಲ್ವಾಡ್‍ರನ್ನು  ಬಂಧಿಸಲಾಗುತ್ತದೆ.

ಸತ್ಯ ಬಿಚ್ಚಿಡಲು ಎಂಟೆದೆಯ ಛಾತಿ
ಅನ್ಯಾಯದ ವಿರುದ್ಧ ನ್ಯಾಯದ ಹೋರಾಟ
ಕೋಮುವಾದಿ ಬೆಂಕಿ ಆರಿಸುವ
ಸಂವಿಧಾನದ ಕಾಲಾಳುವೇ  

ಅಗ್ನಿಜ್ವಾಲೆಗಳು ದೇಶ ವ್ಯಾಪಿಸಿ,
ರಾಜಿಯಿಲ್ಲದ ಪುಟ್ಟ ಹಕ್ಕಿಯೇ
ಪುಕ್ಕ ತೊಯಿಸಿ ಬೆಂಕಿ ನಂದಿಸುವಾಸೆ
ಸಂವಿಧಾನದ ಪುಟ್ಟ ಕಾಲಾಳುವೆ

ಧ್ಯಾನಸ್ಥ ಗುಬ್ಬಿಯ ಹೋರಾಟ
ಅನುದಿನವೂ ಹನಿ ಹನಿ ನೀರಾಟ
ರಾಜಿಯಿಲ್ಲದೇ ಹೋರಾಟ ಮಾಡಿದೆ
ನ್ಯಾಯಪಥದ ಪಯಣಿಗ ಗುಬ್ಬಿಯೇ

ನಿನ್ನ ಬಂಧಿಸಲು ಸರಪಳಿ ಸಿಕ್ಕದು
ದಿಟ್ಟ ನ್ಯಾಯದ ಹೋರಾಟದಲ್ಲಿ
ಸತ್ಯಕ್ಕೆ ಯಾವತ್ತೂ ಗೆಲುವು ಕಟ್ಟಿಟ್ಟದ್ದು
ಸುಳ್ಳಿಗೆ ಇಂದಲ್ಲ ನಾಳೆ ಸೋಲು ಸೋಲು ಸೋಲು...

ಗುಜರಾತ್ ದಂಗೆಗಳಲ್ಲಿ ನೊಂದ ಸಂತ್ರಸ್ತರ ಪರವಾಗಿ ನಿಂತು ಅವರ ಹೋರಾಟದ ಕಿಡಿ ಆರದಂತೆ ನೋಡಿಕೊಂಡು ಸಂತ್ರಸ್ತರ ಸಂಗಾತಿಯಾಗಿ ನಿಂತವರು ತೀಸ್ತಾ ಸೆಟಲ್ವಾಡ್. ವಿಶ್ವಸಂಸ್ಥೆಯ ಅಧಿಕಾರಿಯವರು ಸರ್ಕಾರದ ಕ್ರಮವನ್ನು ಖಂಡಿಸಿ 'ಮಾನವ ಹಕ್ಕುಗಳನ್ನು ರಕ್ಷಿಸುವುದು ಅಪರಾಧವಲ್ಲ' ಎಂದು ಹೇಳಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಕ್ಷಕ ವಿಶೇಷ ವರದಿಗಾರ್ತಿ ಮೇರಿ ಲಾಲರ್, ತೀಸ್ತಾ ಅವರ ಬಂಧನದ ಕುರಿತು ಕಳವಳ ವ್ಯಕ್ತಪಡಿಸುತ್ತಾ 'ತೀಸ್ತಾ ದ್ವೇಷ ಮತ್ತು ತಾರತಮ್ಯದ ವಿರುದ್ಧ ಬಲವಾದ ಧ್ವನಿಯಾಗಿದ್ದಾರೆ' ಎಂದು ಹೇಳಿದ್ದಾರೆ. 'ನಿಮ್ಮಂತವರ ಸಂತತಿ ಹೆಚ್ಚಲಿ' ಎಂದು ರೋಮಿಲಾ ಥಾಪರ್ ಹಾರೈಸಿದ್ದಾರೆ.

