ವೇದಗಣಿತ | ಪ್ರಾಚೀನ ಭಾರತೀಯ ಪರಂಪರೆಗೂ ವೇದಗಣಿತಕ್ಕೂ ಯಾವುದೇ ಸಂಬಂಧವಿಲ್ಲ

ಪ್ರಸಿದ್ಧ ಭಾರತೀಯ ಗಣಿತಜ್ಞ ಎಸ್ ಜಿ ದಾನಿ ಅವರು 1993ರಲ್ಲಿ ತಮ್ಮ 'ವೇದ ಗಣಿತ: ಮಿಥ್ಯೆಗಳು ಮತ್ತು ವಾಸ್ತವತೆ' ಎಂಬ ಪ್ರಬಂಧದಲ್ಲಿ ವೇದ ಗಣಿತದ ಸಮಗ್ರ ಮೌಲ್ಯಮಾಪನವನ್ನು ನೀಡಿದ್ದಾರೆ. ವಿಜ್ಞಾನ, ಗಣಿತದಲ್ಲಿ ಭಾರತದ ಸಮೃದ್ಧ ಕೊಡುಗೆಗಳ ಬಗ್ಗೆ ಭಾರತೀಯರಾಗಿ ನಾವು ಹೆಮ್ಮೆಪಡಬೇಕು ಎಂದು ಅವರು ಹೇಳುತ್ತಾರೆ

ಪರಿಶಿಷ್ಟ ಜಾತಿ, ಪಂಗಡ ಮತ್ತು ಬುಡಕಟ್ಟು ಜನರ ಕಲ್ಯಾಣಕ್ಕೆ ಮೀಸಲಿಟ್ಟಿರುವ ಹಣವನ್ನು ಬಳಸಿಕೊಂಡು ರಾಜ್ಯದಾದ್ಯಂತ 5ನೇ ತರಗತಿಯಿಂದ 8ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಲ್ಲಿ ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳಿಗೆ "ವೇದ ಗಣಿತ" ತರಬೇತಿ ನೀಡಲು ಕರ್ನಾಟಕ ಸರ್ಕಾರ ಮುಂದಾಗಿದೆ. ಕಳೆದ ಜನವರಿಯಲ್ಲಿ ಹಿರಿಯೂರಿನ ಎವಿಎಂ ಅಕಾಡೆಮಿಗೆ ವೈದಿಕ ಗಣಿತ ಬೋಧಿಸಲು ಸರ್ಕಾರ ಅನುಮತಿ ನೀಡಿದ್ದನ್ನು ದಲಿತ ಮುಖಂಡರು ಮತ್ತು ಶಿಕ್ಷಣತಜ್ಞರು ವಿರೋಧಿಸಿದ್ದಾರೆ.

Eedina App

ಈ ಕ್ರಮವು ಎಸ್ಸಿ-ಎಸ್ಟಿ ಸಮುದಾಯಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಖಾಸಗಿ ಒಡೆತನದ ಎನ್‌ಜಿಒಗೆ ಸಂದಾಯವಾಗುತ್ತದೆ. ವೇದ ಗಣಿತ ಕಲಿಸಲು ಶಿಕ್ಷಕರಿಗೆ 16 ವಾರಗಳ ತರಬೇತಿ ಕಾರ್ಯಕ್ರಮ ನಡೆಸಲು ಸರ್ಕಾರ ಎವಿಎಂ ಅಕಾಡೆಮಿಗೆ ಹಣ ಪಾವತಿಸುತ್ತದೆ. ಆದರೆ ವೇದಗಣಿತಕ್ಕೂ ಭಾರತೀಯ ಪರಂಪರೆಗೂ ಯಾವುದೇ ಸಂಬಂಧವಿಲ್ಲ.

ವೇದ ಗಣಿತ ಎಂದರೇನು ?

