ಸಾರ್ವಜನಿಕ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಹುದ್ದೆಗಳು; ಕೇಂದ್ರದ ನಿಲುವು ಕೋರಿದ ದೆಹಲಿ ಹೈಕೋರ್ಟ್

  • ನ್ಯಾಯಮೂರ್ತಿ ಪ್ರತಿಭಾ ಸಿಂಗ್ ಅವರ ಏಕಸದಸ್ಯ ಪೀಠದಿಂದ ನಿರ್ದೇಶನ
  • 2019ರಿಂದ ದೆಹಲಿಯಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದ ಅರ್ಜಿದಾರರು

ಬೋಧಕ ಹುದ್ದೆಗಳು ಸೇರಿದಂತೆ ಸಾರ್ವಜನಿಕ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ ದೆಹಲಿ ಹೈಕೋರ್ಟ್ ಕೇಂದ್ರದ ನಿಲುವನ್ನು ಕೋರಿದೆ.

ಜನವರಿ 20ರಂದು ದೆಹಲಿಯ ಅಧೀನ ಸಿಬ್ಬಂದಿ ಆಯ್ಕೆ ಮಂಡಳಿಯ (ಡಿಎಸ್‌ಎಸ್‌ಎಸ್‌ಬಿ) ಆನ್ಲೈನ್ ಪೋರ್ಟಲ್‌ನಲ್ಲಿ ದೆಹಲಿಯ ಸರ್ಕಾರಿ ಶಾಲೆಗಳಿಗೆ ಬೋಧಕ ಹುದ್ದೆಗೆ ಅರ್ಜಿ ಸಲ್ಲಿಸುವಾಗ ತೃತೀಯ ಲಿಂಗಿಗಳಿಗೆ ತೃತೀಯ ಲಿಂಗದ ವರ್ಗದಡಿ ಅರ್ಜಿ ಸಲ್ಲಿಸಲು ಅನುಮತಿ ನೀಡಿಲ್ಲ. ಈ ಪ್ರಕರಣದ ಬಗ್ಗೆ ತೃತೀಯ ಲಿಂಗೀಯ ಅಭ್ಯರ್ಥಿಯೊಬ್ಬರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಪ್ರತಿಭಾ ಸಿಂಗ್ ಅವರ ಏಕಸದಸ್ಯ ಪೀಠವು, ಕಕ್ಷಿದಾರರು ಅರ್ಜಿಯಲ್ಲಿ ಪ್ರಸ್ತಾಪಿಸಲಾದ ವಿಷಯ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ.

ಅರ್ಜಿದಾರರು ತನ್ನ ಅಫಿಡವಿಟ್ ದಾಖಲೆಯಲ್ಲಿ ಡಿಎಸ್‌ಎಸ್‌ಎಸ್‌ಬಿಯ ಆನ್ಲೈನ್ ಅಪ್ಲಿಕೇಶನ್ ನೋಂದಣಿ ವ್ಯವಸ್ಥೆಯ ಪೋರ್ಟಲ್‌ನ ಸ್ಕ್ರೀನ್‌ಶಾಟ್‌ ಲಗತ್ತಿಸಿ, ಪುರುಷ ಅಥವಾ ಮಹಿಳೆ ಅಥವಾ ತೃತೀಯಲಿಂಗಿ ಸ್ಥಳವನ್ನು ಸ್ಪಷ್ಟವಾಗಿ ಗುರುತಿಸಲು ಅವಕಾಶ ಇರಿಸಿರುವುದನ್ನು  ತಿಳಿಸಿದ್ದರು. ಈ ವಿಷಯವನ್ನು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಪರಿಗಣಿಸಿದ್ದಾರೆ.

ಆದರೆ ಪೋರ್ಟಲ್‌ನಲ್ಲಿ ತೃತೀಯ ಲಿಂಗಿಯ ಗುರುತಿನೊಂದಿಗೆ ಅರ್ಜಿಯನ್ನು ಮುಂದುವರಿಸಿದರೆ ಅರ್ಜಿ ಸಲ್ಲಿಕೆಯ ಪೂರ್ಣ ಪ್ರಕ್ರಿಯೆಯಾಗಿರುವ ಬಗ್ಗೆ ಅಂತಿಮ ಸುತ್ತೋಲೆ ಮಾಹಿತಿ ದೊರೆಯುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.  

ಈ ಸುದ್ದಿ ಓದಿದ್ದೀರಾ? ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಗೋಹತ್ಯಾ ನಿಷೇಧವೇ ಪರಿಹಾರ : ಗುಜರಾತ್‌ ಸೆಷನ್ಸ್ ನ್ಯಾಯಾಧೀಶ

ತೃತೀಯಲಿಂಗಿಗಳಿಗೆ ಅವಕಾಶ ನೀಡದಿರುವುದು ತಾರತಮ್ಯ ನೀತಿ. ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ, 2019ರ ನಿಬಂಧನೆಗಳ ಉಲ್ಲಂಘನೆ. ಪ್ರತ್ಯೇಕ ತೃತೀಯಲಿಂಗಿ ಹುದ್ದೆಗಳಿಗೆ ಅಧಿಸೂಚನೆಯ ವಿಷಯದಲ್ಲಿ ಅರ್ಜಿದಾರರು ಕೋರಿದ ಪರಿಹಾರ ಮತ್ತು ಅದಕ್ಕೆ ಸಂಬಂಧಿಸಿ ಸರ್ಕಾರದ ನಿಲುವನ್ನು ಪರಿಗಣಿಸಿ ಆರು ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಧೀಶರು ಕೇಂದ್ರಕ್ಕೆ ನಿರ್ದೇಶನ ನೀಡಿದರು.

ಅರ್ಜಿದಾರರು ಬಿಎ, ರಾಜಕೀಯ ವಿಜ್ಞಾನದಲ್ಲಿ ಎಂಎ, ಬಿಎಡ್ ಜೊತೆಗೆ ನರ್ಸರಿ ಶಿಕ್ಷಕರ ತರಬೇತಿಯಲ್ಲಿ ಎರಡು ವರ್ಷಗಳ ಡಿಪ್ಲೊಮಾ ಶಿಕ್ಷಣ ಪಡೆದುಕೊಂಡಿದ್ದಾರೆ. ಅಲ್ಲದೆ, 2019ರಿಂದ ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದರು.

ಜನವರಿ 2, 2020, ಮತ್ತು ಮೇ 12, 2021ರಂದು ಡಿಎಸ್‌ಎಸ್‌ಬಿಯಲ್ಲಿ ಹೊರಡಿಸಲಾದ ನೋಟಿಸ್‌ನಲ್ಲಿ ಪ್ರಾಥಮಿಕ ಮತ್ತು ನರ್ಸರಿ ಹಂತಗಳ ಸಹಾಯಕ ಶಿಕ್ಷಕರ ಹುದ್ದೆಗಳಿಗೆ ಪದವೀಧರರಾದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಉದ್ಯೋಗ ಆಹ್ವಾನಿಸಲಾಗಿತ್ತು. ಆದರೆ ಕೆಲವು ಖಾಲಿ ಹುದ್ದೆಗಳಿಗೆ ತೃತೀಯ ಲಿಂಗಿಗಳನ್ನು ಹೊರಗಿಡಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app