ಗುಜರಾತ್ ದಂಗೆ ಪ್ರಕರಣ 2002ರ ಬಗ್ಗೆ ಕೋರ್ಟಿನಲ್ಲಿ ಕೇಸ್ ಹೂಡಿದ್ದ ಪ್ರಕರಣದಲ್ಲಿ ಬೇರೆಯವರ ಪ್ರಚೋದನೆಯನ್ನು ಖಂಡಿಸಿ ಇದೇ 24 ರಂದು ಕೋರ್ಟು ತೀರ್ಮಾನ ನೀಡಿತು. ಗುಜರಾತ್‌ನ ಪೊಲೀಸರು, ಭಯೋತ್ಪಾದನಾ ನಿಗ್ರಹ ದಳವು ತೀಸ್ತಾ ಅವರನ್ನು ಇದೇ 25 ರಂದು ವಶಕ್ಕೆ ಪಡೆಯಿತು. ಗಲಭೆ ಪ್ರಕರಣದಲ್ಲಿ ಕೆಲ ದಿನಗಳ ಹಿಂದೆಯೇ ಕೋರ್ಟು ಮೋದಿಗೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಝಾಕಿಯಾ ಜಾಫ್ರಿಯವರು ಸಲ್ಲಿಸಿದ ಮನವಿಯನ್ನು ʼಅರ್ಹತೆ ಇಲ್ಲʼ ಎಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಗುಜರಾತ್‌ ಪೊಲೀಸರು ತೀಸ್ತಾ ಅವರನ್ನು ಬಂಧಿಸಿದ್ದಾರೆ.

ಭಾರತದ ಆಳುವ ಸರ್ಕಾರ ಒಂದು ಕಡೆದ ನಾಗರಿಕ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಪರ ಮಾತನಾಡುತ್ತಲೇ ಯಾವ ರೀತಿ ಸತ್ಯವನ್ನು ಮರೆಮಾಚಲು ಯತ್ನಿಸುತ್ತಿದೆ ಮತ್ತು ಹತ್ತಿಕ್ಕುತ್ತಿದೆ ಎಂಬುದಕ್ಕೆ ಈ ಘಟನೆಯೇ ಉದಾಹರಣೆಯಾಗಿದೆ. ಜರ್ಮನಿಯಲ್ಲಿ ಪ್ರವಾಸದಲ್ಲಿರುವ ಭಾರತದ ಪ್ರಧಾನ ಮಂತ್ರಿ ಮೋದಿ ಒಂದು ಕಡೆಗೆ ʼನಾಗರಿಕ ಸಮಾಜದ ಸ್ವಾತಂತ್ರ್ಯ ಮತ್ತು ಸಮಾಜದ ವಿವಿಧತೆಗೆ ಕಾವಲಾಗಿರಲು ಹಾಗೂ ಆನ್ಲೈನ್, ಆಫ್ ಲೈನ್, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಕರೆ ನೀಡಿರುವ ಹೇಳಿಕೆಗೆ ಭಾರತವೂ ಜಿ7 ದೇಶಗಳು ಮತ್ತು ಇತರೆ ದೇಶಗಳೊಂದಿಗೆ ಸಹಿ ಹಾಕುತ್ತಲೇ ʼದಬ್ಬಾಳಿಕೆ ಮತ್ತು ಹಿಂಸಾಚಾರದ ವಿರುದ್ಧ ನಿಂತಿರುವ ಪ್ರಜಾಸತ್ತಾತ್ಮಕ ವ್ಯವಸ್ಥೆಗಳ ಎಲ್ಲ ಧೈರ್ಯಶಾಲಿ ರಕ್ಷಕರನ್ನು ನಾವು ಪ್ರಶಂಸಿಸುತ್ತೇವೆ ಮತ್ತು ಜಾಗತಿಕವಾಗಿ ಪ್ರಜಾಸತ್ತಾತ್ಮಕ ಸಮಾಜಗಳ ಸುಸ್ಥಿರತೆಯನ್ನು ಉತ್ತಮಗೊಳಿಸಲು ಅಂತರರಾಷ್ಟ್ರೀಯ ಸಹಕಾರವನ್ನು ನಾವು ಹೆಚ್ಚಿಸುತ್ತೇವೆʼ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

