
ಎಸ್.ಪಿ. ವಿಜಯಲಕ್ಷ್ಮೀ ಅವರ 'ಕ್ಷಮೆ ಇರಲಿ ತುಂಗೆ' ಕಾದಂಬರಿ ಹೆಣ್ಣಿನ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡುವ ಕಾಲವಿದು. ಹೆಣ್ಣು ಸ್ವತಂತ್ರಳಾಗಿರುವುದು ಸಮಾಜದ ಏಳಿಗೆಗೆ ಅಗತ್ಯ ಕೂಡಾ. ಹೆಣ್ಣು ಶಕ್ತಿ, ಮನುಕುಲದ ನಿಜವಾದ ಬುನಾದಿ. ಹೆಣ್ಣನ್ನು ಗೌರವಿಸದ ಸಮಾಜ ರೋಗಗ್ರಸ್ತವಾದದ್ದು. ಪುರುಷರಿಗೂ ಮೀರಿ ಎಲ್ಲ ರಂಗದಲ್ಲೂ ಗಟ್ಟಿಯಾಗಿ ಕಾಲೂರಿ ತನ್ನ ಛಾಪನ್ನು ಮೂಡಿಸಬಲ್ಲ ಸಾಮರ್ಥ್ಯ ಇರುವವಳು ಹೆಣ್ಣು. ಇದು ಅಗತ್ಯ ಸುಸಂಸ್ಕೃತ, ಆರೋಗ್ಯಪೂರ್ಣ ಸಮಾಜದ ಬೆಳವಣಿಗೆಗೆ ಅಗತ್ಯ ಕೂಡಾ. ಪಾರಂಪರಿಕ ಶೋಷಣೆಗಳು ಕರಗಿಹೋಗಲು ಹೆಣ್ಣು ಪ್ರಬುದ್ಧತೆಯನ್ನು ಸಾಧಿಸಲೇಬೇಕು ಎಂದು ಹೇಳುವ ಕಾದಂಬರಿಯ ಕಥಾ ಹಂದರ ಸಂಪ್ರದಾಯ, ಮೌಲ್ಯ ಸಂಘರ್ಷಗಳನ್ನು ಚಿತ್ರಿಸುತ್ತದೆ.
ಹಿಂದಿನ ಕಂತು ಇಲ್ಲಿ ಕೇಳಿ : ಕೇಳು ಹೊತ್ತಿಗ 3 | ಗುರುಪಾದ ಬೇಲೂರು ಅವರ ' ದೇವರು ಕಾಡು' ಕಾದಂಬರಿಯ ಆಯ್ದ ಭಾಗ