AV Eye Hospital ad

ಪುರಿಯಲ್ಲಿ ಶಂಕರಾಚಾರ್ಯರಾಗಿದ್ದ ಜಗದ್ಗುರು ಸ್ವಾಮಿ ಶ್ರೀ ಭಾರತೀ ಕೃಷ್ಣ ತೀರ್ಥ ಮಹಾರಾಜ್ (ವೆಂಕಟರಾಮನ್ ಶಾಸ್ತ್ರಿ ) ಅವರ ಪುಸ್ತಕದಲ್ಲಿ 1950ರ ದಶಕದಲ್ಲಿ ಅಭಿವೃದ್ಧಿಪಡಿಸಲಾದ ವೇದ ಗಣಿತಶಾಸ್ತ್ರವು, ಪ್ರಾಚೀನ ಭಾರತೀಯ ಗಣಿತ ಪರಂಪರೆಗಳೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. 

ಶಂಕರಾಚಾರ್ಯ ಎಂದು ಹೆಸರು ಬರುವುದಕ್ಕೂ ಮೊದಲು, ಭಾರತೀ ಕೃಷ್ಣ ಅವರು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಗಣಿತ ಅಧ್ಯಯನ ಮಾಡಿದರು. ಧಾರ್ಮಿಕ ಅನ್ವೇಷಣೆಗಳಿಗೆ ತೆರಳಿದ ನಂತರ ಮನೋ ಗಣಿತದ ಶೈಲಿ ಅಭಿವೃದ್ಧಿಪಡಿಸಿ ಅದು ಆಧ್ಯಾತ್ಮಿಕವಾಗಿ ಪ್ರೇರಿತವಾಗಿದೆ ಎಂದು ಪ್ರತಿಪಾದಿಸಿದರು ಹಾಗೂ ತಮ್ಮ ಶೈಲಿಯನ್ನು ಸಂಸ್ಕೃತ ಸೂತ್ರಗಳು ಎಂದು ಬಣ್ಣಿಸಿದರು. ಅವರು ಸಾಯುವ ಕೆಲವು ವರ್ಷಗಳ ಹಿಂದೆ ಬರೆದ ಈ ಪುಸ್ತಕವನ್ನು ಅವರ ಮರಣದ 5 ವರ್ಷಗಳ ನಂತರ 1965ರಲ್ಲಿ ಪ್ರಕಟಿಸಲಾಯಿತು. ಪುಸ್ತಕದಲ್ಲಿ 16 ಸಂಸ್ಕೃತ ಸೂತ್ರಗಳು ಮತ್ತು ಗಣಿತ ತಂತ್ರವನ್ನು ವಿವರಿಸುವ ಅಂಕಗಣಿತ, ಬಹುಪದಗಳು, ಕೆಲವು ಜ್ಯಾಮಿಟ್ರೀ ಮತ್ತು ತ್ರಿಕೋನಮಿಟ್ರಿಯ ಈ ವಿಷಯಗಳನ್ನು ಒಳಗೊಂಡಿರುತ್ತವೆ. ವೇದ ಗಣಿತ ಬಳಸುವ ತರಬೇತಿಯು ಮನಸ್ಸಿನಲ್ಲಿ ಲೆಕ್ಕಾಚಾರ ಮಾಡುವುದರ ಮೇಲೆ ಹೆಚ್ಚು ಕೇಂದ್ರೀಕರಿಸುತ್ತದೆ. 