2002ರ ಗುಜರಾತ್ ದಂಗೆಗಳ ಬಗ್ಗೆ ಎಸ್‍ಐಟಿಯಿಂದ ಮೋದಿಗೆ ಕ್ಲೀನ್ ಚೀಟ್ ಸಿಕ್ಕಿದೆ. ಹಿಂದೆಯೇ ಅಮಿತ್ ಷಾ ಸಂದರ್ಶನದಲ್ಲಿ ಹೇಳುತ್ತಾರೆ. ತೀಸ್ತಾ ಸೆಟಲ್ವಾಡ್ ಎಂಭತ್ತೈದು ವರ್ಷದ ಝಕಿಯಾ ಜಾಫ್ರಿಯವರಿಗೆ ಮೋದಿಯ ವಿರುದ್ಧ ಉತ್ತೇಜಿಸಿದ್ದಾರೆಂದು ತೀಸ್ತಾ ಅವರನ್ನು ಬಂಧಿಸಲಾಗಿದೆ. ನರೇಂದ್ರ ಮೋದಿ ಮುಖ್ಯಮಂತ್ರಿ ಆಗಿದ್ದ ಗುಜರಾತಿನ ದಂಗೆಗಳಲ್ಲಿ ಸರಿಯಾದ ದಾಖಲೆಗಳಿಲ್ಲವೆಂದು ಮೋದಿಯನ್ನು ಕ್ಲೀನ್ ಚಿಟ್ ನೀಡಲಾಗಿದೆ.

ಸುಪ್ರೀಂನದು ನಾಚಿಕೆಗೆಟ್ಟ ನಿರ್ಧಾರ

ತೀಸ್ತಾ ಭಯೋತ್ಪಾದನೆಯ ಯಾವ ಕೆಲಸವನ್ನೂ ಮಾಡಿರಲಿಲ್ಲ. ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‍ರನ್ನು ಗುಜರಾತಿನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಭಯೋತ್ಪಾದನೆ ನಿಗ್ರಹ ದಳದವರು ಅಹಮದಾಬಾದ್‍ಗೆ ಕರೆದೊಯ್ದಿದ್ದಾರೆ. ಈಗ ಸುಪ್ರಿಂ ಕೋರ್ಟಿನ ಈ ತೀರ್ಮಾನವೂ ಅದರ ತೀರ್ಮಾನಗಳಲ್ಲಿಯೇ ಅತ್ಯಂತ ನಾಚಿಕೆಗೆಟ್ಟ, ತಲೆತಗ್ಗಿಸುವ ತೀರ್ಮಾನವಾಗಿದೆ. ಇದು ಪ್ರಜಾಸತ್ತೆಗೊಂದು ದೊಡ್ಡ ಕಳಂಕವಾಗಿದೆ. ಇಲ್ಲಿ ಅಪರಾಧಿಗಳು ಆಗಿನ ಗುಜರಾತಿನ ಮುಖ್ಯಮಂತ್ರಿ ಈಗ ಭಾರತದ ಪ್ರಧಾನ ಮಂತ್ರಿಯಾಗಿದ್ದಾರೆ. ಇಂದಿನ ಈ ವ್ಯವಸ್ಥೆಯಲ್ಲಿ ನ್ಯಾಯ ಸಿಗುವುದು ದುಸ್ತರವಾಗುತ್ತಿದೆ.

