ಪರಮೇಶ್ವರ ಗುರುಸ್ವಾಮಿ

Parameshwara Guruswamy

ಒಂದು ಹೆಗಲಿಗೆ ಕ್ಯಾಮೆರಾವನ್ನೂ, ಮತ್ತೊಂದು ಹೆಗಲಿಗೆ ಪುಸ್ತಕದ ಚೀಲವನ್ನೂ ನೇತು ಹಾಕಿಕೊಂಡ ವ್ಯಕ್ತಿ ನಿಮಗೆ ಎಲ್ಲಿಯಾದರೂ ಕಂಡರೆ, ಅವರು ಪರಮೇಶ್ವರ ಗುರುಸ್ವಾಮಿ ಆಗಿರುವ ಸಾಧ್ಯತೆ ಖಂಡಿತ ಉಂಟು. ಸಿನಿಮಾ ಅಂದಾಕ್ಷಣ ಎಲ್ಲರಿಗಿಂತ ಮೊದಲು ಮಾತು ಶುರುಮಾಡುವಷ್ಟು ಪ್ರೀತಿ. ಅದಕ್ಕೆ ತಕ್ಕಂತೆ ಅಪಾರ ಜೀವನಪ್ರೀತಿ.