ಕೃಷಿ ಚಟುವಟಿಕೆಗಳು ಸರಳ ಸಂಭ್ರಮವನ್ನೂ ದಾಟಿ ಹಬ್ಬದ ರೂಪು ಪಡೆಯುವುದು ಕರ್ನಾಟಕದ ತುಳುನಾಡಿನ ವಿಶೇಷಗಳಲ್ಲೊಂದು. ಅಂತಹ ಚಟುವಟಿಕೆಗಳಲ್ಲಿ ಭತ್ತ ನಾಟಿ (ನಟ್ಟಿ) ಮುಖ್ಯವಾದುದು. ಮುಂಗಾರಿನ ಜೊತೆಜೊತೆಗೇ ಗದ್ದೆ ಅಣಿಗೊಳಿಸುವುದು, ಭತ್ತದ ಸಸಿ ತಯಾರು ಮಾಡುವುದು ನಡೆದು, ಕಡೆಗೆ ನಾಟಿ ಮಾಡುವ ದಿನ ಗದ್ದೆ ತುಂಬಾ ಪುಳಕದ ದನಿಗಳ ಮೆರವಣಿಗೆ. ಆ ಸಡಗರವನ್ನು ಗದ್ದೆಗಿಳಿದು ಅನುಭವಿಸಿದರೇನೇ ಸೊಗಸು. ತುಳುನಾಡಿನ ಈ ಸಂಭ್ರಮದ ಇಣುಕುನೋಟ ಇಲ್ಲುಂಟು (ಫೋಟೊ ಮೇಲೆ ಕ್ಲಿಕ್ ಮಾಡಿ ನೋಡಿ).