ʼಬೆಸ್ಟ್‌ ಬೇಕರಿʼ ಪ್ರಕರಣದಲ್ಲಿ ಬಿಲ್ಖಿಸ್ ಭಾನು ಮೇಲೆ ಸಾಮೂಹಿಕ ಬಲತ್ಕಾರ ಮಾಡುತ್ತಾರೆ. ದಿನಾಂಕ 2002ರ ಫೆಬ್ರುವರಿ 28ರಂದು ಗುಲ್ಬರ್ಗ ಸೊಸ್ಶೆಟಿಯಲ್ಲಿ ಕಾಂಗ್ರೆಸ್‌ನ ಸಂಸದರಾದ ಎಹೆಸಾನ್ ಜಾಫ್ರಿಯವರು ಬಹುದೊಡ್ಡ ಮುಸ್ಲಿಂ ನಾಯಕರು. ಸುಮಾರು 69 ಜನರು ಅವರ ಮನೆಯಲ್ಲಿ ಆಶ್ರಯ ಪಡೆದಿದ್ದರು. ʼಅವರನ್ನು ಬಿಟ್ಟು ಬಿಡಿ ನನಗೆ ಬೇಕಾದರೆ ಕೊಂದು ಬಿಡಿʼ ಎಂದು ಯೆಹ್ಸಾನ್ ಜಾಫ್ರಿಯವರು ನಿಂತಾಗ ಅವರನ್ನು ಅವರ ಪತ್ನಿ ಝಕಿಯಾ ಜಾಫ್ರಿಯವರ ಮುಂದೆಯೇ ಕೊಚ್ಚಿ ಕೊಚ್ಚಿ ಸಾಯಿಸಿದರು. ಮನೆಗೆ ಬೆಂಕಿ ಹಚ್ಚಲಾಗಿತ್ತು. ತನ್ನ  ಸಹಾಯಕ್ಕೆ ನಿಂತಿದ್ದ ತೀಸ್ತಾರವರಿಗೆ ಝಕಿಯಾ ಜಾಫ್ರಿಯವರು ʼನಿಮಗೆ ನನ್ನ ಸಲಾಂʼ ಎನ್ನುತ್ತಾರೆ. ಆಗ ವಾಜಪೇಯಿಯವರು ಸಹ ಬೇಸರದಿಂದ, ʼಜಾತಿ, ಮತ, ಧರ್ಮಗಳ ಭೇದವಿಲ್ಲದೆ ರಾಜಧರ್ಮವನ್ನು ಪಾಲಿಸಿʼ ಎಂದು ಮೋದಿಗೆ ಸೂಚ್ಯವಾಗಿ ಹೇಳಿದ್ದರು. ಗಲಭೆ, ದಂಗೆಗಳ ಸಮಯದಲ್ಲಿ ರಾಜ್ಯ ಸರ್ಕಾರದ ಜವಾಬ್ದಾರಿ ಏನು? ಎಂಬುದನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸುತ್ತಿಲ್ಲ. ಬದಲಾಗಿ ಸಂತ್ರಸ್ತರೊಂದಿಗೆ ಸಹಾಯಕ್ಕೆ ನಿಂತವರನ್ನೇ ಹಿಡಿದು ಜೈಲಿಗೆ ತಳ್ಳುವುದು ಯಾವ ನ್ಯಾಯ? ಸರ್ಕಾರಿ ಅಂಕಿ ಸಂಖ್ಯೆಗಳ ಪ್ರಕಾರವೇ 1200 ಮುಸಲ್ಮಾನರನ್ನು ಹತ್ಯೆಗೈಯಲಾಗಿದೆ. ಜನಾಭಿಪ್ರಾಯದ ಪ್ರಕಾರ 3000 ಜನರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸುತ್ತದೆ.

ಸತ್ಯ ನುಡಿದವರಿಗೆ ಶಿಕ್ಷೆ ಕಾದಿಟ್ಟ ಬುತ್ತಿ ಅಲ್ಲವೇ?

