ಕಾಂಗ್ರೆಸ್ ಕಚೇರಿ, ಸೋನಿಯಾ-ರಾಹುಲ್ ಮನೆಗಳಿಗೆ ಪೊಲೀಸ್ ಮುತ್ತಿಗೆ: ಕಾಂಗ್ರೆಸ್ ಆರೋಪ

Congress
  • 'ಭಯೋತ್ಪಾದಕರಂತೆ ಕೇಂದ್ರ ಸರ್ಕಾರ ನಮ್ಮನ್ನು ನೋಡುತ್ತಿದೆ' ಎಂದ ಕಾಂಗ್ರೆಸ್ 
  • ತುರ್ತು ಪತ್ರಿಕಾಗೋಷ್ಠಿ ನಡೆಸಿದ ಹಿರಿಯ ಕಾಂಗ್ರೆಸ್ ನಾಯಕರು

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ‘ಯಂಗ್ ಇಂಡಿಯಾ’ಗೆ ಸೇರಿದ ಆಸ್ತಿಯನ್ನು ವಶಪಡಿಸಿಕೊಂಡು ಸಂಸ್ಥೆಗೆ ಬೀಗ ಜಡಿದ ನಂತರದ ಇತ್ತೀಚೆಗಿನ ಬೆಳವಣಿಗೆಯಲ್ಲಿ ಕಾಂಗ್ರೆಸ್ ಕಚೇರಿ, ಜನ್‌ಪಥ್‌ನಲ್ಲಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ತುಘಲಕ್‌ ಲೇನ್‌ನಲ್ಲಿರುವ ರಾಹುಲ್ ಗಾಂಧಿ ಮನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ.

ಈ ಬಗ್ಗೆ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಜೈರಾಂ ರಮೇಶ್, ಬಿಜೆಪಿ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈರಾಂ ರಮೇಶ್, ಅಜಯ್ ಮೇಕನ್ ಮತ್ತು ಅಭಿಷೇಕ್ ಸಿಂಘ್ವಿ, ಸರ್ಕಾರ ತಮ್ಮ ಪಕ್ಷದ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿದೆ ಎಂದು ಆರೋಪಿಸಿದ್ದಾರೆ. 

“ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಭಯೋತ್ಪಾದಕರು ಎನ್ನುವಂತೆ ಅವರ ಮನೆಯ ಮುಂದೆ ಪೊಲೀಸ್ ನಿಗಾ ಹೇರಲಾಗಿದೆ. ಇಂತಹ ಅಗ್ಗದ, ಕ್ಷುಲ್ಲಕ ರಾಜಕೀಯಕ್ಕೆ ಕಾಂಗ್ರೆಸ್ ಬಗ್ಗುವುದಿಲ್ಲ. ಜನಪರ ವಿಚಾರಗಳನ್ನು ಎತ್ತುವುದನ್ನು ಪಕ್ಷ ಮುಂದುವರಿಸಲಿದೆ” ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ನರೇಂದ್ರ ಮೋದಿ ಆಡಳಿತದ ಈ "ಮುತ್ತಿಗೆ ಮನಸ್ಥಿತಿ"ಯ ಏಕೈಕ ಉದ್ದೇಶವೆಂದರೆ ಒಂದು ಹಂತದಲ್ಲಿ ಅವಮಾನ, ಮತ್ತು ಬೆದರಿಕೆ ಹಾಗೂ ಇನ್ನೊಂದು ಹಂತದಲ್ಲಿ ದಿಕ್ಕು ತಪ್ಪಿಸುವುದು ಮತ್ತು ಸಂವೇದನಾಶೀಲತೆ ಎಂದು ಕಾಂಗ್ರೆಸ್ ಹೇಳಿದೆ.

ಎಐಸಿಸಿ ಕಚೇರಿ ಎದುರು ಪೊಲೀಸರನ್ನು ನಿಯೋಜಿಸಿರುವ ಹಾಗೂ ರಸ್ತೆ ಬಂದ್‌ ಮಾಡಿರುವ ದೃಶ್ಯವುಳ್ಳ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ‘ಪೊಲೀಸರು ಏಕೆ ಹೀಗೆ ಮಾಡಿದ್ದಾರೆ ಎಂಬುದೇ ನಿಗೂಢ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪ್ರತಿಭಟನಾಕಾರರು ಎಐಸಿಸಿ ಕಚೇರಿ ಮುಂದೆ ಸೇರುವ ಬಗ್ಗೆ ಮಾಹಿತಿ ಲಭಿಸಿದೆ. ಹೀಗಾಗಿ ಮುಂಜಾಗ್ರತಾ ದೃಷ್ಟಿಯಿಂದ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್‌ ಮಾಡಲಾಗಿದೆ’ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್