ನೆಹರು ಭಾರತದ ಮೆಲುಕು | ಕಂತು -1 | ಸ್ವಾತಂತ್ರ್ಯ ಪಡೆದ ನಡು ರಾತ್ರಿಯಲ್ಲಿ ಇಡೀ ದೇಶಕ್ಕೆ ಉತ್ಸಾಹ ತುಂಬಿದ ಭಾಷಣ!

Nehru Bharatada meluku 1

 

ಭಾರತ ಕಂಡ ಅಪ್ರತಿಮ ಮುತ್ಸದ್ದಿ, ಪಂಡಿತ್ ಜವಾಹರ್ ಲಾಲ್ ನೆಹರು ಅಪೂರ್ವ ದಾರ್ಶನಿಕ. ಸ್ವಾತಂತ್ರ್ಯ ಭಾರತದ ಹೆಜ್ಜೆಗಳು ಹೇಗಿರಬೇಕೆಂದು ಕನಸು ಕಂಡ ನೆಹರು ಶಿಕ್ಷಣ, ವಿಜ್ಞಾನ, ಉದ್ಯಮ, ಅಭಿವೃದ್ಧಿ ಹೀಗೆ ಹತ್ತು ಹಲವು ಆಯಾಮಗಳಲ್ಲಿ ಚಿಂತಿಸಿ, ರಾಜಕೀಯವಾಗಿ, ಸಾಮಾಜಿಕವಾಗಿ ಸಮರ್ಥ ದೇಶವನ್ನಾಗಿ ರೂಪಿಸುವ ಕನಸು ಕಂಡರು. ಆ ನಿಟ್ಟಿನಲ್ಲಿ ದೇಶದ ನೀಲನಕಾಶೆಯನ್ನು ರೂಪಿಸಿದರು. ಈ ದೇಶದ ಭೌಗೋಳಿಕ ಅಗಾಧತೆಯ ಜೊತೆಗೆ ಕೌಶಲ್ಯ, ಸಂಪನ್ಮೂಲ ಹಾಗೂ ಹಲವು ವೈಶಿಷ್ಟ್ಯಗಳ ಮೂಲಕ ಜಗತ್ತಿನ ಪ್ರಮುಖ ಹಾಗೂ ಪ್ರಬಲ ದೇಶವಾಗಿ ಬೆಳೆದುನಿಲ್ಲುವುದಕ್ಕೆ ಆ ನೀಲನಕಾಶೆ ದೊಡ್ಡ ಪಾತ್ರವಹಿಸಿದೆ. ದೇಶದ ಅಗಾಧತೆ, ಅಖಂಡತೆಯನ್ನು ಉಳಿಸುವುದಕ್ಕಾಗಿ, ಈ ದೇಶದ ವೈವಿಧ್ಯತೆ, ಸಹಿಷ್ಣುತೆ, ಸಾಮರಸ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ನೆಹರುವನ್ನು ಮತ್ತೆ ನೆನಪಿಸಿಕೊಳ್ಳುವ ಅಗತ್ಯವಿದೆ. 

ಆಗಸ್ಟ್‌ 15ರ ನಡು ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ನೆಹರೂ ಅವರು ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಹೊಣೆಗಾರಿಕೆ ಪ್ರತಿಯೊಬ್ಬ ಪ್ರಜೆಯದ್ದು ಎಂದು ಎಚ್ಚರಿಸುವ ಮಾತನಗಳನ್ನಾಡಿದ್ದರು. ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳುವಂತೆ ಹುರಿದುಂಬಿಸಿದ್ದರು. ಆ ಭಾಷಣದ  ಮೂಲಕ 'ನೆಹರು ಭಾರತದ ಮೆಲುಕು' ಸರಣಿಗೆ ಚಾಲನೆ ನೀಡುತ್ತಿದ್ದೇವೆ.  ಈ ಸರಣಿಯಲ್ಲಿ ದಕ್ಷಿಣ ಭಾರತದ ಪ್ರಮುಖ ನಟ ಕಿಶೋರ್ ಅವರು ನೆಹರು ಅವರ ಪತ್ರಗಳು, ಪ್ರಮುಖ ಭಾಷಣಗಳು, ಆಯ್ದ ಬರಹಗಳನ್ನು ಓದಲಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್