Vedicmathematics

ವೈದಿಕ ಗಣಿತದ ಬಗ್ಗೆ ವಿದ್ವಾಂಸರು ಹೇಳುವುದೇನು?
ಪುಸ್ತಕದಲ್ಲಿ ಬೋಧನೆಗಳಿಗೆ ಸಂಬಂಧಿಸಿದ ವೇದ ಸಾಹಿತ್ಯದ ಯಾವುದೇ ಭಾಗವಿಲ್ಲ ಮತ್ತು ಗಣಿತದ ಮೌಲ್ಯವಿಲ್ಲ ಎಂದು ಗಣಿತ ವಿದ್ವಾಂಸರು ಕೂಡ ಒಪ್ಪುತ್ತಾರೆ. ವಿದ್ಯಾರ್ಥಿಗಳಿಗೆ ಎಷ್ಟು ಲಾಭದಾಯಕವಾಗಿದೆ ಎಂಬುದರ ಮೇಲೆ ತಂತ್ರಗಳ ಮೌಲ್ಯವನ್ನು ನಿರ್ಣಯಿಸಬೇಕು. ಇದನ್ನು ವೇದ ಎಂದು ಕರೆಯುವುದು ಶಿಕ್ಷಣಕ್ಕಾಗಿ ಅಲ್ಲ, ಕೇವಲ ಪ್ರಚಾರಕ್ಕಾಗಿ ಅಷ್ಟೆ. ಇತಿಹಾಸಕಾರರು ವೇದ ಗಣಿತವನ್ನು ಪ್ರಹಸನವಾಗಿ ನೋಡುತ್ತಾರೆ. ಮೊದಲನೆಯದಾಗಿ ಹೆಚ್ಚಿನ ನಿಖರತೆಯ ದಶಮಾಂಶ-ಆಧಾರಿತ ಲೆಕ್ಕಾಚಾರ ಒಳಗೊಂಡಿರುತ್ತವೆ. ಪ್ರಾಚೀನ ಭಾರತೀಯ ಗಣಿತ ತಜ್ಞರು ಸಂಕೀರ್ಣ ಲೆಕ್ಕಾಚಾರಗಳನ್ನು ಮಾಡಲು ಹೆಚ್ಚಾಗಿ ಭಿನ್ನರಾಶಿಗಳನ್ನು ಬಳಸುತ್ತಿದ್ದರು. ಪುಸ್ತಕದಲ್ಲಿನ ಗಣಿತದ ಶೈಲಿ ಪ್ರಾಚೀನ ಭಾರತೀಯ ಜ್ಞಾನಕ್ಕಿಂತ ಶಾಲೆ ಮತ್ತು ಕಾಲೇಜುಗಳಲ್ಲಿ ಬಳಸಲಾದ ಪಠ್ಯಪುಸ್ತಕಗಳಿಂದಲೇ ಹೆಚ್ಚು ಪ್ರಭಾವಿತವಾಗಿದೆ ಎಂದು ತೋರುತ್ತದೆ.

ಪ್ರಸಿದ್ಧ ಭಾರತೀಯ ಗಣಿತಜ್ಞ ಎಸ್ ಜಿ ದಾನಿ ಅವರು 1993ರಲ್ಲಿ ತಮ್ಮ 'ವೇದ ಗಣಿತ: ಮಿಥ್ಯೆಗಳು ಮತ್ತು ವಾಸ್ತವತೆ' ಎಂಬ ಪ್ರಬಂಧದಲ್ಲಿ ವೇದ ಗಣಿತದ ಸಮಗ್ರ ಮೌಲ್ಯಮಾಪನವನ್ನು ನೀಡಿದರು. ವಿಜ್ಞಾನ ಮತ್ತು ಗಣಿತದಲ್ಲಿ ಭಾರತ ನೀಡಿದ ಸಮೃದ್ಧ ಕೊಡುಗೆಗಳ ಬಗ್ಗೆ ಭಾರತೀಯರಾಗಿ ನಾವು ಹೆಮ್ಮೆಪಡಬೇಕು ಎಂದು ಅವರು ಹೇಳುತ್ತಾರೆ. ಆದರೆ, ಅನೇಕ ಬಲಪಂಥೀಯರು ಇತಿಹಾಸವನ್ನು ಪುನರ್‌ನಿರ್ಮಿಸುವ ಸಲುವಾಗಿ ರಾಷ್ಟ್ರೀಯ ಭಾವನೆಗಳನ್ನೇ ಪ್ರಚೋದಿಸಲು ಪ್ರಯತ್ನಿಸುತ್ತಾರೆ. ವೇದ ಗಣಿತ ಯೋಜನೆಯು ಭಾರತೀಯರ ಅಸಮರ್ಪಕತೆಯ ಭಾವನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತದೆ ಮತ್ತು ವಿಜ್ಞಾನ, ಇತಿಹಾಸ ಹಾಗೂ ಗಣಿತದ ನಿಜವಾದ ಅಧ್ಯಯನವನ್ನು ವಿಚಲಿತಗೊಳಿಸುತ್ತದೆ. ಅವರು ನೀಡಿರುವ ಒಂದು ಹೇಳಿಕೆಯಲ್ಲಿ ”ವೇದ ಗಣಿತವು ವೇದವೂ ಅಲ್ಲ, ಗಣಿತವೂ ಅಲ್ಲ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಶಾಲೆಗಳಲ್ಲಿ ವೇದಗಣಿತ: ಶಿಕ್ಷಣ ವ್ಯವಸ್ಥೆಯ ಬ್ರಾಹ್ಮಣೀಕರಣದ ಮುಂದುವರೆದ ಭಾಗ

ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಬದಲು, ಕೆಲವು ಕೋಚಿಂಗ್ ಕೇಂದ್ರಗಳು ವೇದ ಗಣಿತವನ್ನು ಉತ್ತೇಜಿಸಲು ಪ್ರಯತ್ನಿಸುತ್ತಿವೆ ಮತ್ತು "ವೈದಿಕ" ಸಿದ್ಧಾಂತವನ್ನು ಉತ್ತೇಜಿಸಲು ಗಣಿತ ತರಬೇತಿ ಬಳಸುತ್ತವೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಯಲು, ಹಿಂದೂ ಆಚರಣೆಗಳನ್ನು ಅಳವಡಿಸಿಕೊಳ್ಳಲು ಒತ್ತು ನೀಡುತ್ತವೆ.

ಶಾಲೆಗಳಲ್ಲಿ ಕಲಿಸುವ ಮುಖ್ಯವಾಹಿನಿಯ ಗಣಿತಕ್ಕೆ ಪರ್ಯಾಯವಾಗಿ ಸರ್ಕಾರ ವೇದಗಣಿತವನ್ನು ತಳ್ಳಿದೆ. ಆದರೆ, ಇದು ಮಕ್ಕಳ ಶಿಕ್ಷಣವನ್ನು ದುರ್ಬಲಗೊಳಿಸಲು ಮಾತ್ರ ಕೆಲಸ ಮಾಡುತ್ತದೆ. ಎಸ್ಸಿ ಮತ್ತು ಎಸ್ಟಿ ಕಲ್ಯಾಣದ ಪ್ರಗತಿಗಾಗಿ ಇರುವ ಹಣವನ್ನು ಸರ್ಕಾರ ಖಾಸಗಿ ಕೋಚಿಂಗ್ ಕೇಂದ್ರಗಳಿಗೆ ಸುರಿಯುತ್ತಿದೆ. ಇದಲ್ಲದೇ ಎನ್‌ಜಿಒಗಳು ವಿದೇಶಿ ಧನಸಹಾಯವನ್ನೂ ಸಹ ಪಡೆಯಬಹುದು. ವೇದಗಣಿತ ಎಂದು ಕರೆಯಲ್ಪಡುವ ಗಣಿತಶಾಸ್ತ್ರದಲ್ಲಿ ಹೊಸ ಕ್ಷೇತ್ರ ಹೇಗೆ ರಚಿಸಲು ಸಾಧ್ಯ ಎಂದು ಶಿಕ್ಷಣ ಕ್ಷೇತ್ರದ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಮನಸ್ಸಿನಲ್ಲಿ ಲೆಕ್ಕಾಚಾರ ಮಾಡಲು ಅನೇಕ ಮಾರ್ಗಗಳನ್ನು ಕಲಿಯುತ್ತಾರೆ. ಆದರೆ, ವೇದಗಣಿತ ಪುಸ್ತಕದಲ್ಲಿನ ವಿಧಾನ ಬಳಸುವುದರಿಂದ ಪ್ರಯೋಜನವಿದೆ ಎಂಬುದೇ ಸಾಬೀತಾಗಿಲ್ಲ. 

ನಿಮಗೆ ಏನು ಅನ್ನಿಸ್ತು?
4 ವೋಟ್
eedina app