ತಮಿಳುನಾಡು | ನಾಯಿಗಾಗಿ ₹80,000 ವ್ಯಯಿಸಿ ಪ್ರತಿಮೆ ನಿರ್ಮಿಸಿದ ವೃದ್ಧ

  • ನಾಯಿಯ ನೆನಪಲ್ಲಿ ಸ್ಮಾರಕ ನಿರ್ಮಿಸಿದ 82 ವರ್ಷದ ನಿವೃತ್ತ ಸರ್ಕಾರಿ ನೌಕರ
  • ಅಮೃತಶಿಲೆಯಲ್ಲಿ ಮಾಡಲಾದ ಪ್ರತಿಮೆಗೆ ₹80,000 ಖರ್ಚು 

ನಾಯಿಗಳು ಮನುಷ್ಯನ ಆಪ್ತಸ್ನೇಹಿತರು ಎನ್ನುವ ಹೇಳಿಕೆಯನ್ನು ತಮಿಳುನಾಡಿನ 82 ವರ್ಷದ ನಿವೃತ್ತ ಸರ್ಕಾರಿ ನೌಕರ ನಿಜ ಮಾಡಿದ್ದಾರೆ.

ಸಾವನ್ನಪಿದ ತಮ್ಮ ಪ್ರಿಯ ನಾಯಿಯ ನೆನಪಿಗಾಗಿ ಮುತ್ತು ಅವರು ತಮಿಳುನಾಡಿನ ಶಿವಗಂಗೆಯಲ್ಲಿ ₹80,000 ಖರ್ಚು ಮಾಡಿ ಪ್ರತಿಮೆ ನಿರ್ಮಿಸಿದ್ದಾರೆ. 

ಮುತ್ತು ಅವರು ಮೃತ ನಾಯಿಯನ್ನು ತಮ್ಮ ಮಗುವಿನಂತೆ ನೋಡಿಕೊಳ್ಳುತ್ತಿದ್ದರು ಮತ್ತು ಪ್ರೀತಿಸುತ್ತಿದ್ದರು. ತಮ್ಮ ನಾಯಿಯ ಬಗ್ಗೆ ಮಾತನಾಡಿರುವ ಮುತ್ತು, "ನನ್ನ ಅಜ್ಜಿ ಮತ್ತು ತಂದೆ ಎಲ್ಲರೂ ನಾಯಿ ಪ್ರೇಮಿಗಳು. ಟಾಮ್ (ನಾಯಿ) 2010ರಿಂದ ನನ್ನೊಂದಿಗಿತ್ತು. ಆದರೆ, ಅದು 2021ರಲ್ಲಿ ಸಾವನ್ನಪ್ಪಿತು" ಎಂದು ಹೇಳಿದ್ದಾರೆ. 

Image

ಈ ವರ್ಷದ ಜನವರಿಯಲ್ಲಿ ನಾಯಿ ಸಾವನ್ನಪ್ಪಿತ್ತು. ನಾಯಿಯ ಸಂಸ್ಕಾರ ಮಾಡಿದ ಸ್ಥಳದಲ್ಲಿ ಮುತ್ತು ಸ್ಮಾರಕ ನಿರ್ಮಿಸಿದ್ದಾರೆ. ನಾಯಿಯ ಪ್ರತಿಮೆಯನ್ನು ಅಮೃತಶಿಲೆಯಿಂದ ನಿರ್ಮಿಸಲಾಗಿದೆ.

ಇದನ್ನು ಓದಿದಿರಾ?: ದುಬಾರಿ ದುನಿಯಾ| ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ₹110, ಹೊಸ ದಾಖಲೆ

ನಿತ್ಯವೂ ನಾಯಿಯ ಪ್ರತಿಮೆಗೆ ನೈವೇದ್ಯ ಸಲ್ಲಿಸಲಾಗುತ್ತದೆ. ನಾವು ಶುಭದಿನಗಳಲ್ಲಿ ಮತ್ತು ಪ್ರತಿ ಶುಕ್ರವಾರ ಪ್ರತಿಮೆಗೆ ಹಾರ ಹಾಕಿ ಪೂಜಿಸುತ್ತೇವೆ ಎಂದು ಮುತ್ತು ಅವರ ಪುತ್ರ ಮನೋಜ್ ಕುಮಾರ್ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್