ಒಂದು ನಿಮಿಷದ ಓದು| ರಾಷ್ಟ್ರಧ್ವಜವನ್ನು ಹೀನಾಯವಾಗಿ ಎಸೆದ ಬಿಜೆಪಿ: ಕಾಂಗ್ರೆಸ್ ಟೀಕೆ

  • ಗೃಹಸಚಿವರಿಗೆ ಬೂಟು ಹಾಕಿಕೊಳ್ಳಲು ಗಾಂಧಿ ಆಸರೆಯೇ?: ಕಾಂಗ್ರೆಸ್ ಟೀಕೆ
  • ಬಿಜೆಪಿ ರಾಷ್ಟ್ರಕ್ಕೆ ತಗುಲಿದ ವ್ಯಾಧಿಗಳೇ ಹೊರತು ರಾಷ್ಟ್ರವಾದಿಗಳಲ್ಲ

"ರಾಷ್ಟ್ರಧ್ವಜ ಬದಲಿಸುತ್ತೇವೆ ಎಂದಿದ್ದ ಬಿಜೆಪಿ, ಧ್ವಜಕ್ಕೆ ಹತ್ತು ಹಲವು ಬಗೆಯಲ್ಲಿ ಅವಮಾನ ಮಾಡುತ್ತಿದೆ. ರಾಷ್ಟ್ರಧ್ವಜವನ್ನು ಹೀನಾಯವಾಗಿ ಎಸೆಯುವ ಬಿಜೆಪಿ ತಮ್ಮನ್ನು ತಾವು ರಾಷ್ಟ್ರವಾದಿಗಳು ಎಂದು ಕರೆದುಕೊಳ್ಳುವಂತಹ ವ್ಯಂಗ್ಯ ಬೇರಿಲ್ಲ!" ಎಂದು ಕಾಂಗ್ರೆಸ್‌ ಟ್ವೀಟ್ ಮಾಡಿದೆ.

"ಬಿಜೆಪಿಯವರು ರಾಷ್ಟ್ರಕ್ಕೆ ತಗುಲಿದ ವ್ಯಾಧಿಗಳೇ ಹೊರತು ರಾಷ್ಟ್ರವಾದಿಗಳಲ್ಲ. ದೇಶದ್ರೋಹಿ ಆರ್ ಎಸ್‌ ಎಸ್‌ ತತ್ವ ಸಿದ್ಧಾಂತದಂತೆ ಕೆಲಸ ಮಾಡುತ್ತೇನೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ" ಎಂದು ವ್ಯಂಗ್ಯವಾಡಿದೆ.

"ಗೃಹಸಚಿವರ ತವರು ಜಿಲ್ಲೆಯಲ್ಲೇ ನಿರಂತರವಾಗಿ ಗಲಭೆ ನಡೆಯುತ್ತಿದ್ದರೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕನಿಷ್ಠ ಪ್ರಯತ್ನ ಮಾಡದಿರುವುದು ಸಚಿವರ ಅಸಾಮರ್ಥ್ಯವೋ ಅಥವಾ ಕೋಮು ಕಲಹಕ್ಕೆ ನೀಡುತ್ತಿರುವ ಉದ್ದೇಶಪೂರ್ವಕ ಕುಮ್ಮಕ್ಕೊ? ಬಿಜೆಪಿ ಶಿವಮೊಗ್ಗದಲ್ಲಿ ಕೋಮು ರಾಜಕೀಯದ ಪ್ರಯೋಗಶಾಲೆಯ ಬ್ರಾಂಚ್ ತೆರೆದಿರುವಂತಿದೆ" ಎಂದು ಆರೋಪಿಸಿದೆ.

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು | ದಾಖಲೆ ಸೃಷ್ಟಿಸಿದ ಮೆಟ್ರೋ; ಆಗಸ್ಟ್ 15ರಂದು 5.74 ಲಕ್ಷ ಪ್ರಯಾಣಿಕರ ಸಂಚಾರ

ಸಚಿವರಿಂದ ಗಾಂಧೀಜಿಗೆ ಅವಮಾನ

"ಗೃಹಸಚಿವರಿಗೆ ಬೂಟು ಹಾಕಿಕೊಳ್ಳಲು ಗಾಂಧಿ ಆಸರೆಯೇ? ಮಹಾತ್ಮ ಗಾಂಧಿಯವರಿಗೆ ಈ ರೀತಿಯಲ್ಲಿ ಅವಮಾನಿಸುವ ನಿರ್ದೇಶನ ನಾಗಪುರದಿಂದ ಬಂದಿತ್ತೇ ಆರಗ ಜ್ಞಾನೇಂದ್ರ ಅವರೇ?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

"ಕಾನೂನು ಸುವ್ಯವಸ್ಥೆ ನಿರ್ವಹಿಸುವುದನ್ನೂ ತಿಳಿಯದ, ಮಹನೀಯರಿಗೆ ಗೌರವಿಸುವುದನ್ನೂ ಅರಿಯದ ಸಚಿವರು ದೇಶಭಕ್ತಿಯ ಬಗ್ಗೆ ಭಾಷಣ ಬಿಗಿಯುವುದು ಹಾಸ್ಯಾಸ್ಪದ" ಎಂದು ಆಕ್ರೋಶ ವ್ಯಕ್ತಪಡಿಸಿದೆ.

"ತಳ್ಳಿಕೊಂಡು ಹೋಗುತ್ತಿರುವ ಬಿಜೆಪಿ ಸರ್ಕಾರದಲ್ಲಿ ಎಮ್‌ಎಮ್‌ಎಸ್‌ಗಳು ಹೊರಬರುತ್ತಲೇ ಇರುತ್ತವೆ! ಬಿಜೆಪಿ ನಾಯಕರ ಅಶ್ಲೀಲ ಚಿತ್ರಗಳ ಎಮ್‌ಎಮ್‌ಎಸ್‌ಗಳು ಒಂದೆಡೆಯಾದರೆ, ಬಿಜೆಪಿ ಒಳಗಿನ ಕಿತ್ತಾಟದಲ್ಲಿರುವ ಎಮ್‌ಎಮ್‌ಎಸ್‌ಗಳು ಮತ್ತೊಂದೆಡೆ! ಎಮ್‌ ಮುನಿರತ್ನ, ಎಮ್‌ ಮಾಧುಸ್ವಾಮಿ, ಎಸ್‌ ಸೋಮಶೇಖರ್! ಈ ಕಿತ್ತಾಟ ನಿಲ್ಲಿಸಲಾಗದೆ ಕೈಲಾಡುವ ಗೊಂಬೆಯಂತೆ ಮುಖ್ಯಮಂತ್ರಿಯವರು 'ಮ್ಯಾನೇಜ್' ಮಾಡುತ್ತಿದ್ದಾರೆ" ಎಂದು ಕಾಂಗ್ರೆಸ್ ಟೀಕಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್