ಕೊನೆಗೂ ಮಹಾರಾಷ್ಟ್ರ ಸಂಪುಟ ರಚನೆ; ಬಿಜೆಪಿ, ಶಿವಸೇನೆಯ ತಲಾ 9 ಶಾಸಕರು ಸಚಿವರಾಗಿ ಪ್ರಮಾಣ

Maharashtra Cabinet Expansion
 • ರಾಜ್ಯಪಾಲ ಭಗತ್‌ ಸಿಂಗ್‌ ಕೊಶಿಯಾರಿ  ಶಾಸಕರಿಗೆ ಪ್ರತಿಜ್ಞಾವಿಧಿ ಬೋಧನೆ
 • ಶಿವಸೇನೆಯ 55 ಶಾಸಕರಲ್ಲಿ ಏಕನಾಥ್‌ ಶಿಂಧೆ ಬಣದಲ್ಲಿ 40 ಶಾಸಕರು

ಮಹಾ ಅಘಾಡಿ ಸರ್ಕಾರವನ್ನು ಮುರಿದ ನಂತರ ಬಿಜೆಪಿ ನೇತೃತ್ವದಲ್ಲಿ ಶಿವಸೇನೆ ಶಾಸಕರು ಏಕನಾಥ ಶಿಂಧೆ ಅವರನ್ನು ಮುಖ್ಯಮಂತ್ರಿಯಾಗಿಸಿ ಸರ್ಕಾರ ರಚಿಸಿದ್ದರೂ, ಸಚಿವ ಸಂಪುಟ ರಚನೆಗೆ ಮುಹೂರ್ತ ಕೂಡಿಬಂದಿರಲಿಲ್ಲ. 

ಮಂಗಳವಾರ (ಆಗಸ್ಟ್‌ 9) ಕೊನೆಗೂ ಶಿಂಧೆ ಸರ್ಕಾರ ತನ್ನ ಸಂಪುಟ ರಚಿಸಿದೆ. ಬಿಜೆಪಿ ಮತ್ತು ಶಿವಸೇನೆಯ ತಲಾ 9 ಶಾಸಕರು ಮುಂಬೈನ ರಾಜಭವನದ ದರ್ಬಾರ್‌ ಹಾಲ್‌ನ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ರಾಜ್ಯಪಾಲ ಭಗತ್‌ ಸಿಂಗ್‌ ಕೊಶಿಯಾರಿ ಅವರು ಶಾಸಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಶಿಂಧೆ ಸರ್ಕಾರ ರಚನೆಯಾಗಿ 40 ದಿನಗಳ ನಂತರ ಸಚಿವ ಸಂಪುಟ ರಚನೆಯಾಗಿದೆ. ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್‌ ಬಿಜೆಪಿ ಹಾಗೂ ಶಿವಸೇನೆಯ ಶಾಸಕರನ್ನು ಆಯ್ಕೆ ಮಾಡಿದ್ದಾರೆ. 

ಪ್ರಮಾಣವಚನ ಸ್ವೀಕರಿಸಿರುವ ಸಚಿವರ ಪಟ್ಟಿ

ಶಿವಸೇನೆ

 1. ದಾದಾಜಿ ಭೂಸೆ- ಸಂಪುಟ ದರ್ಜೆ
 2. ಉದಯ್‌ ಸಮಂತ್‌- ಸಂಪುಟ ದರ್ಜೆ
 3. ಗುಲಾಬರಾವ್‌ ಪಾಟೀಲ್‌- ಸಂಪುಟ ದರ್ಜೆ
 4. ಸಂದೀಪನ್‌ ಭೂಮಾರೆ- ಸಂಪುಟ ದರ್ಜೆ
 5. ಶಂಭುರಾಜ್‌ ದೇಸಾಯಿ
 6. ತಾನಾಜಿ ಸಾವಂತ್‌- ಸಂಪುಟ ದರ್ಜೆ
 7. ಅಬ್ದುಲ್‌ ಸತ್ತಾರ್
 8. ಸಂಜಯ್‌ ರಾಥೋಡ್‌- ಸಂಪುಟ ದರ್ಜೆ
 9. ದೀಪಕ್‌ ವಸಂತ್‌ ಕೇಸರಕರ್

ಬಿಜೆಪಿ

 1. ಚಂದ್ರಕಾಂತ್‌ ಪಾಟೀಲ್‌- ಸಂಪುಟ ದರ್ಜೆ
 2. ಸುಧೀರ್‌ ಮುಗಂತಿವಾರ್‌- ಸಂಪುಟ ದರ್ಜೆ
 3. ಗಿರೀಶ್‌ ಮಹಾಜನ್‌- ಸಂಪುಟ ದರ್ಜೆ
 4. ಸುರೇಶ್‌ ಖಾಡೆ- ಸಂಪುಟ ದರ್ಜೆ
 5.  ರಾಧಾಕೃಷ್ಣ ವಿಖೆ ಪಾಟೀಲ್
 6.  ಮಂಗಲ್‌ ಪ್ರಭಾತ್‌ ಲೋಧಾ
 7.  ರವೀಂದ್ರ ಚವ್ಹಾಣ್- ಸಂಪುಟ ದರ್ಜೆ
 8.  ವಿಜಯ್‌ ಗವಿತ್- ಸಂಪುಟ ದರ್ಜೆ
 9.  ಅತುಲ್‌ ಮೊರೇಶ್ವರ್‌ ಸೇವ್

ಏಕನಾಥ್‌ ಶಿಂಧೆ ಅವರು ತಮ್ಮ ಶಿವಸೇನೆಯ ಬಂಡಾಯ ಶಾಸಕರನ್ನು ಮಂಗಳವಾರ ಬೆಳಿಗ್ಗೆ ಭೇಟಿಯಾಗಿ ಚರ್ಚಿಸಿದ್ದರು. ಶಿವಸೇನೆಯ 55 ಶಾಸಕರಲ್ಲಿ 40 ಮಂದಿ ಶಿಂಧೆ ಬಣದಲ್ಲಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್