ದೇಸಿ ನುಡಿಗಟ್ಟು - ಕುಂದಾಪುರ ಪ್ರಾಂತ್ಯ | ಸುಕ್ಕಿನುಂಡಿಗೆ ಇಪ್ಪು ಡಿಮ್ಯಾಂಡ್ ಯಾವತ್ತಿಗೂ ಕಮ್ಮಿ ಆತಿಲ್ಲ

Desi Nudigattu feature 1

'ಸುಕ್ಕಿನುಂಡಿ' (ಸುಕ್ಕಿನುಂಡೆ) ಎಂಬ ಪದ ಗೊತ್ತಿಲ್ಲವೆಂದರೆ, ನೀವು ನಮ್ಮದೇ ರಾಜ್ಯದಲ್ಲಿರುವ ಕುಂದಾಪುರ ಎಂಬ ವಿಶಿಷ್ಟ ಪ್ರದೇಶದ ಬಗ್ಗೆ ಸರಿಯಾಗಿ ತಿಳಿದುಕೊಂಡಿಲ್ಲ ಎಂದೇ ಅರ್ಥ. ಸುಕ್ಕಿನುಂಡೆಗಾಗಿ ಬಡಿದಾಡಿಕೊಂಡಿರುವ ಹಲವು ಪ್ರಕರಣಗಳಿವೆ ಅಂದರೆ ಲೆಕ್ಕ ಹಾಕಿ, ಅಲ್ಲಿನ ಜನಕ್ಕೆ ಈ ಪದಾರ್ಥ ಅದೆಷ್ಟು ಪ್ರಾಣಪ್ರಿಯ ಅಂತ! ಅಂತಹ ಅಪರೂಪದ ತಿನಿಸಿನ ಬಗೆಗೆ, 'ಕುಂದಾಪ್ರ ಕನ್ನಡ'ದಲ್ಲೇ ಮಾತನಾಡಿದ್ದಾರೆ ಅಭಿಷೇಕ್ ಪೈ.

Eedina App

* * * * *

ಹುಬ್ಬಳ್ಳಿಯವರು ಮಾತನಾಡುವಾಗ ಮೈಸೂರಿನ ಮಂದಿ ಕಿಸಕ್ಕನೆ ನಗುವುದುಂಟು. ಚಾಮರಾಜನಗರದ ಜನ ಮಾತನಾಡುತ್ತಿದ್ದರೆ ಎಲ್ಲರೂ ಕಕ್ಕಾಬಿಕ್ಕಿ. ಕೋಲಾರದ ಜನ ನುಡಿದರೆ ಬೀದರಿನ ಮಂದಿಗೆ ಕಿರಿಕಿರಿ. ಬಳ್ಳಾರಿಯವರು ಮಾತಾಡಿದರೆ ಶಿವಮೊಗ್ಗದವರು ಮೌನ. ಮಂಗಳೂರು ಜನ ಮಾತಾಡಿದರೆ ಆಡಿಕೊಳ್ಳುವವರಿಗೆ ಕೊರತೆ ಇಲ್ಲ. ಯಾಕೆ ಹೀಗೆ? ಕಾರಣ ತುಂಬಾನೇ ಸರಳ; ಪರಸ್ಪರರ ನುಡಿಗಟ್ಟಿನ (ಡಯಲೆಕ್ಟ್) ಪರಿಚಯ ಇಲ್ಲ.

AV Eye Hospital ad

ಹಾಗಾದರೆ, ಕರ್ನಾಟಕದ ಯಾವುದೋ ಭಾಗದ ವ್ಯಕ್ತಿ ಸಹಜವಾಗಿ ಮಾತನಾಡುವ ನುಡಿಗಟ್ಟು ಇತರರಿಗೆ ನಗು ತರಿಸದಂತೆ, ಲೇವಡಿ ಮಾಡುವ ಸರಕಾಗದಂತೆ ಏನು ಮಾಡಬಹುದು? ಪರಸ್ಪರರ ನುಡಿಗಟ್ಟು ಪರಿಚಯವಾದರೆ ಸಾಕಲ್ಲವೇ? ಈ ಪ್ರಯತ್ನದ ಮೊದಲ ಹೆಜ್ಜೆಯಾಗಿರಲಿದೆ 'ದೇಸಿ ನುಡಿಗಟ್ಟು' ಸರಣಿ.

ಮೇಲ್ನೋಟಕ್ಕೆ ನುಡಿಗಟ್ಟಿನಲ್ಲಿ ವ್ಯತ್ಯಾಸ ಉಂಟು ಎನಿಸಿದ, ಕರ್ನಾಟಕದ ನೂರಕ್ಕೂ ಹೆಚ್ಚು ಪ್ರಾಂತ್ಯದ ಮಂದಿ ಈ ಸರಣಿಯಲ್ಲಿ ಅಂಕಣಗಳನ್ನು ಬರೆಯಲಿದ್ದಾರೆ; ಜೊತೆಗೆ, ಆ ಬರಹಗಳನ್ನು ಅವರೇ ಓದಿ ಕೂಡ ಕೇಳಿಸಲಿದ್ದಾರೆ.

ಈ ಬರಹ ಮತ್ತು ದನಿ ಅವರು ದಿನನಿತ್ಯ ಮಾತನಾಡುವ ನುಡಿಗಟ್ಟಿನಲ್ಲೇ ಇರಲಿದೆ. ಆಯಾ ನುಡಿಗಟ್ಟನ್ನು ಮಾತನಾಡುವ ಪ್ರಾಂತ್ಯದ ಜನರ ಜೀವನ, ಅವರ ಕಷ್ಟ-ಸುಖ, ದೈನಂದಿನ ಘಟನೆಗಳು, ವಿಶೇಷಗಳನ್ನು ಈ ಪ್ರಯೋಗ ಒಳಗೊಂಡಿರಲಿದೆ.

ಇದು ನಮ್ಮ ಮಹತ್ವಾಕಾಂಕ್ಷಿ ಪ್ರಯೋಗ. ನಿಮ್ಮ ಸಲಹೆ, ಟೀಕೆ-ಟಿಪ್ಪಣಿಗಳಿಗೆ ಮುಕ್ತ ಸ್ವಾಗತ.

ನಿಮಗೆ ಏನು ಅನ್ನಿಸ್ತು?
11 ವೋಟ್
eedina app