ಪಲ್ಲವಿ ಅನುಪಲ್ಲವಿ -3 | ಸಾವು ತಂದೊಡ್ಡುವ ಸಂಕಟಗಳನ್ನು ಮರೆಯೋಕೆ ಹಾಡುಗಳು ಬೇಕು

ಜವರಾಯ, ಸಾವಿನ ದೇವರು. ಅವನು ಬರುತ್ತಾನೆಂದರೆ ಭಯ ಬೀಳದವರು ಯಾರು? ಆದರೆ ಜನಪದದಲ್ಲಿ ಅವನನ್ನು ಕರೆದು ಸತ್ಕರಿಸಿದವರೂ ಇದ್ದಾರೆ, ನಾ ಬರೆನು ಬೇರೆ ಇನ್ನಾರನಾದರೂ ಕರೆದೊಯ್ಯಿ ಎಂದವರೂ ಉಂಟು. ಜನಪದದಲ್ಲಿ ಯಮರಾಜನ ಕಲ್ಪನೆ, ಸಾವು, ಸಂಕಟಗಳನ್ನು ಕುರಿತು ಈ ಪಾಡ್‌ಕಾಸ್ಟ್‌ನಲ್ಲಿ ಒಂದಿಷ್ಟು ಮಾತು, ಒಂದಿಷ್ಟು ಹಾಡು
Pallavi Anupallavi- Episode 3

00.00 - ಜವರಾಯ ಬಂದರೆ..ಬರಿಗೈಲಿ ಬರಲಿಲ್ಲ. ಕುಡುಗೋಲು ಕೊಡಲ್ಯೊಂದು ಹೆಗಲೇರಿ ಜವರಾಯ ಒಳ್ಳೊಳ್ಳೆ ಮರನ ಕಡಿ ಬಂದ..

02.25 -  ಹೆಣ್ಣೊಬ್ಬಳು ಜವರಾಯನ ಅತಿಥಿಯಂತೆ ಸ್ವಾಗತಿಸುವ ಜನಪದ ಗೀತೆ; ಗಂಡನ ಬಿಟ್ಟು ಹೇಗೆ ಹೋಗಲಿ, ನಡೆ ಮುಂದೆ ಎನ್ನುತ್ತಾಳೆ.

04.10 - ಯಾರಿಗೆ ತಾನೆ ಸಾಯಲು ಇಷ್ಟವಿರುತ್ತದೆ? ನಾನೇ ಏಕೆ ಎಂದು ಕೇಳುತ್ತಾಳೆ. ಬೇರೆ ಯಾರನ್ನಾದರೂ ಕರೆದುಕೊಂಡು ಹೋಗಬಾರದೇಕೆ ಎನ್ನುತ್ತಾಳೆ.

09.24 - ದೇವತೆಗಳು ಸ್ತುತಿಗೆ ಹಿಗ್ಗುತ್ತಾರೆ ಅನ್ನೋ ನಂಬಿಕೆ. ಆದರೆ ಜನಪದದಲ್ಲಿ ಹೊಗಳಿಕೆಗಿಂತ ಒತ್ತಾಯ, ಪೂಜೆಗಿಂತ ಬೈಗುಳ ಹೆಚ್ಚು ಕೆಲಸ ಮಾಡುತ್ತೆ. ಅವರು ದುಡಿಯುವ ಜನ.

12.04 - ಸಾವು ತಂದೊಡ್ಡುವ ಸಂಕಟಗಳನ್ನು ಮರೆಯೋಕೆ ಹಾಡುಗಳ ಅಗತ್ಯ. ಸಾವಿನ ಹಾಡುಗಳಿಗೆ ಕಿವಿಗೊಡುವುದಕ್ಕೆ ಕರಾವಳಿ ಕರ್ನಾಟಕಕ್ಕೆ ಹೋಗಬೇಕು.

16.32 - ಹಕ್ಕಿ ಆಕಾಶ ಮತ್ತು ಭೂಮಿ ಜನಪದರ ಕುತೂಹಲವನ್ನು ಮತ್ತೆ ಮತ್ತೆ ಕೆಣುಕುತ್ತಾ ಬಂದಿವೆ. ಪ್ರಾಣದ ಹಕ್ಕಿ,   ಆಕಾಶದ ಬದಲಾಗುವ ಬಣ್ಣ, ಸೂರ್ಯ-ಚಂದ್ರರು ಮತ್ತು ಅದರ ನಿರಂತರತೆ. ಜನರ ಬದುಕು ಮತ್ತು ಚಿಂತನೆಯ ಮೇಲೆ ಗಾಢ ಪರಿಣಾಮ ಬೀರಿವೆ.

ಇದನ್ನು ಕೇಳಿದ್ದೀರಾ? | ಪಲ್ಲವಿ ಅನುಪಲ್ಲವಿ -2 | ಜಗಕೆ ಹುರುಪಿನ ಚಿಗುರು ಕೊಡುವ ವಸಂತಗಾನ

ನಿಮಗೆ ಏನು ಅನ್ನಿಸ್ತು?
14 ವೋಟ್