ನಮ್ಮೆಲ್ಲರ ಜಾತ್ರೆಗಳ ಕಲ್ಪನೆ ಹೆಚ್ಚಿನದಾಗಿ ಮೂಡುವುದೇ ಕಣ್ಣು ಕೋರೈಸುವ ಬೆಳಕಿನಲ್ಲಿ ನಡೆಯುವ ಸಂಭ್ರಮದಲ್ಲಿ. ಆದರೆ, ಆ ಬೆಳಕಿನ ಹಿಂದೆ ಕೆಲವು ನಕ್ಷತ್ರಗಳಿವೆ. ಅವೆಲ್ಲ ರಾತ್ರಿಯ ಬೆಳಕ ಮೂಡಿಸಲು ಹಗಲೆಲ್ಲ ಶ್ರಮಿಸಬೇಕಿರುತ್ತದೆ. ಆ ಜೀವಗಳ ಶ್ರಮವೇ ಜಾತ್ರೆಗಳ ಮಿನುಗು. ಇಲ್ಲಿರುವ ಚಿತ್ರಗಳು ಅವರ ಬದುಕನ್ನು ದೂರದಿಂದ ನೋಡಿರುವ ನೋಟಗಳಷ್ಟೆ.