ಸಿಎಂ ಯೋಗಿ ಕಚೇರಿಯ ಟ್ವಿಟರ್‌ ಖಾತೆ ಹ್ಯಾಕ್‌ | ಸ್ಕ್ರೀನ್‌ಶಾಟ್‌ಗಳು ವೈರಲ್

  • ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರೊಫೈಲ್ ಬದಲು ಕಾರ್ಟೂನ್‌ 
  • 29 ನಿಮಿಷಗಳಲ್ಲಿ 400ಕ್ಕೂ ಹೆಚ್ಚು ಟ್ವೀಟ್‌ ಮಾಡಿದ ಹ್ಯಾಕರ್‌ಗಳು

ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯ (ಸಿಎಂಒ) ಅಧಿಕೃತ ಟ್ವಿಟರ್ ಖಾತೆಯನ್ನು ಶನಿವಾರ (ಏಪ್ರಿಲ್ 9) ಮುಂಜಾನೆ ಹ್ಯಾಕ್ ಮಾಡಲಾಗಿದೆ. ಸುಮಾರು 4 ಗಂಟೆಗಳ ನಂತರ, ಖಾತೆಯನ್ನು ಸರಿಪಡಿಸಲಾಗಿದೆ.

ಟ್ವಿಟರ್‌ ಖಾತೆಯ ನಿಯಂತ್ರಣ ಮರಳಿ ಪಡೆದ ನಂತರ, ಹ್ಯಾಕರ್‌ಗಳು ಪೋಸ್ಟ್‌ ಮಾಡಿದ್ದ ಟ್ವೀಟ್‌ಗಳನ್ನು ತೆಗೆದುಹಾಕಲಾಗಿದೆ. ಆದರೂ, ಕೆಲವು ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 

ಸೈಬರ್ ತಜ್ಞರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ​​ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಟ್ವೀಟ್‌ನಲ್ಲಿ ತಿಳಿಸಿದೆ.

 

ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯ ಅಧಿಕೃತ ಟ್ವಿಟರ್ ಅನ್ನು ಹ್ಯಾಕರ್‌ಗಳು ಹ್ಯಾಕ್‌ ಮಾಡಿದ ನಂತರ, ಖಾತೆಯಿಂದ ಸುಮಾರು 400ಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಗಿದೆ. ಟ್ವಿಟರ್ ಹ್ಯಾಂಡಲ್‌ನಿಂದ ಮುಖ್ಯಮಂತ್ರಿ ಯೋಗಿ ಅವರ ಡಿಸ್‌ಪ್ಲೇ ಚಿತ್ರ ತೆಗೆದು, ಕಾರ್ಟೂನ್‌ ಚಿತ್ರವನ್ನು ಹಾಕಲಾಗಿತ್ತು. 

Image

"ಸುಮಾರು 29 ನಿಮಿಷಗಳ ಕಾಲ ಖಾತೆ ಹ್ಯಾಕ್ ಆಗಿತ್ತು. ತಕ್ಷಣ, ಖಾತೆಯನ್ನು ಅಮಾನತುಗೊಳಿಸಲಾಗಿತ್ತು. ಕೆಲ ಸಮಯದ ನಂತರ, ಖಾತೆಯನ್ನು ಸರಿಪಡಿಸಿಲಾಗಿದ್ದು, ಮುಖ್ಯಮಂತ್ರಿ ಯೋಗಿ ಅವರ ಚಿತ್ರವನ್ನು ಮತ್ತೆ ಟ್ವಿಟರ್ ಹ್ಯಾಂಡಲ್‌ನ ಪ್ರೊಫೈಲ್‌ ಚಿತ್ರದಲ್ಲಿ ಅಪ್‌ಲೋಡ್ ಮಾಡಲಾಗಿದೆ. 

Image

ಮುಖ್ಯಮಂತ್ರಿ ಕಚೇರಿಯ ಟ್ವಿಟರ್ ಹ್ಯಾಂಡಲ್ ಹ್ಯಾಕ್ ಆಗಿರುವ ಬಗ್ಗೆ ತಿಳಿದ ಬಳಕೆದಾರರು, ಹ್ಯಾಕಿಂಗ್‌ನ ಸ್ಕ್ರೀನ್‌ಶಾಟ್‌ಗಳನ್ನು ತೆಗೆದು, ಪೊಲೀಸರಿಗೆ ದೂರು ನೀಡಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಿದ್ದಾರೆ. 

ಈ ಹಿಂದೆ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆಯನ್ನು ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದರು. ಪ್ರಧಾನಿಯವರ ಟ್ವಿಟರ್ ಹ್ಯಾಂಡಲ್‌ನಿಂದ ಭಾರತವು "ಅಧಿಕೃತವಾಗಿ ಬಿಟ್‌ಕಾಯಿನ್ ಅನ್ನು ಕಾನೂನುಬದ್ಧಗೊಳಿಸಿದೆ" ಎಂದು ಹ್ಯಾಕರ್‌ಗಳು ಟ್ವೀಟ್ ಮಾಡಿದ್ದರು. ಇದು ಕೆಲವು ಸಮಯದ ಕಾಲ ಜನರನ್ನು ಬೆರಗುಗೊಳಿಸಿತ್ತು.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180