ನಮ್ಮ  ಪ್ರಧಾನಮಂತ್ರಿ ಇದೇ 25ರಂದು ಜರ್ಮನ್‍ಗೆ ಹೋಗಿ ಅಲ್ಲಿ ʼಇಂದಿರಾಗಾಂಧಿಯವರು ಭಾರತದಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಿ, ಪ್ರಜಾಸತ್ತೆಯನ್ನು ಸಾಯಿಸಿದ್ದರು. ಆದರೆ ಈಗ ಭಾರತದಲ್ಲಿ ಪ್ರಜಾಸತ್ತೆಯು ನಳನಳಿಸುತ್ತಿದೆʼ ಎಂದು ಹೇಳುತ್ತಿರುವಾಗಲೇ ಭಾರತದ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‍ರನ್ನು ಅವರ ಮೇಲೆ ಸೆಕ್ಷ್ಯನ್ 194, 211, 218, 120(ಬಿ)ಗಳನ್ನು ಹೊರಿಸಿ ಬಂಧಿಸಲಾಗಿರುತ್ತದೆ. ಈ ಮೂಲಕ ಪ್ರಜಾಸತ್ತೆಗೆ ಇನ್ನೂ ದೊಡ್ಡ ಕಳಂಕ ತರುವ ನಡೆಯನ್ನು ಈ ಮೋದಿ ಸರ್ಕಾರ ಮಾಡಿದೆ. ಇಂತಹ ಬಹುದೊಡ್ಡ ಕಳಂಕಕ್ಕೆ ಘನತೆಯುಳ್ಳ ಸುಪ್ರೀಂ ಕೋರ್ಟ್ ಪಾತ್ರವಾಗಿದೆ. ಗುಜರಾತ್ ದಂಗೆಗೆ ಒಂದು ದಿನ ಮುಂಚೆ ಪೊಲೀಸ್ ಅಧಿಕಾರಿಗಳ ಸಭೆ ಕರೆದು ʼಹಿಂದುಗಳು ತಮ್ಮ ಕೋಪವನ್ನು ಹೊರ ಹಾಕಲಿʼ ಎಂದು ಗೋಧ್ರಾದ ಸುಟ್ಟ ಶವಗಳ ಯಾತ್ರೆ ನಡೆಸಿ ಹಿಂದೂಗಳನ್ನು ಕೆರಳಿಸಿ, ಪೊಲೀಸರ ಕೈ ಬಾಯಿಗಳನ್ನು ಕಟ್ಟಿಹಾಕಿತು. ಮೋದಿ ಹೇಳಿದ್ದನ್ನು ಬಾಯ್ಬಿಟ್ಟ ಶ್ರೀಕುಮಾರ ಮತ್ತು ಸಂಜೀವ್ ಭಟ್‍ರವರನ್ನು ಜೈಲಿಗೆ ತಳ್ಳಿತು. ಈಗ ಪತ್ರಕರ್ತೆ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಹಾಗೂ ಒಂದು ಟ್ವೀಟ್‍ನ ಕಾರಣಕ್ಕೆ ಪತ್ರಕರ್ತ ಝುಬೇರ್‌ರನ್ನು ಬಂಧಿಸಲಾಗಿದೆ. ಇದು ನೀಡುವ ಸಂದೇಶವೇನು? ಸತ್ಯ ನುಡಿಯದಿರಿ. ಸತ್ಯ ನುಡಿದವರಿಗೆ ಶಿಕ್ಷೆ ಕಾದಿಟ್ಟ ಬುತ್ತಿ ಅಲ್ಲವೇ? ಅದು ಸಂಜೀವ್ ಭಟ್ ಆಗಲಿ, ಶ್ರೀಕುಮಾರ್ ಆಗಲಿ ಅಥವಾ ತೀಸ್ತಾರೇ ಆಗಲಿ. ಜನ ಈಗಲಾದರೂ ಅರ್ಥ ಮಾಡಿಕೊಳ್ಳಬೇಕಾಗಿದೆ.

ಇದನ್ನು ಓದಿದ್ದೀರಾ? ʼತೀಸ್ತಾ ಸೆಟಲ್ವಾಡ್‌ʼ ಗೌರವಿಸಿ ಪೋಷಿಸಬೇಕಾದ ಅಮೂಲ್ಯ ಜೀವ

ಶಬನಮ್ ಹಶ್ಮಿ ಹೇಳುವ ಪ್ರಕಾರ, ಜನರ ಗೆಳತಿಯಾಗಿ ಅವರಿಗೆ ನ್ಯಾಯಕ್ಕಾಗಿ ಹೋರಾಡುವ ತೀಸ್ತಾರವರಿಗೆ ಅಪರಾಧಿಯನ್ನಾಗಿಸುವ ಮತ್ತು ನಿಜವಾದ ಕ್ರಿಮಿನಲ್ ವ್ಯಕ್ತಿಗಳಿಗೆ ಕ್ಲೀನ್ ಚಿಟ್ ನೀಡುವ ನ್ಯಾಯಾಲಯದ ನೈತಿಕತೆ ಪ್ರಶ್ನಾರ್ಹವಾಗಿದೆ.

ನಿಮಗೆ ಏನು ಅನ್ನಿಸ್ತು?
7 ವೋಟ್