ಒಬಿಸಿಗೆ ಅನ್ಯಾಯ ಮಾಡಿ ಮುಸ್ಲಿಮರಿಗೆ ಮೀಸಲಾತಿ ನೀಡಿದ್ದ ಕಾಂಗ್ರೆಸ್‌; ಶಾಸಕ ಅರವಿಂದ ಬೆಲ್ಲದ್ ಕಿಡಿ

arvind bellad
  • ʼಮುಸ್ಲಿಮರ ಮೀಸಲಾತಿ ತೆಗೆಯಬೇಕೆಂಬ ಆಗ್ರಹ ಹೆಚ್ಚಾಗಿ ಕೇಳಿಬರುತ್ತಿವೆʼ
  • ಸಂವಿಧಾನದಲ್ಲಿ ಜಾತಿ ಆಧಾರಿತ ಮೀಸಲಾತಿ ನೀಡಬೇಕೆಂದಿದೆ : ಬೆಲ್ಲದ್

ಕಾಂಗ್ರೆಸ್ಸಿಗರು ಮುಸ್ಲಿಮರ ಓಲೈಕೆಗಾಗಿ ಮೀಸಲಾತಿ ನೀಡಿದ್ದಾರೆ. ಒಬಿಸಿಗೆ ಆದ ಅನ್ಯಾಯ ಸರಿ ಮಾಡುವ ಕಾಲ ಬಂದಿದೆ. ಹೀಗಾಗಿ ಮುಸ್ಲಿಮರ ಮೀಸಲಾತಿ ತೆಗೆಯಬೇಕೆಂಬ ಆಗ್ರಹ ಹೆಚ್ಚಾಗಿ ಕೇಳಿಬರುತ್ತಿವೆ ಎಂದು ಶಾಸಕ ಅರವಿಂದ ಬೆಲ್ಲದ್ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಮಾತನಾಡಿ, “ದೇಶದಲ್ಲಿ ಒಬಿಸಿ ಸಮುದಾಯಕ್ಕೆ ಬಹಳ ಅನ್ಯಾಯ ಆಗುತ್ತಿದೆ. ಸಂವಿಧಾನದಲ್ಲಿ ಜಾತಿ ಆಧಾರಿತ ಮೀಸಲಾತಿ ನೀಡಬೇಕೆಂದಿದೆ. ಒಬಿಸಿಗೆ ಅನ್ಯಾಯ ಮಾಡಿ ಮುಸ್ಲಿಮರಿಗೆ ಮೀಸಲಾತಿ ನೀಡಲಾಗಿದೆ” ಎಂದು ದೂರಿದರು.

Eedina App

“ಸಂವಿಧಾನದಲ್ಲಿ ಮೀಸಲಾತಿ ವಿಚಾರವಾಗಿ ಜಾತಿ ಆಧಾರಿತವಾಗಿರಬೇಕೋ ಅಥವಾ ಧರ್ಮ ಆಧಾರಿತವಾಗಿರಬೇಕೋ ಎನ್ನುವುದು ಚರ್ಚೆಯಾಗಿದೆ. ಸಂವಿಧಾನದಲ್ಲಿ ಜಾತಿ ಅಧಾರಿತ ಮೀಸಲಾತಿ ನೀಡಬೇಕು ಅನ್ನೋದಿದೆ. ಅದರ ಪ್ರಕಾರ ಮೀಸಲಾತಿ ಕೊಡಬೇಕು. ಆದರೆ, ಕಾಂಗ್ರೆಸ್ ಅಲ್ಪ ಸಂಖ್ಯಾತರ ಒಲೈಕೆಗಾಗಿ ಓಬಿಸಿಗೆ ಅನ್ಯಾಯ ಮಾಡಿ ಮುಸ್ಲಿಂಗೆ ಮೀಸಲಾತಿ ನೀಡಿದೆ” ಎಂದು ಹರಿಹಾಯ್ದರು.

ಸಚಿವ ಸ್ಥಾನದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ

AV Eye Hospital ad

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿ, “ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಸಚಿವ ಸ್ಥಾನ ನೀಡುವುದು ಬಿಡುವುದು ವರಿಷ್ಠರಿಗೆ ಬಿಟ್ಟ ವಿಚಾರ. ನನಗೀಗ 52 ವರ್ಷ, ಇನ್ನೂ 23 ವರ್ಷ ಅವಕಾಶ ಇದೆ. ಸಚಿವ ಸ್ಥಾನದ ಬಗ್ಗೆ ಬಹಳ ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ, ಮೇಲಿನವರು ಎಲ್ಲ ನೋಡುತ್ತಿದ್ದಾರೆ” ಎಂದರು.

ಈ ಸುದ್ದಿ ಓದಿದ್ದೀರಾ? ಎಸ್ಸಿ ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳ ಸುಗ್ರಿವಾಜ್ಞೆಗೆ ರಾಜ್ಯಪಾಲರ ಅಂಕಿತ

ತ್ವರಿತ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ ಸ್ಥಾಪನೆ

“ಧಾರವಾಡದ ಮುಮ್ಮಿಗಟ್ಟಿಯಲ್ಲಿ ಎಫ್ಎಂಸಿಜಿ ಕ್ಲಸ್ಟರ್ (ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳು) ಸ್ಥಾಪನೆ ಪ್ರಕ್ರಿಯೆಗೆ ನಗರದ ಡೆನಿಸನ್ಸ್‌ ಹೋಟೆಲ್‌ನಲ್ಲಿ ಅಕ್ಟೋಬರ್. 28ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಅಂದು 11 ಕಂಪನಿಗಳು ಒಡಂಬಡಿಕೆಗೆ ಸಹಿ ಹಾಕಲಿವೆ” ಎಂದು ತಿಳಿಸಿದರು.

“ದಕ್ಷಿಣ ಭಾರತದಲ್ಲೇ ಇದು ಅತಿ ದೊಡ್ಡ ಎಫ್‌ಎಂಸಿಜಿ ಘಟಕವಾಗಲಿದ್ದು, ಐದಾರು ವರ್ಷಗಳಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿದೆʼ ಕರ್ನಾಟಕ ಎಫ್‌ಎಂಸಿಜಿ ಬಳಕೆಯಲ್ಲಿ ಮುಂಚೂಣಿಯಲ್ಲಿದೆ. ಆದರೆ, ಶೇಕಡಾ 15ರಷ್ಟು ಮಾತ್ರ ದಿನಬಳಕೆ ವಸ್ತುಗಳು ಇಲ್ಲಿ ಉತ್ಪಾದನೆಯಾಗುತ್ತಿದೆ. ಶೇ 85ರಷ್ಟು ವಸ್ತುಗಳನ್ನು ಬೇರೆ ರಾಜ್ಯಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಧಾರವಾಡದಲ್ಲಿ ಕೈಗಾರಿಕೆ ಸ್ಥಾಪಿಸುವ ಕಂಪನಿಗಳು ಐದು ವರ್ಷಗಳಲ್ಲಿ ಎಷ್ಟು ವ್ಯವಹಾರ ನಡೆಸುತ್ತವೋ, ಅಷ್ಟು ಸಬ್ಸಿಡಿ ಪಡೆಯಬಹುದು” ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app